” ನಮ್ಮ ಶಾಲೆ, ನಮ್ಮ ತೋಟ ” ಯೋಜನೆಯಲ್ಲಿ ನೂತನ ತರಕಾರಿ ತೋಟ ನಿರ್ಮಾಣ
ಒಂದು ಶಾಲೆಯ ಶಿಕ್ಷಕರು ಆಸಕ್ತರಾಗಿದ್ದರೆ ಅವರಿಗೆ ಹಳೆ ವಿದ್ಯಾರ್ಥಿಗಳು, ಪೋಷಕರು ಕೂಡ ಸಾಥ್ ನೀಡುತ್ತಾರೆ ಎನ್ನುವುದು ಸತ್ಯ…
ಸ.ಹಿ.ಪ್ರಾ. ಶಾಲೆ, ಸೂರ್ಗೋಳಿಯಲ್ಲಿ ಇಂದು ಎಸ್.ಡಿ.ಎಂ.ಸಿ ಮತ್ತು ಪೋಷಕರ ಪರಿಷತ್ತು, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಮ್ಮ ಶಾಲೆ ನಮ್ಮ ತೋಟ ಯೋಜನೆಯಲ್ಲಿ ನೂತನ ತರಕಾರಿ ತೋಟ ನಿರ್ಮಾಣ ಮಾಡಲಾಯಿತು.
ಅಂದಾಜು 5 ಸೆಂಟ್ಸ್ ಸ್ಥಳವನ್ನು ಉಳುಮೆ ಮಾಡಿ ಜೈವಿಕ ಬೇಲಿ ನಿರ್ಮಿಸಿ. ಬದನೆ, ಬೆಂಡೆ, ಹೀರೆ, ಸುವರ್ಣ, ಸೋರೆ ಗಿಡಗಳನ್ನು ನೆಡಲಾಯಿತು. ಪೋಷಕರು ಸ್ವಯಂ ಸೇವಕರಾಗಿ ತೋಟವನ್ನು ನಿರ್ಮಿಸಿದರು.
ಕುಂದಾಪುರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಎ. ಸಂಜೀವ ನಾಯ್ಕ್ ರವರ ಉಪಸ್ಥಿತಿಯಲ್ಲಿ ಗಿಡ ನೀಡುವುದರ ಮೂಲಕ ಚಾಲನೆ ನೀಡಲಾಯಿತು. ತಾಲೂಕು ಪಂಚಾಯತ್ ಸದಸ್ಯ ಶ್ರೀ ಚಂದ್ರಶೇಖರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಶೆಟ್ಟಿ, ಶ್ರೀ ರಮೇಶ್ ಹಾಲಂಬಿ, ನಾಗರಾಜ್ ನಕ್ಕತ್ತಾಯ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.
ಶ್ರೀ ಪ್ರಕಾಶ್ ಅಲ್ಸೆ ಬೇಲಿ ಸಾಮಗ್ರಿಗಳನ್ನು, ಶೇಖರ್ ನಾಯ್ಕ್ ಸೆಟ್ಟೊಳ್ಳಿ ಪೈಪ್ ಲೈನ್ ಕೊಡುಗೆ, ಎಸ್. ಡಿ. ಎಂ. ಸಿ ಅಧ್ಯಕ್ಷ ಬಾಬಣ್ಣ ಸೂರ್ಗೊಳಿ ಮತ್ತು ಸೂರ್ಯ ನಾಯ್ಕ್ ರಿಂದ ಸಾಗಾಟ ವೆಚ್ಚ, ಚಂದ್ರ ಶೇಖರ ನಾಯ್ಕ್ ಗೊಬ್ಬರವನ್ನು ಕೊಡುಗೆಯಾಗಿ ನೀಡಿದರು. ಪೋಷಕರಾದ ಕೃಷ್ಣ ನಾಯ್ಕ್, ಸದಾಶಿವ, ಚಂದ್ರ ನಾಯ್ಕ್, ನಾರಾಯಣ ನಾಯ್ಕ್, ಸತೀಶ್, ಬಾಬಣ್ಣ ನಾಯ್ಕ್, ಕೃಷ್ಣ ನಾಯ್ಕ್, ಮೋಹನ್ ನಾಯ್ಕ್, ವೆಂಕಟೇಶ್ ನಾಯ್ಕ್, ಲಕ್ಷ್ಮಣ ನಾಯ್ಕ್, ಸಂಜೀವ ನಾಯ್ಕ್, ಪುಟ್ಟಯ್ಯ ನಾಯ್ಕ್, ಸುರೇಶ್ ನಾಯ್ಕ್, ಮುಂತಾದವರು ಸ್ವಯಂ ಸೇವಕರಾಗಿ ಸಹಕರಿಸಿದರು.
ಶಿಕ್ಷಕರಾದ ಶ್ರೀ ದೇವ ನಾಯ್ಕ್, ಶ್ರೀ ಶ್ರೀನಿವಾಸ್, ಶ್ರೀಮತಿ ನಾಗರತ್ನ, ಶ್ರೀಮತಿ ವನಿತಾ, ಕುಮಾರಿ ಆಶಾ ಸಹಕರಿಸಿದರು. ಮುಖ್ಯ ಶಿಕ್ಷಕ ಶ್ರೀ ಸದಾನಂದ ನಾಯಕ್ ವಂದಿಸಿದರು.