ಸಾಲಿಗ್ರಾಮ:ಮಾ.22 ಶ್ರೀ ಗುರುನರಸಿಂಹ ದೇವಳ ಆಡಳಿತ ಮಂಡಳಿ ಚುನಾವಣೆ

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಮುಂದಿನ 5 ವರ್ಷಗಳ ನೂತನ ಆಡಳಿತಮಂಡಳಿಗೆ ಮಾರ್ಚ್ 22 ರಂದು ಚುನಾವಣೆ ನಡೆಯಲಿದೆ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಚುನಾವಣಾ ಪ್ರಕ್ರಿಯೆಗಳು ನಡೆಯಲಿದೆ. ವಕೀಲ ಅನಂತಪದ್ಮನಾಭ ಐತಾಳ. ಕೆ ಸ್ಪರ್ದಿಸಲಿದ್ದಾರೆ ., ಆಡಳಿತ ಮಂಡಳಿಗೆ ಚುನಾವಣೆ ಮಾ.22ರಂದು ಅನಂತಪದ್ಮನಾಭ ಐತಾಳ ಕೆ.ಹಲಸಿನಕಟ್ಟೆ ದೇವಳದ ವಠಾರದಲ್ಲಿ ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ನಡೆಯಲಿದೆ. ಒಟ್ಟು 9 ಸ್ಥಾನಗಳಲ್ಲಿ ೩ ಸ್ಥಾನಕ್ಕೆ ಅವಿರೋಧ ಆಯ್ಕೆ ಈಗಾಗಲೇ ಆಗಿದ್ದು ಉಳಿದ 6 ಸ್ಥಾನಕ್ಕೆ ಸ್ಪರ್ಧೆ ನಡೆಯಲಿದ್ದು 14 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಮತ ಕ್ಷೇತ್ರ ಸಂಖ್ಯೆ 3 ರಲ್ಲಿ ದ.ಕ. ಜಿಲ್ಲೆಯಿಂದ ಸದಾಶಿವ ಪಿ ., ಮತಕ್ಷೇತ್ರ 4 ರಲ್ಲಿ ಬೆಂಗಳೂರು ಕಾರ್ಪೊರೇಷನಿಂದ ಶ್ರೀಧರ ಕಾರಂತ ಎ, ವಿ, ಮತ ಕ್ಷೇತ್ರ 6 ರಲ್ಲಿ ಹೊರ ರಾಜ್ಯದಿಂದ ಶ್ರೀಧರ್ ರಾವ್ ಎಂ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಮತಕ್ಷೇತ್ರ ೧ ರ ಸಾಲಿಗ್ರಾಮದಿಂದ ನ್ಯಾಯವಾದಿ ಅನಂತ ಪದ್ಮನಾಭ ಐತಾಳ್ ಕೆ , ಅನಂತ ಪದ್ಮನಾಭ ಐತಾಳ್ ಹಲಸಿನಕಟ್ಟೆ , ಚಂದ್ರಶೇಖರ ಉಪಾಧ್ಯ ಜಿ., ತಾರಾನಾಥ ಹೊಳ್ಳ ,ಪರಶುರಾಮ ಭಟ್, ಪ್ರಸನ್ನ ತುಂಗ, ರಾಘವೇಂದ್ರ ಮಧ್ಯಸ್ಥ , ರಾಜೇಶ್ ಉಪಾಧ್ಯ, ಲಕ್ಷ್ಮೀನಾರಾಯಣ ತುಂಗ, ಸುಬ್ರಹ್ಮಣ್ಯ ಹೇರ್ಳೆ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು 4 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಮತಕ್ಷೇತ್ರದ ೫ ರ ಕರ್ನಾಟಕ ರಾಜ್ಯದ ೧ ಸ್ಥಾನಕ್ಕಾಗಿ ಗಣೇಶ್ ಮೂರ್ತಿ ನಾವಡ ಕೆ ಎಸ್, ನಾಗಭೂಷಣ ಹೊಳ್ಳ ಎಸ್.ಜೆ. ಹಾಗೂ ಮತಕ್ಷೇತ್ರ ಸಂಖ್ಯೆ 2 ರ ಉಡುಪಿ ಜಿಲ್ಲೆಯ 1 ಸ್ಥಾನಕ್ಕಾಗಿ ಪ್ರಕಾಶ ಕಾರಂತ , ಡಾ ಸೀತಾರಾಮ ಕಾರಂತ ಸ್ಪರ್ಧಾ ಕಣದಲ್ಲಿದ್ದಾರೆ.
ಮುಖ್ಯ ಚುನಾವಣಾಕಾರಿ ಕಾರಂತ ಎ.ವಿ., ಮತ ಕ್ಷೇತ್ರ ಸಂಖ್ಯೆ 6ರಲ್ಲಿ ಯಾಗಿ ರಾಮಕೃಷ್ಣ ಐತಾಳ್, ಸಹಾಯಕ ಚುನಾವಣಾಧಿಕಾರಿಯಾಗಿ ಸಿ ಮಂಜುನಾಥ ಉಪಾಧ್ಯ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ..

Leave a Reply

Your email address will not be published. Required fields are marked *

error: Content is protected !!