ಬಾ ಮಳೆಯೇ ಓ ಮಳೆಯೇ
ಬಾ ಮಳೆಯೇ ಓ ಮಳೆಯೇ
ಇಳೆಯ ಒಡಲು ಒಡೆದು ಕಾಯುತಿದೆ
ಬಾ ಮಳೆಯೆ ಓ ಮಳೆಯೆ ಎನ್ನುತಿದೆ
ಭೂಮಿ ತಾಯಿಗೆ ಹಸಿರಿನ ಸೀರೆಯನುಡಿಸು ಬಾ
ರೈತನ ಹಸಿದ ಒಡಲ ತಣಿಸು ಬಾ
ಜೀವ ಜಂತುಗಳ ಜೀವ ಕುಣಿಸು ಬಾ
ಬೆಟ್ಟದ ಮೇಲೆ ಕಟ್ಟೆಯ ನಡುವಿನ ಮರಗಿಡಗಳ ಉಳಿಸು ಬಾ
ಅವನಿಯ ಬೇಗೆಯ ಆರಿಸು ಬಾ
ದೇಶ ಉಳಿಸುವ ಜೀವ ಕಾಯುವ ಕೃಷಿಕನ ಸಂತುಷ್ಟಿಗೊಳಿಸು ಬಾ
ವರುಣ ನಾಮದಿ ಕರುಣೆ ಉಳ್ಳ ನಿನ್ನ ಸ್ಮರಿಪ ಜನರ ಮರಣ ನೀಗು ಬಾ
ಪರ್ಜನ್ಯ ನಾಮದಿ ಪುರಜನರ ಪೊರೆಯುವ ಪನ್ನೀರ ಹನಿಯಾಗಿ ಬಾ
ಬಾ ಮಳೆಯೇ ಓ ಮಳೆಯೇ
ಇಳೆಯ ಒಡಲಿಗೆ ಸಿರಿಯಾಗಿ ಬಾ
✍ಗೌರೀಶ್ ಆವರ್ಸೆ