ವೀರಕಂಬ ಹಾ.ಉ.ಸ.ಸಂಘದ ಮಹಾಸಭೆ

ಬಂಟ್ವಾಳ:  ತಾಲೂಕಿನ ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2018 -19 ನೇ ಸಾಲಿನ  ವಾರ್ಷಿಕ  ಸಭೆಯು ವೀರಕಂಬ ಪಂಚಾಯತನ ರಾಜೀವ್ ಗಾಂಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ  ಜಗದೀಶ್ ಭಾಗವಹಿಸಿ ಸದಸ್ಯರಿಗೆ ಲಾಭದಾಯಕ ಹೈನುಗಾರಿಕೆ ,ಗುಣಮಟ್ಟದ ಹಾಲು ಪೂರೈಕೆ, ಹೈನುಗಾರಿಕೆಗೆ ಸಿಗುವ ಸವಲತ್ತುಗಳು, ವಿಮಾ   ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ 2018 -19 ನೇ ಸಾಲಿನಲ್ಲಿ ಸಂಘಕ್ಕೆ ವಾರ್ಷಿಕ 500 ಲೀಟರ್ ಗಿಂತ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು . ಇದೇ ವೇಳೆ  ಸದಸ್ಯರಿಗೆ  ಶೇ.15  ಡಿವಿಡೆಂಟ್ ಘೋಷಿಸಲಾಯಿತು.
ಸಂಘದ ಕಾರ್ಯನಿರ್ವಹಣ ಅಧಿಕಾರಿ ಹರೀಶ್ ಬಂಗೇರ ಸ್ವಾಗತಿಸಿ, ಸಂಘದ ವರದಿಯನ್ನು ಮಂಡಿಸಿದರು.
 ನಿರ್ದೇಶಕರುಗಳಾದ ಅಶೋಕ್ ಕುಮಾರ್ ತೆಕ್ಕಿಪಾಪು, ನಾರಾಯಣ ಮೂಲ್ಯ ಬೆತ್ತ ಸರವು, ಜಗನ್ನಾಥ್ ಆಲ್ವಾ ಮೈರ,,ಪದ್ಮನಾಭ ಗೌಡ ಮೈರ , ಉಮೇಶ್ ಮಜಿ ,ಪದ್ಮನಾಭ ಮಜಿ  ವೆಂಕಪ್ಪ ಪೂಜಾರಿ ಮೈರ, ಜಯಂತಿ ಬೆತ್ತ ಸರವು, ಉಪಸ್ಥಿತರಿದ್ದರು. ನಿರ್ದೇಶಕ  ಕೇಶವ ನಾಯ್ಕ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!