ನಾರಾಯಣ ಗುರು ಜಯಂತಿಗೆ ಉಡುಪಿ ಸಂಸದೆ, ಶಾಸಕರಿಂದ ಅವಮಾನ

ಉಡುಪಿ- ಉಡುಪಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪಾಲ್ಗೊಳದೇ ಇರುವುದು ಬಿಲ್ಲವ ಸಮಾಜಕ್ಕೆ ಅತ್ಯಂತ ಬೇಸರದ ಸಂಗತಿ

ಚುನಾವಣೆ ಸಂದರ್ಭದಲ್ಲಿ ಬಿಲ್ಲವರ ಮತ ಬ್ಯಾಂಕ್ ಉದ್ದೇಶವನ್ನಿಟ್ಟುಕೊಂಡು ಓಲೈಕೆ ಮಾಡುವ ಈ ಜನಪ್ರತಿನಿಧಿಗಳ ನೈಜ ಅಂತರಂಗ ಹೇಗೆ ಎಂಬುದು ಅವರ ಗೈರುಹಾಜರಿಯಲ್ಲಿ ಸಾಬೀತಾಯಿತು ಎಂದು ಬಿಲ್ಲವ ಪರಿಷತ್ ಅಧ್ಯಕ್ಷರಾದ ನವೀನ್ ಅಮೀನ್ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಕಾರ್ಯಕ್ರಮವಾಗಿ ಜರಗುವ ಉಳಿದೆಲ್ಲಾ ಸಂತ ಮಹನೀಯರುಗಳ ಜನ್ಮ ದಿನಾಚರಣೆಗಳಿಗಿಂತ ನಾರಾಯಣ ಗುರು ಜಯಂತಿಗೆ ತೋರಿದ ಅಸಡ್ಡೆಯು ಪ್ರಶ್ನಾರ್ಹವಾಗಿದೆ. ಸರಳ ಸಜ್ಜನಿಕೆಯ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿರುವುದಕ್ಕೆ ಜನ ಸಾಮಾನ್ಯರ ಎಲ್ಲರೂ ಸಂತಸ ಮತ್ತು ಹೆಮ್ಮೆ ಪಡುತ್ತಿದ್ದರೆ ನಮ್ಮ ಜಿಲ್ಲೆಯ ಶಾಸಕರುಗಳು ಮಾತ್ರ ಒಳಗಿಂದೊಳೊಗೆ ಅಸಮಾಧಾನದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ನಾರಾಯಣ ಗುರು ಜಯಂತಿಯು ಕೋಟ ಶ್ರೀನಿವಾಸ ಪೂಜಾರಿ ಯವರು ಉದ್ಘಾಟನೆಯೊಡನೆ ನೆರವೇರಲಿರುವುದರಿಂದ ದೂರ ಉಳಿದು ಅಸಹಕಾರ ನೀಡೋಣವೆನ್ನುವ ಧೋರಣೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ಪೂರಕವೆನ್ನುವಂತೆ ಕೋಟ ಶ್ರೀನಿವಾಸ ಪೂಜಾರಿ ಯವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗುವುದು ಬೇಡವೆಂದು ಉಡುಪಿ ಜಿಲ್ಲೆಯ ಕೆಲವು ಶಾಸಕರುಗಳ ಸಹಿಯೊಂದಿಗಿನ ಅಧಿಕೃತ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿರುವ ಸಂಗತಿಯು ಖಂಡನಾರ್ಹ, ಓರ್ವ ಆದರ್ಶ ರಾಜಕಾರಣಿ ಸೇವಾ ಮನೋಭಾವ ,ನೀಡಲಾಗಿರುವ ಸಚಿವ ಸ್ಥಾನಮಾನವನ್ನು ಕೇವಲ ಬಿಲ್ಲವ ಸಮುದಾಯದ ಸಂಘಟನಾತ್ಮಕ ನಿಲುವು ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಪರವಾಗಿರುತ್ತದೆ.
ಈ ತರಹದ ಬೆಳವಣಿಗೆಯು ಬಹು ಸಂಖ್ಯಾತ ಬಿಲ್ಲವರ ಮತದಿಂದ ಆಯ್ಕೆಯಾದ ಶಾಸಕರುಗಳ ಘನತೆಗೆ ಶೋಭೆಯಲ್ಲ, ಸೌಹಾರ್ದ, ಸಹಬಾಳ್ವೆ ಬಯಸುವ ಬಿಲ್ಲವ ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಜನಪ್ರತಿನಿಧಿಗಳ ಧೋರಣೆಯ ವಿರುದ್ಧವಾಗಿ ಪ್ರತಿಭಟನೆ ಇಲ್ಲವೆ ಮತ ಬಹಿಷ್ಕಾರದಂತಹ ಸೂಕ್ತ ಸಂದರ್ಭಕ್ಕೆ ನಾವು ಸಿದ್ದರಿದ್ದೇವೆ. ತಮ್ಮ ತಮ್ಮ ಅಧಿಕಾರ ಲಾಲಸೆಯಲ್ಲಿ ಸಮಸ್ತ ಬಿಲ್ಲವ ಸಮಾಜದ ಹಿತಾಸಕ್ತಿಗೆ ಯಾವತ್ತೂ ತೊಂದರೆಯಾಗದಂತೆ ಸಹಕರಿಸುವುದು ಎಲ್ಲ ಜನಪ್ರತಿನಿಧಿಗಳ ಕರ್ತವ್ಯವಾಗಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಭಾಕರ್ ಪಾಲನ್ , ಚಂದ್ರಹಾಸ ಕೋಟ್ಯಾನ್, ಮಹಿಳಾ ಘಟಕಾಧ್ಯಕ್ಷೆ ಆಶಾ ಕಟಪಾಡಿ, ಮಹೇಶ್ ಪೂಜಾರಿ, ಉಪಾಧ್ಯಕ್ಷರಾದ ಬದ್ರಿನಾಥ್ ಸನಿಲ್, ರಮೇಶ್ ಅಂಚನ್, ವಿನೋದ್ ಅಮೀನ್ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!