ಮಹಿಳೆಯ ಕೊಲೆ ಮಾಡಿ ದರೋಡೆ ಪ್ರಕರಣ : ಐವರ ಬಂಧನ

ಮಂಗಳೂರು : ಮನೆ ಒಂದರಲ್ಲಿ ದರೋಡೆ ನಡೆಸಿ ಹತ್ಯೆ ಮಾಡಿ ಮತ್ತು ಅದೇ ಪರಿಸರದಲ್ಲಿ ಕೆಲವು ಮನೆಗಳಲ್ಲಿ ದರೋಡೆ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು  ಮೂಲ್ಕಿ ಪೊಲೀಸರು ಬಂಧಸಿದ್ದಾರೆ.

ಮೂಲ್ಕಿ ಠಾಣಾ ವ್ಯಾಪ್ತಿಯ 2017 ರಲ್ಲಿ ಐಕಳ ಸುಧಾಮ ಶೆಟ್ರ ಮನೆಯಲ್ಲಿ ದರೋಡೆ ಮಾಡಿ ಅವರ ಧರ್ಮಪತ್ನಿಯಾದ ವಸಂತಿ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿದ  ಹಾಗೂ ಪಕ್ಷಿಕೆರೆ ಕುಪ್ಪು ಸ್ವಾಮಿ ಪತ್ನಿಯ ಚಿನ್ನವನ್ನು ಲೂಟಿಮಾಡಿದ ಹಾಗೂ ಕೊಲ್ನಾಡ್ ಪ್ರಭಾಕರ್ ಶೆಟ್ರ ಮನೆಯಲ್ಲಿ ಅವರ ಹೆಂಡತಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ದರೋಡೆಯನ್ನು ಮಾಡಿದ ಕುಖ್ಯಾತ ದರೋಡೆಕೋರರಾದ ಶೌಕತ್ ಆಲಿ ಮತ್ತು ಆತನ ಸಹಚರರಾದ ಐದು ಮಂದಿಯನ್ನು ಬಂಧಿಸಿದ ಮೂಲ್ಕಿಯ ಠಾಣಾಧಿಕಾರಿ ಅನಂತ ಪದ್ಮನಾಭ ಅವರ ನೇತ್ರತ್ವದ ಪೊಲೀಸ್ ತಂಡ ಬಂಧಿಸಿದೆ.

ಕಾಪಿಕಾಡು ಕುಪ್ಪು ಸ್ವಾಮಿ ಪತ್ನಿಗೆ ಹಲ್ಲೆಗೈದು ಚಿನ್ನಾಭರಣ ದರೋಡೆ ಮಾಡಿದ ದುಷ್ಕರ್ಮಿಗಳನ್ನು ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ, ಆದರೆ
ಕುಪ್ಪು ಸ್ವಾಮಿ ಹ್ರದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಬಂಧಿತ ಆರೋಪಿಗಳಾದ ಶೌಖತ್ ಅಲಿ ಬಜ್ಪೆ,ಅನ್ಸಾರ್ ಯಾನೆ ಅಂನ್ಚು ಕೊಲ್ನಾಡ್,ಮೇಘರಾಜ್ ಹಳೆಯಂಗಡಿ,ಜಾಕಿರ್ ಹುಸೇನ್ ಬಿ.ಸಿ.ರೋಡ್,ಅನ್ಸಾರ್ ಪಡುಬಿದ್ರಿ. ಅದರಲ್ಲಿ ಒಬ್ಬ ಬಾಲ ಅಪರಾಧಿ ಕೂಡ ಇದ್ದಾನೆ. ಇನ್ನೂ ಕೆಲವು ಆರೋಪಿಗಳ ಬಂಧನ ಬಾಕಿ ಇದೆ ಎಂದು ತಿಳಿದು ಬಂದಿದೆ.ಆರೋಪಿಗಳು ಮುಲ್ಕಿ, ಹಳೆಯಂಗಡಿ, ಕಿನ್ನಿಗೋಲಿ ಪರಿಸರದಲ್ಲಿ ನಡೆದ ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ಬಂಧಿತ ಆರೋಪಿಗಳ‌ ವಿಚಾರಣೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!