ನಿಟ್ಟೆ ಪಿಡಿಓ ಮರುವರ್ಗಾವಣೆ ವಿಚಾರದಲ್ಲಿ ಬಿಜೆಪಿಯಲ್ಲಿ ಒಳಜಗಳ

ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಪಂಚಾಯತ್‌ನಲ್ಲಿ 3 ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ 2 ತಿಂಗಳಿನ ಹಿಂದೆ ಬೇರೆ ಕಡೆ ವರ್ಗಾವಣೆ ಮಾಡಿ ಇದೀಗ ಮತ್ತೆ ಅವನ್ನೇ ನಿಟ್ಟೆ ಪಂಚಾಯತ್‌ಗೆ ಮರು ವರ್ಗಾವಣೆ ಮಾಡುತ್ತಿರುವ ವಿಷಯವನ್ನು ವಿರೋಧಿಸಿ ಸ್ಥಳೀಯರು ನಿಟ್ಟೆ ಪಂಚಾಯತ್ ಆವರಣದಲ್ಲಿ ಜಮಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ವರ್ಗಾವಣೆಯ ವಿಚಾರದಲ್ಲಿ ಬಿಜೆಪಿಯ ಒಂದು ತಂಡ ಶಾಸಕರ ಮೂಲಕ ಒತ್ತಡಹೇರಿ ಅವ್ಯವಹಾರದ ಆರೋಪ ಕೇಳಿಬಂದಿರುವ ವ್ಯಕ್ತಿಯನ್ನೇ ಮರುನೇಮಿಸಲು ಆಗ್ರಹಿಸಿರುವುದನ್ನು ಖಂಡಿಸಿ ಬಿಜೆಪಿಯ ಇನ್ನೊಂದು ತಂಡ ಇದನ್ನು ವಿರೋಧಿ ಸ್ಥಳೀಯರ ಪ್ರತಿಭಟನೆ ಬೆಂಬಲ ನೀಡಿದ್ದು, ಇದು ಬಿಜೆಪಿಯ ಎರಡು ತಂಡಗಳ ನಡುವೆ ತೀವೃ ಜಟಾಪಟಿಗೆ ಕಾರಣವಾಗಿದೆ.

ನಿಟ್ಟೆ ಪಿಡಿಓ ಮಾಧವ ರಾವ್ ದೇಶಪಾಂಡೆ ನಿಟ್ಟೆ 3 ವರ್ಷಗಳಿಂದ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಕಳೆದ 2 ತಿಂಗಳ ಹಿಂದೆ ಅವರನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ಕುಕ್ಕುಂದೂರು ಪಿಡಿಓ ಸುಧಾಕರ್ ಶೆಟ್ಟಿಯವರನ್ನು ನೇಮಿಸಲಾಗಿತ್ತು.

ಆದರೆ ಹಿಂದಿನ ಪಿಡಿಓ ಮಾಧವ ರಾವ್ ದೇಶಪಾಂಡೆ ಪಂಚಾಯಿತಿಯಲ್ಲಿ ಕೆಲವೇ ಪ್ರಭಾವೀ ವ್ಯಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದರು, ಇದಲ್ಲದೇ ಸಾರ್ವಜನಿಕ ಕೆಲಸದಲ್ಲಿಯೂ ಅವರ ಬಗ್ಗೆ ಅವ್ಯವಹಾರದ ದೂರುಗಳಿದ್ದು ಇಂತಹ ಆರೋಪ ಹೊಂದಿರುವ ವ್ಯಕ್ತಿಯನ್ನು ಸ್ಥಳೀಯ ಕೆಲ ಪ್ರಭಾವೀ ವ್ಯಕ್ತಿಗಳ ಶಿಫಾರಸ್ಸಿನ ಮೇರೆಗೆ ಮತ್ತೆ ಮರುವರ್ಗಾವಣೆಗೊಳಿಸಲಾಗಿದೆ.

ಸಾರ್ವಜನಿಕರ ತೀವೃ ವಿರೋಧದ ನಡುವೆಯೂ ಮತ್ತೆ ಅವರನ್ನೇ ವರ್ಗಾವಣೆಗೊಳಿಸಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ತಕ್ಷಣವೇ ಈ ವರ್ಗಾವಣೆಯನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಅಲ್ಲದೇ ವರ್ಗಾವಣೆಯನ್ನು ರದ್ದುಪಡಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದ್ದಾರೆ.


ನಿಟ್ಟೆ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ, ಕ್ರಶರ್ ಮುಂತಾದ ಉದ್ಯಮ ನಡೆಸುತ್ತಿರುವ ರಾಜಕೀಯ ಹಿನ್ನಲೆಯುಳ್ಳ ವ್ಯಕ್ತಿಗಳಿಗೆ ಪಿಡಿಓ ಮಾಧವ ರಾವ್ ದೇಶಪಾಂಡೆ ಆತ್ಮೀಯನಾಗಿದ್ದ, ಈ ಹಿನ್ನಲೆಯಲ್ಲಿ ಆತನೇ ಮತ್ತೆ ಅಧಿಕಾರದಲ್ಲಿದ್ದರೆ ತಮ್ಮ ವ್ಯವಹಾರಕ್ಕೂ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಆತನನ್ನು ಮರುವರ್ಗಾವಣೆಗೊಳಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!