ಪೂರ್ಣಪ್ರಜ್ಞಾ ಕಾಲೇಜು ಹಳೆವಿದ್ಯಾರ್ಥಿ ಸಂಘದಿಂದ ಮೋಟಿವೇಶನ್ ಕಾರ್ಯಗಾರ
ಉಡುಪಿ : ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಳೆವಿದ್ಯಾರ್ಥಿ ಸಂಘವು ಆಯೋಜಿಸಿದ ಅರ್ಧ ದಿನದ ಮೋಟಿವೇಶನ್ ಕಾರ್ಯಾಗಾರವನ್ನು ಜುಲೈ 19, 2019 ರಂದು ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಡಾ| ಬಿ.ಎಂ. ಸೋಮಯಾಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಪದವಿಯ 3 ವರ್ಷದ ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಅಮೂಲ್ಯವಾದ ಸಮಯ. ನಿಮ್ಮ ಬದುಕಿನ ಲಕ್ಷ್ಯ ಮತ್ತು ಪಥವನ್ನು ನಿರ್ಧರಿಸಬೇಕಾದ ಸಮಯವಾಗಿದೆ. ಈ ಹಿನ್ನಲೆಯಲ್ಲಿ ನಿಮಗೊಂದು ಸ್ಪೂರ್ತಿದಾಯಕ ಚಿಂತನೆಗೆ ಪ್ರವೀಣ್ ಗುಡಿಯವರ ‘ಮೋಟಿವೇಶನ್’ ಕಾರಣವಾಗಲಿದೆ ಎಂದು ಈ ಸಂದರ್ಭದಲ್ಲಿ ಡಾ| ಸೋಮಯಾಜಿಯವರು ನುಡಿದರು.
ಹುಬ್ಬಳ್ಳಿಯ ‘ಮೈ ಲೈಫ್‌ನ’ ಸಂಸ್ಥಾಪಕರಾದ ಶ್ರೀ ಪ್ರವೀಣ್ ಗುಡಿಯವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ (ಮೆಂಟರ್) ಆಗಮಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರರು ಹಳೆವಿದ್ಯಾರ್ಥಿಗಳ ಕಾರ್ಯಚಟುವಟಿಕೆಯನ್ನು ಪ್ರಶಂಸಿ ವಿದ್ಯಾರ್ಥಿಗಳು ಇದರ ಪ್ರಾಯೋಜನ ಪಡೆದುಕೊಳ್ಳಬೇಕೆಂದು ಆಶಿಸಿದರು. ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಿಮಲಾ ಚಂದ್ರಶೇಖರ್, ಶ್ರೀಮತಿ ಮೀನಾಲಕ್ಷಣಿ ಅಡ್ಯಂತಾಯ, ಸದಸ್ಯರಾದ ಈಶ್ವರ ಚಿಟ್ಪಾಡಿ, ಮಂಜುನಾಥ ಕರಬ, ಸೌಮ್ಯ ಶೆಟ್ಟಿ, ಮಂಜುನಾಥ ನಿಟ್ಟೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ ವಂದಿಸಿದರು.