ಮೋದಿ- ಮತ್ತೊಂದು ದಿಟ್ಟ ಹೆಜ್ಜೆ

ಉಡುಪಿ – ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಶಾಲ ದೃಷ್ಟಿಕೋನದ ವಿಶೇಷ ಹಜ್ಜೆಯೊಂದನ್ನಿಟ್ಟು ಮಾದರಿಯಾಗುತ್ತಿದ್ದಾರೆ. ಕಳೆದ 5 ವರ್ಷಗಳು ಮತ್ತು ವಿಶೇಷವಾಗಿ ಎರಡನೇ ಅವಧಿಯ ಸುಮಾರು 100ದಿನಗಳಲ್ಲಿ ತನ್ನ ನೇತೃತ್ವದ ಕೇಂದ್ರ ಸರಕಾರವು ಕಾಶ್ಮೀರದಲ್ಲಿ ಅಸ್ತ್ವಿತ್ವದಲ್ಲಿದ್ದ 370 ನೇ ವಿಧಿ ರದ್ದತಿಯ ಐತಿಹಾಸಿಕ ಕ್ರಮಗಳೂ ಸೇರಿದಂತೆ ಇಡುತ್ತಿರುವ ಹೆಜ್ಜೆಗಳು ಮತ್ತು ಮುಂದೆಸಾಗಬೇಕಾದ ದಾರಿ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಈ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ವರ್ತುಲದ ಅಮೂಲ್ಯ ಚಿಂತಕರು ಮತ್ತು ಸಾಧಕರಿಂದಲೇ ಮೌಲ್ಯ ಮಾಪನ‌ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ತನ್ನ ಮಂತ್ರಿ ಮಂಡಲದ ಸದಸ್ಯರುಗಳನ್ನು ಇಡೀ ದೇಶದಲ್ಲಿರುವ ಬೌದ್ಧಿಕ ಧೀಮಂತರ ಮನೆಗೆ ಕಳಿಸುತ್ತಿದ್ದಾರೆ.


ಅದರ ಅನ್ವಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಮಂತ್ರಿ ಡಿ ವಿ ಸದಾನಂದ ಗೌಡರು ಶನಿವಾರ ವಾರ ಉಡುಪಿಯಲ್ಲಿ ಸಾಹಿತ್ಯ ಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅಮೂಲ್ಯ ಸಾಧಕರುಗಳಾದ ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದ ಪಂಡಿತಾಚಾರ್ಯ , ನಿವೃತ್ತ ಪ್ರಾಚಾರ್ಯ ,ಸಾಹಿತಿ ಉದ್ಯಾವರ ಮಾಧವಾಚಾರ್ಯ ,ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರೊ. ಶಂಕರ್ ಉದಯವಾಣಿ ಬಳಗದ ಮುಖ್ಯಸ್ಥ ಗೌತಮ್ ಪೈ ಮತ್ತು ಉದ್ಯಮಿ , ದಾನಿ ಹರಿಯಪ್ಪ ಕೋಟ್ಯಾನ್ ಅವರ ಮನೆಗಳಿಗೆ ಭೇಟಿ ನೀಡಿ ಅವರನ್ನು ಕೇಂದ್ರ ಸರಕಾರದ ಪರವಾಗಿ ಸಂಮಾನಿಸಿದರು .ಬಳಿಕ ತನ್ನ ಭೇಟಿಯ ಉದ್ದೇಶವನ್ನು ವಿವರಿಸಿ ಅವರಿಂದ ಸಲಹೆ ಸೂಚನೆಗಳನ್ನು ಕೋರಿದರು.


ಈ ಸಂದರ್ಭದಲ್ಲಿ ಮಾತಾಡಿದ ಗೋವಿಂದಾಚಾರ್ಯರು ಮೋದಿ ಮುಂದೆಯೂ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿರಬೇಕು ,ಕಾಶ್ಮೀರದ 370 ನೇ ವಿಧಿ ರದ್ದು ಮೋದಿ ಸರಕಾರದ ಅದ್ಭುತ ಸಾಧನೆಯೇ ಸರಿ‌. ಬೇರಾರಿರಿಂದಲೂ ಇದು ಸಾಧ್ಯವಿರಲಿಲ್ಲ…ಅವರಿಗೆ ಸಲಹೆ ಕೊಡಬೇಕಾದ ಅವಶ್ಯಕತೆ ಕಾಣುತ್ತಿಲ್ಲ.

ಅಂಥಹ ದೂರದೃಷ್ಟಿ ಅವರಿಗಿದೆ.ಅವರಿಗೆ ಶುಭವಾಗಲೆಂದು ಹಾರೈಸುತ್ತೇನಷ್ಟೆ ಎಂದರು.ಜೊತೆಗೆ ರಾಜ್ಯದ ಇತ್ತೀಚಿನ ಭೀಕರ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಉತ್ತಮ ಪರಿಹಾರದ ನೆರವು ನೀಡಬೇಕೆಂದು ಹೇಳಿ ಒಂದು ಕ್ಷಣ ಭಾವುಕರಾದರು. ತಾನು ಬರೆದ ಕೃತಿಗಳನ್ನು ಇಬ್ಬರೂ ಸಾಹಿತಿಗಳು ಸದಾನಂದ ಗೌಡರಿಗೆ ನೀಡಿದರು. ಮತ್ತೊಬ್ಬ ಸಾಹಿತಿ ಉದ್ಯಾವರ ಮಾಧವಾಚಾರ್ಯರು ” ಈ ಉತ್ತಮ ಸಾಧನೆಗಳ ಉತ್ಸಾಹದಲ್ಲಿ ಮೋದಿಯವರು ಇತರ ರಾಜ್ಯಗಳ ಜನರ ಬವಣೆಗಳಿಗೆ ಪರಿಹಾರ ಒದಗಿಸುವುದನ್ನು ಕಡೆಗಣಿಸಬಾರದು .ಮತ್ತು ಜಮ್ಮು ಕಾಶ್ಮೀರದ ಜನಜೀವನದ ಪುನರ್ನಿರ್ಮಾಣದ ಹೊತ್ತಿನಲ್ಲಿ ಅಲ್ಲಿನ ಬದುಕಿಗೆ ಬೇಸರ ದುಃಖಪಟ್ಟು ಅಲ್ಲಿಂದ ಓಡಿಬಂದು ದೇಶದ ವಿವಿಧ ಬಾಗಗಳಲ್ಲಿ ಹರಿದು ಹಂಚಿಹೋಗಿ ಅಷ್ಟಿಷ್ಟು ನೆಲೆ ಕಂಡುಕೊಂಡಿರುವ ಅಲ್ಲಿನ ಮೂಲ ನಿವಾಸಿಗಳು ಮತ್ತೆ ಅಲ್ಲಿ ಸುಖೀ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ಮೊದಲ ಆದ್ಯತೆ ನೀಡಬೇಕೆಂದು ಕಿವಿ‌ಮಾತು ಹೇಳಿದರು. ಅಷ್ಟೇ ಅಲ್ಲದೆ ಕಾಶ್ಮೀರದ ಅಭಿವೃದ್ದಿಗಾಗಿ ದಕ್ಷಿಣ ಭಾಗದ ರಾಜ್ಯದ ತೆರಿಗೆ ಕಾಶ್ಮೀರ ಅಭಿವೃದ್ದಿಗಾಗಿ ಹಾಕಿದರೆ ಇಲ್ಲಿನ ಜನ ಸಮಸ್ಯೆ ಎದುರಿಸಬೇಕಾಗುತ್ತದೆ.. ಕಾರವಾರ ಬೆಂಗಳೂರು ರೈಲು ಸಂಚಾರದಲ್ಲಿ ಅನೇಕ ಸಮಸ್ಯೆಗಳನ್ನು ಎದಿರುಸುತ್ತಿದ್ದು ಅದೆಲ್ಲವೂ ನಿವಾರಣೆಯಾಗಬೇಕು ಎಂದು ವಿಜ್ಞಾಪಿಸಿದರು
ಗೌತಮ್ ಪೈ ಯವರು ,ಕಳೆದ ನಾಲ್ಕೈದು ವರ್ಷಗಳಲ್ಲಿ ಅನೇಕ ಕಾರಣಗಳಿಂದ ಉದ್ಯಮ ರಂಗ ವಿಪರೀತ ನಷ್ಟವನ್ನು ಎದುರಿಸುವಂತಾಗಿದೆ. ಆದರೆ ಗಾಯದ ಮೇಲೆ ಬರೆ ಎಂಬಂತೆ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳು ಉದ್ಯಮಿಗಳ ಮೇಲೆ ನಡೆಸುತ್ತಿರುವ ವಿಪರೀತ ಒತ್ತಡಗಳಿಂದಾಗಿ ಉದ್ಯಮಿಗಳು ಬವಣೆ ಪಡುವಂತಾಗಿ ಕೆಲವರು ಉದ್ಯಮವನ್ನು ಮುಚ್ಚಿ ವಿದೇಶಕ್ಕೆ ತೆರಳಿ ಬದುಕು ಕಂಡುಕೊಳ್ಳುವ ನಿರ್ಧಾರಕ್ಕೆ ಬರುತ್ತಿದ್ದಾರೆ.ಇದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆಯಲ್ಲ…ಈ ಬಗ್ಗೆ ತುರ್ತು ಗಮನ ಹರಿಸಿ ಉದ್ಯಮಿಗಳಿಗೆ ಸಹಕಾರವಾಗುವ ವಾತಾವರಣ ಸೃಷ್ಟಿ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕರಾದ ಕೆ ರಘುಪತಿ ಭಟ್ ,ಲಾಲಾಜಿ ಮೆಂಡನ್ ,ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ , ಪ್ರ ಕಾರ್ಯದರ್ಶಿ ಪ್ರವೀಣ್ ಕಪ್ಪೆಟ್ಟು ,ಮುಖಂಡರುಳಾದ ಸಂಧ್ಯಾ ರಮೇಶ್ ,ಪ್ರಭಾಕರ ಪೂಜಾರಿ ,ರವಿ ಅಮೀನ್ ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು . ಸಾಣೂರು ನರಸಿಂಹ ಕಾಮತ್ , ಪೂರ್ಣಿಮಾ ನಾಯಕ್ ,ವಾಸುದೇವ ಭಟ್ ಪೆರಂಪಳ್ಳಿಯವರು ಮಂತ್ರಿಗಳ ಈ ಮನೆ ಮನೆ ಭೇಟಿ ಸಂಯೋಜಿಸಿದ್ದರು.

Leave a Reply

Your email address will not be published. Required fields are marked *

error: Content is protected !!