ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್‌ಗೆ ಬಿಎಸ್‌ವೈ ತಿರುಗೇಟು

ಸಾಲಮನ್ನಾವಾಗದ ರೈತರು ಬೀದಿಗಿಳಿದು ಪ್ರತಿಭಟನೆ ನೆಡಸುತ್ತಿರುವ ಪರಿಣಾಮವೇ ನಿನ್ನೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಗ್ರಾಮವಾಸ್ತವ್ಯಕ್ಕೆ ತೆರಳಿದಾಗ ಅಡ್ಡಿಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ರುದ್ರೇಗೌಡರ ಅಧಿಕೃತ ಕಛೇರಿಯನ್ನ ಉದ್ಘಾಟಿಸಲು ನಗರದ ತಹಶೀಲ್ದಾರ್ ಕಛೇರಿಗೆ ಬಂದಾಗ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರ ಬಳಿ ಹೋಗಿ ಸಮಸ್ಯೆಯನ್ನ ಕೇಳಿ ನಂತರ ಗ್ರಾಮವಾಸ್ತವ್ಯ ನಡೆಸಲಿ ಎಂದು ಸಲಹೆ ನೀಡಿದರು.

ಗ್ರಾಮವಾಸ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು ಬಿಜೆಪಿಯವರು ಎಂಬ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಟ್ವೀಟ್‌ಗೂ ಉತ್ತರ ನೀಡಿದ ಯಡ್ಡಿಯೂರಪ್ಪ, ಕೊಟ್ಟ ಭರವಸೆಯನ್ನ ಈಡೇರಿಸದ ಮುಖ್ಯಮಂತ್ರಿಗಳ ವಿರುದ್ದ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ ಅಥವಾ ಜೆಡಿಎಸ್ ನವರಾಗಲಿ ಅಡ್ಡಪಡಿಸಿಲ್ಲ. ಬರಗಾಲಕ್ಕೆ ತುತ್ತಾದ ಹಾಗೂ ಸಾಲಮನ್ನವಾಗದ ರೈತರು ಪ್ರತಿಭಟನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ನಾವು ಮೊದಲಿನಿಂದಲೂ ಗ್ರಾಮವಾಸ್ತವ್ಯ ಬೇಡ ಮೊದಲು ಜನರ ಬಳಿ ತೆರಳಿ ಸಮಸ್ಯೆಗಳನ್ನ ಆಲಿಸಿ ನಂತರ ಮುಂದುವರೆಯಲಿ ಎಂದು ಹೇಳಿಕೊಂಡುಬರುತ್ತಿದ್ದೇವೆ. ಇದನ್ನ ಸೂಕ್ಷ್ಮವಾಗಿ ಆಲಿಸದ ಮುಖ್ಯಮಂತ್ರಿಗಳು ನಿನ್ನೆ ಜನರ ಮೇಲೆ ಮುಗಿದುಬಿದ್ದಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!