ಸಾಲಿಗ್ರಾಮ:ಜೀವ ಬಲಿಗಾಗಿ ಕಾಯುತ್ತಿರುವ ನಾಯ್ಕನ ಬೈಲ್ ಸೇತುವೆಗೆ ಮುಕ್ತಿಯೆಂದು?

ಸಾಲಿಗ್ರಾಮ: ಇದು ಕೆಸರು ತುಂಬಿ, ಸದಾ ನೀರು ಹರಿಯುತ್ತಿರುವ ಹೊಳೆ. ಇದಕ್ಕೆ ಅಡ್ಡಲಾಗಿ ತಾತ್ಕಾಲಿಕವಾಗಿ ಮರದ ಕಂಬಗಳನ್ನು ನೆಟ್ಟು ಮರದ ಸೇತುವೆ ಮಾಡಲಾಗಿತ್ತು. ಸೇತುವೆಯ ಸಂಪರ್ಕಕ್ಕೆ ಎರಡು ಕಡೆ ರಸ್ತೆ ನಿರ್ಮಾಣನು ಆಯ್ತು. ಅದರೆ ದಶಕಗಳು ಕಳೆದರು ಸೇತುವೆ ಮಾತ್ರ ಪಕ್ಕಾ ಆಗಿಲ್ಲ ಇದು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಯ್ಕನ ಬೈಲ್ ನ ಸೇತುವೆಯ ಶೋಚನೀಯ ಪರಿಸ್ಥಿತಿ . ನಿತ್ಯವು ವಿದ್ಯಾರ್ಥಿಗಳು ಊರಿನವರು ದೈನಂದಿನ ಅಗತ್ಯಕ್ಕಾಗಿ ಜೀವ ಕೈಯಲ್ಲಿ ಹಿಡಿದು ಹೊಳೆ ದಾಟುತ್ತಿದ್ದರು ಇದುವರೆಗೆ ಇದಕ್ಕೆ ಮುಕ್ತಿ ಸಿಕ್ಕಿಲ್ಲ…

ಈ ಸೇತುವೆ ನಿರ್ಮಾಣದ ಭರವಸೆ ನೀಡುತ್ತಾ ಸ್ಥಳೀಯ ಜನಪ್ರತಿನಿದಿಗಳು ಈಗಾಗಲೇ ಮೂರು ನಾಲ್ಕು ಚುನಾವಣೆ ಜಯಸಿದ್ದಾರೆ. ಆದರೆ ಜಯಗಳಿಸಿ ಬಳಿಕ ಮಾತ್ರ ಈ ಸೇತುವೆಯ ಕಡೆ ತಿರುಗಿ ಕೂಡ ನೋಡಿಲ್ಲ. ಇಲ್ಲಿಯ ಜನರ ಸಮಸ್ಯೆ ಓಟು ಬ್ಯಾಂಕ್ ಆಗಿ ಕಂಡಿದ್ದು ಬಿಟ್ಟರೆ ದಶಕದ ಬೇಡಿಕೆಗೆ ಇದುವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲಾ.

ಈ ಸೇತುವೆ ಇರುವುದು ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ರಾಷ್ಟ್ರೀಯ ಹೆದ್ದಾರಿ ೬೬ರ ಪಶ್ಚಿಮಕ್ಕೆ, ತೊಡ್ಕಟ್ಟು ಮತ್ತು ಪಾರಂಪಳ್ಳಿ ಮಧ್ಯದಲ್ಲಿ. 1952 ರಲ್ಲಿ ಡಾ. ಕೋಟ ಶಿವರಾಮ ಕಾರಂತ ಸಹೋದರ ಕೋಟ ಲಕ್ಷ್ಮೀ ಕಾರಂತರಿಂದ ಸೀತಾನದಿಯ ಉಪನದಿಯಾದ ತೊಡ್ಕಟ್ಟು ನಾಯ್ಕನಬೈಲು ಹೊಳೆಗೆ ಸಂಚಾರರ ಉದ್ದೇಶಕ್ಕೆ ಮರದ ಸೇತುವೆಗೆ ಶಂಕು ಸ್ಥಾಪನೆ ಮಾಡಿದ್ರು. ಹೊಳೆಯಲ್ಲಿ ಮರದ ಕಂಬಗಳನ್ನು ನೆಟ್ಟು ತೋಡ್ಕಟ್ಟ್ಟು ಹೊಳೆಗೆ ಅಡ್ಡಲಾಗಿ 70 ಮೀ.ಉದ್ದ, 1 ಮೀ. ಅಗಲದ ಮರದ ಸೇತುವೆ ಕಟ್ಟಲಾಗಿತ್ತು. ಪಡುಕೆರೆಯ ನಿವಾಸಿಗಳು ದೈನಂದಿನ ಕೆಲಸಕಾರ್ಯಗಳಿಗೆ ಸಾಲಿಗ್ರಾಮಕ್ಕೆ ಬರಬೇಕಾದರೆ ವಾಹನದ ಮೂಲಕ 8 ಕಿ.ಮೀ. ಸುತ್ತಿ ಬಳಸಿ ಬರಬೇಕು. ಈ ಮರದ ಸೇತುವೆ ನಿರ್ಮಾಣವಾದ ಮೇಲೆ ಪಾರಂಪಳ್ಳಿ ಪಡುಕೆರೆ ನಿವಾಸಿಗಳಿಗೆ ಸಾಲಿಗ್ರಾಮ ಕೇವಲ 2 ಕಿ.ಮೀ.ಗಳಿಗೆ ಸೀಮಿತಗೊಳಿಸಿ ಸಮಯ ಮತ್ತು ಹಣ ಉಳಿಸುವ ಮಾರ್ಗವಾಗಿ ಸ್ಥಳೀಯರ ಒಡನಾಡಿಯಾಗಿ ಹಲವು ವರ್ಷದಿಂದ ನಿಂತಿದ್ದ ಮರದ ಸೇತುವೆ ಮಳೆ , ಗಾಳಿ ಬಿಸಿಲಿಗೆ ಸಿಲುಕಿ ಶಿಥಿಲಗೊಂಡಿದೆ.

ದಿನದ ದುಡಿಮೆಗೆಂದು ತೆರಳುವವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಮರದ ಸೇತುವೆಯನ್ನೇ ಆಶ್ರಯಿಸಿದ್ದು, ಪಡುಕರೆ ಜನರಿಗೆ ಈ ಸೇತುವೆವೊಂದು ಸಂಪರ್ಕ ಕೊಂಡಿಯಾಗಿದೆ. ಶೀಘ್ರದಲ್ಲಿ ಈ ಮರದ ಸೇತುವೆಯ ಜಾಗದಲ್ಲಿ ಸುದೃಢ ದೊಡ್ಡ ಸೇತುವೆಯೊಂದನ್ನು ನಿರ್ಮಿಸಬೇಕೆನ್ನುವುದು ಇಲ್ಲಿಯ ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ. ಹಲವು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ತೋಡ್ಕಟ್ಟು ಹೊಳೆಯ ಮರದ ಸೇತುವೆಯ ಮೂಲಕ ಸಂಚರಿಸುವ ಸ್ಥಳೀಯರು ಜೀವವನ್ನು ಕೈಯಲ್ಲಿ ಹಿಡಿದು ದಡ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಯ ವೇಳೆಯಲ್ಲಿ ಸೇತುವೆಯನ್ನು ನಿರ್ಮಿಸುವ ಭರವಸೆಯನ್ನು ನೀಡುತ್ತಾ ಓಟು ಕೇಳುವ ಜನಪ್ರತಿನಿಧಿಗಳು ಚುನಾವಣೆಯ ಬಳಿಕ ಈ ಕಡೆ ತಲೆ ಹಾಕಿ ಮಲಗುವ ಗೋಜಿಗೆ ಹೋಗುದಿಲ್ಲ. ದೊಡ್ಡ ದೊಡ್ಡ ವಾಹನಗಳು ಸಾಲಿಗ್ರಾಮದಿಂದ ಪಡುಕರೆಗೆ ಬರಬೇಕಾದರೆ 8 ಕಿ.ಮೀ.ಸುತ್ತು ಬಳಸಿ ತಲುಪಬೇಕಿದೆ. ಸೇತುವೆಯಾಗುವ ಮೊದಲೇ ಪಾರಂಪಳ್ಳಿ ಪಡುಕರೆ ಭಾಗದಲ್ಲಿ ಸುಸಜ್ಜಿತವಾದ ರಸ್ತೆಯೊಂದನ್ನು ನಿರ್ಮಿಸಿದ್ದು, ಅದು ಸಂಪರ್ಕವಿಲ್ಲದೇ ಹಾಗೇ ಉಳಿದಿದೆ. ಈ ಬಾರಿ ಸೇತುವೆ ಹೊಳೆ ಪಾಲಾಗುವ ಸೂಚನೆಗಳಿದೆ.

ಚುನಾವಣೆ ಬಂದಾಗ ರಾಜಕೀಯ ನಾಯಕರು ಸೇತುವೆಯನ್ನು ನೋಡಿ ಬೇಕಾಗುವಷ್ಟು ಆಶ್ವಾಸನೆ ಕೊಟ್ಟು , ಸೂಕ್ತ ವ್ಯವಸ್ಥೆಯ ಭರವಸೆ ನೀಡಿ, ಮತ ಪಡೆದು ಮಾಯವಾಗುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಂಬಂಧಪಟ್ಟವರನ್ನು ಸಂಪರ್ಕಿಸಿ ಶಾಶ್ವತ ಸೇತುವೆ ಕಲ್ಪಿಸುವ ವ್ಯವಸ್ಥೆಯ ಬಗ್ಗೆ ಯಾವುದೇ ಮನಸ್ಸು ಮಾಡುತ್ತಿಲ್ಲ. ರೈತರು ದೇಶದ ಬೆನ್ನೆಲುಬು ಎನ್ನುವ ನಮ್ಮ ಜನನಾಯಕರು ನಮ್ಮ ಕೃಷಿಗೆ ಭೂಮಿಗೆ ಸಂಪರ್ಕ ಕಲ್ಪಿಸುವ ಮರದ ಸೇತುವೆಯನ್ನು ಶಾಶ್ವತ ಸೇತುವೆ ಮಾಡುವ ಬಗ್ಗೆ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬುದೇ “ಉಡುಪಿ ಟೈಮ್ಸ್” ನ ಆಶಯ


ವಿ ಸೂನಿಮ್ಮ ಊರಲ್ಲಿ ಮೂಲಭೂತ ಸಮಸ್ಯೆಗಳಿದ್ದಲ್ಲಿ ಫೋಟೋ ಹಾಗು ದೂರಿನ ಪ್ರತಿಯೊಂದಿಗೆ 9110230843 ನಂಬರ್ ಗೆ WHATS APP ಮಾಡಿ

Leave a Reply

Your email address will not be published. Required fields are marked *

error: Content is protected !!