ಮುನಿಯಾಲು ಉದಯ ಕುಮಾರ್ ಶೆಟ್ಟಿಗೆ:ಬಿಸಿನೆಸ್ ಐಕಾನ್ ಪ್ರಶಸ್ತಿ

ಉಡುಪಿ – ಇ.ಟಿ ಬಿಸಿನೆಸ್ ಐಕಾನ್ 2019 ಪ್ರಶಸ್ತಿ ಉಡುಪಿಯ ರಾಜಕಾರಣಿ ಮತ್ತು ಗುತ್ತಿಗೆದಾರ, ಮುನಿಯಾಲು ಉದಯ ಕುಮಾರ್ ಶೆಟ್ಟಿಯವರಿಗೆ ಒಲಿದಿದೆ.

ಭಾರತದ ಅತ್ಯಂತ ಜನಪ್ರಿಯ ಮತ್ತು ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ಸಂಮೂಹ, ಬೆನೆಟ್ ಮತ್ತು ಕೋಲ್ಮನ್ ಸಮೂಹವು, ಉಡುಪಿ ಮೂಲದ ರಾಜಕಾರಣಿ ಮತ್ತು ಗುತ್ತಿಗೆದಾರ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಇ.ಟಿ ಬಿಸಿನೆಸ್ ಐಕಾನ್ 2019 ಅನ್ನು ನೀಡಿ ಗೌರವಿಸಿದೆ..


2019 ಸಾಲಿನ ಕೈಗಾರಿಕಾ ಮತ್ತು ಕಲ್ಯಾಣ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ಗಾಗಿ ಅವರನ್ನು ವಿಜೇತರಾಗಿ ಆಯ್ಕೆ ಮಾಡಲಾಯಿತು..

ಉದಯ ಶೆಟ್ಟಿ ಅವರ ವ್ಯವಹಾರ ಮತ್ತು ಸಾಮಾಜಿಕ ಕಲ್ಯಾಣ ಚಟುವಟಿಕೆಗಳಿಗೆ ನೀಡಿದ ಅಸಾಧಾರಣ ಆರ್ಥಿಕ ಸಹಾಯಕ್ಕಾಗಿ ಸಂಘಟಕರು ಸನ್ಮಾನಿಸಿದರು.ಸೆಪ್ಟೆಂಬರ್ 19 ರ ಗುರುವಾರ ಬೆಂಗಳೂರಿನ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಬಾಲಿವುಡ್ ನಟಿ ರವೀನಾ ಟಂಡನ್‌ ಸ್ಟಾರ್ ಸ್ಟಡ್ಡ್ ನಲ್ಲಿ ಮುನಿಯಾಲ್ ರಿಗೆ ಪ್ರಶಸ್ತಿ ನೀಡಿದರು,,

ಉದಯ್ ಶೆಟ್ಟಿ ಈಗ ಉಡುಪಿ ಜಿಲ್ಲೆಯಿಂದ ಪ್ರತಿಷ್ಠಿತ ‘ಎಕನಾಮಿಕ್ ಟೈಮ್ಸ್ ಮತ್ತು ಬಿಸಿನೆಸ್ ಐಕಾನ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ” ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರು ಹಾಗು ಬಂಟ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!