ಶ್ರೀಕೃಷ್ಣನ ನಾಡಿನಲ್ಲಿ ಲೋಕಾರ್ಪಣೆಗೊಂಡ ‘ಉಡುಪಿ ಟೈಮ್ಸ್’
ಮಾಧ್ಯಮ ಸಮಾಜದ ಕಣ್ಣು. ಇದರ ಮೂಲಕ ಸಮಾಜದ ಆಗುಹೋಗುಗಳು ಮಾತ್ರವಲ್ಲದೆ ಅಭಿವೃದ್ಧಿ ಕೆಲಸಗಳು ಜನರಿಗೆ ತಲುಪುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮದ ಕೊಡುಗೆ ವಿಶೇಷವಾದುದು.
ಶ್ರೀಕೃಷ್ಣನ ನಾಡಿನಲ್ಲಿ ಈಗಷ್ಟೇ ಲೋಕಾರ್ಪಣೆಗೊಂಡಿರುವ ‘ಉಡುಪಿ ಟೈಮ್ಸ್’ ಕನ್ನಡ ಅಂತರ್ಜಾಲ ಮಾಧ್ಯಮವೂ ಸಾಧ್ಯವಾದಷ್ಟು ಒಳ್ಳೆಯ ಕೊಡುಗೆಯನ್ನು ಕೊಡುವುದರೊಂದಿಗೆ, ಈ ಸಂಸ್ಥೆ ಬೆಳೆಯಲಿ, ಶ್ರೀಕೃಷ್ಣ ಅನುಗ್ರಹ ಇರಲಿ ಎಂದು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಶುಭ ಹಾರೈಸಿದರು. ನೂತನ ಕನ್ನಡ ಅಂತರ್ಜಾಲ ಮಾಧ್ಯಮ ,ಉಡುಪಿ ಟೈಮ್ಸ್, ರೆಹಮಾನ್ ಕಾಂಪ್ಲೆಕ್ಸ್ ನ 2 ನೇ ಮಹಡಿಯಲ್ಲಿ ಉಡುಪಿ ಟೈಮ್ಸ್ ನ ನೂ ತನ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯದ ಪ್ರಧಾನ ಧರ್ಮಗುರುಗಳು ವಂದನೀಯ ಫಾ. ಆಲ್ಬನ್ ಡಿಸೋಜ ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು. ‘ಉಡುಪಿ ಟೈಮ್ಸ್’ ನೂತನ ಕನ್ನಡ ಅಂತರ್ಜಾಲ ಮಾಧ್ಯಮವನ್ನು, ಉಡುಪಿ ಸಿಟಿ ಸೆಂಟರ್ ಮಾಲಕರಾದ ಜಮಲುದ್ದೀನ್ ಅಬ್ಬಾಸ್ ರವರು ವೆಬ್ ಸೈಟ್ ಬಿಡುಗಡೆಗೊಳಿಸಿದರು.. ಈ ಸಂದರ್ಭ ಅರ್ಚಕರಾದ ಪುರುಷೋತ್ತಮ ಹೊಳ್ಳ ಅರ್ಶಿವಚಿಸಿದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಉಡುಪಿ ಟೈಮ್ಸ್ ನಡೆಸಿದ ‘ಸೆಲ್ಫಿ ಸ್ಪರ್ಧೆ’ಯಲ್ಲಿ ವಿಜೇತರಾದ ರಾಯನ್ ಫೆರ್ನಾಡಿಸ್ ಶಂಕರಪುರ ರವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ವಂದನೀಯ ಫಾ. ಜೇಮ್ಸ್, ಫಾ. ಫ್ರಾನ್ಸಿಸ್ ಪಿಂಟೋ, ಜೇಸಿಯ ಭಾರತದ ಫೌಂಡೇಶನ್ ಡೈರೇಕ್ಟರ್ ಜೇಸಿ ವೈ ಸುಕುಮಾರ್, ಪೂರ್ವ ರಾಷ್ಟ್ರೀಯ ಉಪಾದ್ಯಕ್ಷ ಜೇಸಿ ಸದಾನಂದ ನಾವಡ, ರಾಷ್ಟ್ರೀಯ ನಿರ್ದೇಶಕರಾದ ಜೆಸಿ ಸಂದೀಪ್, ಜೇಸಿ ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು , ನ್ಯಾಯವಾದಿ ಗಿರೀಶ್ ಎಸ್. ಪಿ, ಉದ್ಯಮಿ ಗೀರಿಶ್ ಐತಾಳ್ ಮತ್ತಿತರರು ಭಾಗವಹಿಸಿ, ನೂತನ ಮಾಧ್ಯಮಕ್ಕೆ ಶುಭ ಹಾರೈಸಿದರು. ಕೃಷ್ಣ ನಗರಿಯಲ್ಲಿ ಉತ್ಸಾಹಿ ಯುವ ಮನಸ್ಸುಗಳ ಹೊಸ ಪ್ರಯತ್ನವೇ ಈ “ಉಡುಪಿ ಟೈಮ್ಸ್” ವೆಬ್ ಸೈಟ್
ಲೋಕ ಸಭಾ ಚುನಾವಣಾ ಸಂದರ್ಭದಲ್ಲಿ ಬೆರಳಿನ ಮೇಲೆ ಶಾಹಿ ಗುರುತಿನ ಸೆಲ್ಫಿ ಸ್ಪರ್ಧೆಯಾ ಮೂಲಕ ಜನ ಮೆಚ್ಚುಗೆ ಗಳಿಸಿದ ಈ ವೆಬ್ ಸೈಟ್ ಕರಾವಳಿ , ರಾಜ್ಯ , ರಾಷ್ಟ್ರೀಯ ಹೀಗೆ ಬೇರೆ- ಬೇರೆ ಪ್ರಾಮಾಣಿಕ ಸತ್ಯ ಸುದ್ದಿ ಗಳನ್ನು ನಿಮ್ಮ ಮುಂದೆ ಬಿತ್ತರಿಸಲು “ಉಡುಪಿ ಟೈಮ್ಸ್” ತಂಡ ಸಜ್ಜಾಗಿದೆ.
ನೀವು ಈ ವೆಬ್ ಸೈಟ್ ನ್ನು www.udupitimes.com ಮೂಲಕ ಪಡೆಯಬಹುದು . ಅರೋಗ್ಯ , ಹಣಕಾಸು, ರಾಜಕೀಯ, ಅಪರಾಧ ಲೋಕದ ಸುದ್ದಿಗಳು ಮತ್ತು ಸಿನಿ ಲೋಕದ ಆಗು ಹೋಗುಗಳು ಈ ವೆಬ್ ಸೈಟ್ ನಲ್ಲಿ ಲಭ್ಯವಿದೆ
ಉಡುಪಿ ಟೈಮ್ಸ್, ಆಡಳಿತ ಮಂಡಳಿಯ ಅಕ್ಷತಾ ಗಿರೀಶ್ ಸ್ವಾಗತಿಸಿದರೆ , ಸೋನಿಯಾ ಯವರು ಅತಿಥಿಗಳಿಗೆ ಹೂ ಗುಚ್ಚವನ್ನ ನೀಡಿದರು, ನಿತೇಶ್ ರಾವ್ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.