ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ
ಮಡಿಕೇರಿ: ಕಾಫಿ ಕೃಷಿಕರ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕನಾ೯ಟಕ ಬೆಳೆಗಾರರ ಒಕ್ಕೂಟದ ನಿಯೋಗವು ಕೇಂದ್ರದ ವಾಣಿಜ್ಯ ಸಚಿವ ಮತ್ತು ರಸಗೊಬ್ಬರ ಖಾತೆ ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರ ಕುರಿತು ಮನವಿ ಸಲ್ಲಿಸಿದ್ದಾರೆ. ಬೆಳೆಗಾರರಿಗೆ ಅಗತ್ಯವಾಗಿರುವ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕನಾ೯ಟಕದ ಕಾಫಿ ಜಿಲ್ಲೆಗಳ ಸಂಸದರ ನೇತೃತ್ವದಲ್ಲಿನ ಬೆಳೆಗಾರರ ನಿಯೋಗವು ಸಚಿವರನ್ನು ಒತ್ತಾಯಿಸಿದೆ.
ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಪ್ರಧಾನ ಕಾರ್ಯದಶಿ೯ ಮುರಳೀಧರ್ ಎಸ್.ಬಕ್ಕರವಳ್ಳಿ, ಉಪಾಧ್ಯಕ್ಷರಾದ ನಂದಾಬೆಳ್ಳಿಯಪ್ಪ, ಡಿ.ಎಂ.ವಿಜಯ್, ಸಂಘಟನಾ ಕಾರ್ಯದಶಿ೯ ಕೆ.ಕೆ.ವಿಶ್ವನಾಥ್ ಕನಾ೯ಟಕ ಬೆಳೆಗಾರರ ಒಕ್ಕೂಟದ ನಿಯೋಗವು ಸಂಸಸ್ ಸದಸ್ಯರಾದ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಪ್ರಜ್ವಲ್ ರೇವಣ್ಣ, ಪಿ.ಸಿ.ಮೋಹನ್ ಅವರು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಎನ್.ಪಿ.ಕೆ. ಮೈಕ್ರೋನ್ಯೂಟ್ರಿಯಂಟ್ಗಳನ್ನು ಒಳಗೊಂಡಿರುವ ಕಾಫಿ ವಿಶೇಷ ಗೊಬ್ಬರಕ್ಕಾಗಿ ಮನವಿ ಪತ್ರವನ್ನು ಸಲ್ಲಿಸಿ ನಿಯೋಗದಿಂದ ಚಚಿ೯ಸಿತು.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದ ನಿಯೋಗವು ಕಳೆದ ವರ್ಷ ಮಹಾಮಳೆಯಿಂದಾಗಿ ಕಾಫಿ ಬೆಳೆ ಮತ್ತು ಆಸ್ತಿ ಆಗಿದ್ದು ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ನಂತರದ 160 ದಿನಗಳ ಬರಗಾಲದಿಂದಾಗಿ ಮುಂದಿನ ವರ್ಷಗಳಲ್ಲಿ ಬೆಳೆನಷ್ಟವಾಗುವ ಎಲ್ಲಾ ಸಾಧ್ಯತೆಗಳಿದೆ. 26 ವರ್ಷಗಳಿಗೆ ಹೋಲಿಸಿದರೆ ಈಗ ಕಾಫಿ ಬೆಲೆ ಅತ್ಯಂತ ಕಡಮೆಯಾಗಿದೆ. 30 ಜೂನ್ 2019 ಕ್ಕೆ ಅನ್ವಯಿಸುವಂತೆ ಕಾಫಿ ಸಾಲದ ಮೇಲೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ವಾಷಿ೯ಕ 6% ದರದಲ್ಲಿ 7 ವರ್ಷಗಳ ಅವಧಿಗೆ ಎಲ್ಲಾ ಸಾಲಗಳ ಮರುಹೊಂದಾಣಿಕೆ , 3 ವರ್ಷಗಳ ನಿಷೇಧವನ್ನು ನೈಜ ಪ್ರಮಾಣದ ಹಣಕಾಸಿಗಾಗಿ ವಾಷಿ೯ಕ 3% ಧರದಲ್ಲಿ ತಾಜಾ ಸಾಲ( ಕೆಸಿಸಿ) ಕಾಫಿ ಮಂಡಳಿಯ ಸೂಚನೆಯಂತೆ ಪುನನಿಮಾ೯ಣಕ್ಕಾಗಿ ಭೂ ಕುಸಿತ ಕಾಫಿ ತೋಟಕ್ಕೆ ಎಕರೆಗೆ 18 ಲಕ್ಷ ರು ಪರಿಹಾರ ನೀಡುವಂತೆಯೂ ಸಚಿವ ಪಿಯುಶ್ ಗೋಯಲ್ ಅವರಿಗೆ ಬೆಳೆಗಾರರ ಪರವಾಗಿ ಮನವಿ ಮಾಡಲಾಯಿತು.