ವೀರಕಂಬ ಹಾ.ಉ.ಸ.ಸಂಘದ ಮಹಾಸಭೆ
ಬಂಟ್ವಾಳ: ತಾಲೂಕಿನ ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2018 -19 ನೇ ಸಾಲಿನ ವಾರ್ಷಿಕ ಸಭೆಯು ವೀರಕಂಬ ಪಂಚಾಯತನ ರಾಜೀವ್ ಗಾಂಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಭಾಗವಹಿಸಿ ಸದಸ್ಯರಿಗೆ ಲಾಭದಾಯಕ ಹೈನುಗಾರಿಕೆ ,ಗುಣಮಟ್ಟದ ಹಾಲು ಪೂರೈಕೆ, ಹೈನುಗಾರಿಕೆಗೆ ಸಿಗುವ ಸವಲತ್ತುಗಳು, ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ 2018 -19 ನೇ ಸಾಲಿನಲ್ಲಿ ಸಂಘಕ್ಕೆ ವಾರ್ಷಿಕ 500 ಲೀಟರ್ ಗಿಂತ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು . ಇದೇ ವೇಳೆ ಸದಸ್ಯರಿಗೆ ಶೇ.15 ಡಿವಿಡೆಂಟ್ ಘೋಷಿಸಲಾಯಿತು.
ಸಂಘದ ಕಾರ್ಯನಿರ್ವಹಣ ಅಧಿಕಾರಿ ಹರೀಶ್ ಬಂಗೇರ ಸ್ವಾಗತಿಸಿ, ಸಂಘದ ವರದಿಯನ್ನು ಮಂಡಿಸಿದರು.
ನಿರ್ದೇಶಕರುಗಳಾದ ಅಶೋಕ್ ಕುಮಾರ್ ತೆಕ್ಕಿಪಾಪು, ನಾರಾಯಣ ಮೂಲ್ಯ ಬೆತ್ತ ಸರವು, ಜಗನ್ನಾಥ್ ಆಲ್ವಾ ಮೈರ,,ಪದ್ಮನಾಭ ಗೌಡ ಮೈರ , ಉಮೇಶ್ ಮಜಿ ,ಪದ್ಮನಾಭ ಮಜಿ ವೆಂಕಪ್ಪ ಪೂಜಾರಿ ಮೈರ, ಜಯಂತಿ ಬೆತ್ತ ಸರವು, ಉಪಸ್ಥಿತರಿದ್ದರು. ನಿರ್ದೇಶಕ ಕೇಶವ ನಾಯ್ಕ ವಂದಿಸಿದರು.