ನಾನ್ ಸ್ಟಾಪ್ ಬಸ್ ನಲ್ಲಿ ನಾನ್ ಸ್ಟಾಪ್ ಕಿಸ್ಸಿಂಗ್

ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಯುವ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿ, ಸರಸ ಸಲ್ಲಾಪದಲ್ಲಿ ತೊಡಗಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ,ಜೋಡಿ ಬಗ್ಗೆ ಸುದ್ಧಿಯೋ ಸುದ್ಧಿ .

ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳಿಬ್ಬರು ಪರಸ್ಪರ ಕಿಸ್ ಮಾಡುವ ವಿಡಿಯೋ ವೈರಲ್ ಆಗಿದೆ. ಪ್ರೇಮಿಗಳು ಬಸ್‍ನಲ್ಲಿ ಅಕ್ಕ-ಪಕ್ಕ ಕುಳಿತು ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬನ ನೀಡುತ್ತಾ ಮೈ ಮರೆತಿದ್ದಾರೆ. ಜೋಡಿ ಕುಳಿತಿದ್ದ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಸಹ ಪ್ರಯಾಣಿಕರೊಬ್ಬರು ಪ್ರೇಮಿಗಳು ವರ್ತನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದಾರೆ.

ಈ ಜೋಡಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಈ ರೀತಿ ಅಸಭ್ಯವಾಗಿ ವರ್ತಿಸಿದರೆ ಸಹ ಪ್ರಯಾಣಿಕರು ಮುಜುಗರಕೊಳ್ಳಗಾಗುತ್ತಾರೆ. ಬಸ್ ನಲ್ಲಿ ಮಕ್ಕಳು ಸಹ ಪ್ರಯಾಣ ಮಾಡುತ್ತಿರುತ್ತಾರೆ. ಇಂತಹ ಘಟನೆಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 thought on “ನಾನ್ ಸ್ಟಾಪ್ ಬಸ್ ನಲ್ಲಿ ನಾನ್ ಸ್ಟಾಪ್ ಕಿಸ್ಸಿಂಗ್

Leave a Reply

Your email address will not be published. Required fields are marked *

error: Content is protected !!