ಮಿಲಾಗ್ರಿಸ್ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ
ಕಲ್ಯಾಣಪುರ : ಸ್ಥಳೀಯ ಮಿಲಾಗ್ರಿಸ್ ಕಾಲೇಜಿನ 2019 – 20 ರ ಸಾಲಿನ ವಿದ್ಯಾರ್ಥಿ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇಲ್ಲಿ ಆಂಗ್ಲಭಾಷಾ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಪರೀಕ್ಷಾ ನಿಯಂತ್ರಕ ಡಾ. ಆಲ್ವಿನ್ ಡೇಸಾರವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ನಾಯಕತ್ವ ಎಂಬುದು ಎಷ್ಟು ಸಂಖ್ಯೆಯ ಹಿಂಬಾಲಕರಿದ್ದಾರೆ ಅನ್ನುವುದರ ಮೇಲೆ ಅವಲಂಬಿತವಾಗಿಲ್ಲ,ಬದಲಿಗೆ ಎಷ್ಟು ಸಂಖ್ಯೆಯ ನಾಯಕರನ್ನು ಓರ್ವ ನಾಯಕ ಬೆಳೆಸಿದ್ದಾನೆ ಎನ್ನುವುದರ ಮೇಲೆ ನಿಂತಿದೆ ಎಂದರು.
ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವರವರು ವಿದ್ಯಾರ್ಥಿ ಸಂಘದ ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ವಾರ್ಷಿಕ ಮ್ಯಾಗಜಿನ್ ಅನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಂಚಾಲಕರಾದ ವೆ. ರೆ. ಫಾ. ಡಾ. ಲಾರೆನ್ಸ್ ಡಿ’ಸೋಜರವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಡಾ ಹೆರಾಲ್ಡ್ ಮೊನಿಸ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಕು ಸುರಕ್ಷಿತಾ ವಂದಿಸಿದರು. ಕು. ಬ್ರೆಂಡಾ ಹಾಗೂ ಶ್ರೀ ಜಸ್ಟಿನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಸಹನಿರ್ದೇಶಕರಾದ ಶ್ರೀಮತಿ ಚಂದ್ರಿಕಾರವರು ಉಪಸ್ಥಿತರಿದ್ದರು.