ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಪ್ರಮೋದ್ ಹೆಗ್ಡೆ ಮಂದಾರ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಸುವರ್ಣ ಬೊಳ್ಜೆ  ಆಯ್ಕೆ
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಾಂತ ಬೈಠಕ್ ಶನಿವಾರ ಮತ್ತು ಅದಿತ್ಯವಾರ  ಚಿಕ್ಕಬಳ್ಳಾಪುರದ ಕೈವಾರ ತಾತಯ್ಯ ದೇವಸ್ಥಾನದಲ್ಲಿ ನಡೆಯಿತು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ಕಾರ್ಯಕರ್ತರು ಆಗಮಿಸಿದ್ದರು.
ವಿಲಾಸ್ ನಾಯಕ್ ಅವರಿಂದ ತೆರವಾದ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಪ್ರಾಂತ ಕಾರ್ಯಾಧ್ಯಕ್ಷರಾದ ಪ್ರೊ. ಎಂ ಡಿ ಪುರಾಣಿಕ್ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಪ್ರಮುಖ ಕೇಶವ ಹೆಗ್ಡೆ , ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಪ್ರಾಂತ ಕಾರ್ಯದರ್ಶಿ ಬಸವರಾಜ್ ಜಿ, ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್ ಮತ್ತು ಹಲವಾರು ಪ್ರಮುಖರ ಸಮ್ಮುಖದಲ್ಲಿ ನಡೆದ ಬೈಠಕ್ ನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೂತನ ಜವಾಬ್ದಾರಿಗಳನ್ನು ಘೋಷಿಸಲಾಯಿತು. ವಿಶ್ವ  ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಪ್ರಮೋದ್ ಹೆಗ್ಡೆ ಮಂದಾರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಸುವರ್ಣ ಬೊಳ್ಜೆ, ಮಠ ಮಂದಿರಗಳ ಪ್ರಮುಖ್ ರಾಗಿ ರಮೇಶ್ ಕಲ್ಲೊಟ್ಟೆ, ಸಾಪ್ತಾಹಿಕ ಪ್ರಮುಖ್ ರಾಗಿ ಜಗದೀಶ್ ಕೊಲ್ಲೂರು, ಗೋರಕ್ಷಕ ಪ್ರಮುಖ್ ರಾಗಿ ಉಮೇಶ್ ನಾಯ್ಕ್ , ಗ್ರಾಮಾಂತರ ಬಜರಂಗದಳದ ಸಂಚಾಲಕರಾಗಿ ಅನಿಲ್ ಅತ್ರಾಡಿ ಅವರಿಗೆ ನೂತನ ಜವಾಬ್ದಾರಿ ನೀಡಲಾಗಿದೆ.

ಜಿಲ್ಲೆಯ ಸಂಘಟನಾ ಪ್ರಮುಖರಾದ ದಿನೇಶ್ ಶೆಟ್ಟಿ ಹೆಬ್ರಿ, ಮಹೇಶ್ ಬೈಲೂರು, ಸುಧೀರ್ ನಿಟ್ಟೆ  ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!