ಜಿಲ್ಲೆಯ 158 ಪರವಾನಿಗೆದಾರರಿಗೆ ಮರಳು ತೆಗೆಯಲು ಅನುಮತಿ
ಉಡುಪಿ:ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಮರಳು ಇಂದು ಸಿಗುತ್ತೆ ,ನಾಳೆ ಸಿಗುತ್ತೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಜನರಿಗೆ ಸಿಹಿ ಶುದ್ಧಿ ಸಿಗುವ ಲಕ್ಷಣ ಗೋಚರಿಸುತ್ತಿದೆ.ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ 7ಜನರ ತಜ್ಞರ ಸಮಿತಿಯು ನಡೆದ ಮರಳಿನ ಸಮಸ್ಯೆಯ ಸಭೆ ಸೇರಿ ಉಡುಪಿ ಜಿಲ್ಲೆಯ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದು, ಅದರಲ್ಲಿ 158 ಜನ ಪರವಾನಿಗೆ ದಾರರಿಗೆ ಅನುಮತಿ ಸಿಕ್ಕಿದೆ. ನಾಳೆಯಿಂದ ಗಣಿ ಇಲಾಖೆ ಯ ಅಧಿಕಾರಿಗಳು ಈ ಲೀಸ್ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆಂದು ತಿಳಿದುಬಂದಿದೆ. ಈ ಹಿಂದೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಸೆ.20 ಒಳಗೆ ಜಿಲ್ಲೆಯ ಜನತೆಗೆ ಮರಳು ನೀಡುವ ಭರವಸೆ ನೀಡಿದ್ದರು.