ಉಡುಪಿ ಆರ್ ಟಿ ಓ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ

ಉಡುಪಿ: ಕೇಂದ್ರ ಸರಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿದೆ ,ಆದರೆ ಸಾಮಾನ್ಯ ವ್ಯಕಿಯೊರ್ವ ನೇರವಾಗಿ ಆರ್.ಟಿ.ಓ ಕಚೇರಿಗೆ ಹೋಗಿ ಲೈಸನ್ಸ್ ಆಗಲಿ ತನ್ನ ವಾಹನವನ್ನು ನೊಂದವಣಿ ಮಾಡುವ ದಿನ ಎಂದು ಬರುತ್ತದೆ? ಆರ್‌ಟಿಓ ಕಚೇರಿಗೆ ಸಾಮನ್ಯನೊರ್ವ ಹೋದರೆ ಅಲ್ಲಿನ ಸಿಬ್ಬಂದಿಗಳಾಗಲಿ ,ಅಧಿಕಾರಿಗಳಾಗಲಿ ಕಣ್ಣೆತ್ತಿ ಕೂಡ ನೋಡಲಾರದ ಪರಿಸ್ಥಿತಿ ಉಡುಪಿ ಆರ್‌ಟಿಓ ಕಚೇರಿಯಲ್ಲಿದೆ. ಅದಕ್ಕಾಗಿ ಹೆಚ್ಚಿನ ವಾಹನ ಸವಾರರು ಆ ಕಡೆ ತಲೆ ಹಾಕದೇ ಬ್ರೋಕರ್‌ಗಳ ಮೊರೆ ಹೋಗಿ ತಮ್ಮ ವಾಹನದ ಪರವಾನಿಗೆ, ನೊಂದವಣಿ ಮಾಡಿಸಿಕೊಳ್ಳಬೇಕಾದ ಸ್ಥಿತಿಯಿದೆ. ಜನರ ಬುದ್ದಿಗೆ ಮಂಕು ಬೂದಿ ಎರಚುವ ಬ್ರೋಕರ್‌ಗಳು ಇತ್ತೀಚಿಗೆ ಉಡುಪಿಯಲ್ಲಿ ಅನೇಕ ಜನ ಸಿಗುತ್ತಾರೆ


ದ್ವಿಚಕ್ರ ವಾಹನ ಕಲಿಯಲು ನೀಡುವ ಅನುಜ್ಞಾ ಪತ್ರಕ್ಕೆ ಸರಕಾರಕ್ಕೆ ವಿಧಿಸಿರುವ ಶುಲ್ಕ ಕೇವಲ 150 ರೂಪಾಯಿ, ಚಾಲನಾ ಪರವಾನಿಗೆಯ ಪರೀಕ್ಷಾ ಶುಲ್ಕ ರೂ.50. ನಂತರ ನೀಡುವ ಚಾಲನಾ ಪತ್ರಕ್ಕೆ(ಲೈಸನ್ಸ್) 300 ರೂಪಾಯಿಗಳು.ಅಂದರೆ ನೀವು ದ್ವಿಚಕ್ರ ವಾಹನದ ಲೈಸನ್ಸ್ ಪಡೆಯಲು ಸರಕಾರಕ್ಕೆ ನೀಡುವ ಶುಲ್ಕ ಕೇವಲ 500 ರೂಪಾಯಿಗಳು. ಆದರೆ ನೀವು ಇದನ್ನು ಮಾಡಬೇಕೆಂದು ಆರ್‌ಟಿಓ ಕಚೇರಿಗೆ ಹೋದರೆ ಕನಿಷ್ಠ 3 ವರ್ಷವಾದರೂ ಬೇಕು. ಆದರೆ ನೀವು ಬ್ರೋಕರ್ ಮುಖಾಂತರ ಹೋದರೆ ಕೇವಲ ಒಂದು ತಿಂಗಳಲ್ಲಿ ನಿಮ್ಮ ಲೈಸನ್ಸ್ ನಿಮ್ಮ ಕೈಗೆ ಸಿಗುತ್ತದೆ . ಈ ಡ್ರೈವಿಂಗ್ ಲೈಸನ್ಸ್ ಗೆ ಬರೋಬ್ಬರಿ 2 ,500 ರೂಪಾಯಿ ತೆರಬೇಕಾಗುತ್ತದೆ. ಇದು ಉಡುಪಿ ಆರ್‌ಟಿಓದಲ್ಲಿನ ಬ್ರೋಕರ್‌ಗಳ ಹಗಲು ದರೋಡೆ ಎನ್ನದೇ ಏನೆನ್ನಬೇಕು.

ಆದೇ ರೀತಿ ಕಾರಿನ ಚಾಲನಾ ಪರವಾನಿಗೆಗೆ ಸರಕಾರಿ ಶುಲ್ಕ 1,000 ರೂಪಾಯಿ ಆದರೆ ಬ್ರೋಕರ್‌ಗಳು 6,000 ರೂಪಾಯಿ ( 15 ದಿನ ತರಬೇತಿ ನೀಡುತ್ತಾರೆ) ಜನರಿಂದ ದೋಚುತ್ತಾರೆ. ಇದೇ ರೀತಿ ಉಡುಪಿ ಆರ್ ಟಿ ಓ ದಲ್ಲಿ ಬ್ರೋಕರ್‌ಗಳಿಲ್ಲದೆ ಯಾವುದೇ ಸಾಮನ್ಯ ಜನರ ಕೆಲಸವಾಗಲ್ಲ. ಇದನ್ನು ಮೊದಲು ಸರಕಾರ ಗಮನ ಹರಿಸಬೇಕು. ಬ್ರೋಕರ್‌ಗಳ ಈ ರೀತಿಯ ವಸೂಲಿ ಬಾಜಿಯಲ್ಲಿ ಆರ್‌ಟಿಓ ಅಧಿಕಾರಿಗಳಿಗೂ ಪಾಲಿದೆ ಎನ್ನುವುದು ಕಟು ಸತ್ಯ , ಅಪರೂಪಕ್ಕೆಂಬಂತೆ ಲೋಕಾಯುಕ್ತ, ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಆದರೆ ಅದರ ಸತ್ಯ ರೂಪ ದರ್ಶನ ವಾಗುವುದೇ ಇಲ್ಲ.

ಆರ್‌ಟಿಓ ಕಚೇರಿ ಆದಿ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಇಲ್ಲಿನ ಸಿಬ್ಬಂದಿಗಳು ಕಿಟಕಿಯಲ್ಲಿ ಹಣದ ಕಂತೆಗಳನ್ನು ಎಸೆದಿದ್ದು ಕೂಡ ಗುಟ್ಟಾಗಿ ಉಳಿದಿಲ್ಲ.ಪ್ರಸ್ತುತ ಮಣಿಪಾಲದ ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್‌ಗಳು ಕಚೇರಿಯಲ್ಲಿಯೇ ಜಂಡ ಊರಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದಾರೆ.

ಇದನ್ನೆಲ್ಲವನ್ನು ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ತೆರೆದು ನೋಡಬೇಕಾಗಿದೆ.ಸುಲಭ ರೀತಿಯಲ್ಲಿ ಜನರಿಗೆ ಚಾಲನಾ ಪರವಾನಿಗೆ ,ವಾಹನ ನೊಂದವಣಿ , ಬದಲಾವಣೆಗಳನ್ನು ಅಧಿಕಾರಿಗಳು ಯಾವುದೇ ಸಮಸ್ಯೆಗಳಿಲ್ಲದೆ ಮಾಡಿಕೊಡುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು ಜನರ ಆಗ್ರಹವಾಗಿದೆ.ಇಲ್ಲಿನ ಅಧಿಕಾರಿಗಳ ಈ ವರ್ತನೆಯಿಂದಾಗಿ ಜನರು ತಮ್ಮ ಚಾಲನಾ ಪರವಾನಿಗೆ, ನೊಂದವಣಿಗೆ ಅತ್ತ ಕಡೆ ಹೋಗದೆ ಬ್ರೋಕರ್ ಗಳ ಕಾಲು ಹಿಡಿಯುತ್ತಿದ್ದಾರೆ

ಸರಕಾರದ ನೂತನ ಕಾನೂನಿನ ಅನ್ವಯ ಹೆಲ್ಮೆಟ್ ಧರಿಸದೇ ಇದ್ದಾರೆ ಫೈನ್ , ಚಪ್ಪಲಿ ಹಾಕಿದರೆ ಫೈನ್ ,ಹೀಗೆ ಹತ್ತು ಹಲವು ವಿಚಾರಕ್ಕೆ ದಂಡ ಹಾಕುವ ಸರಕಾರ ಇತ್ತ ಕಡೆಯೂ ಗಮನ ಹರಿಸಬೇಕಿದೆ, ನಮಗೆ ಇದರಿಂದ ಮುಕ್ತಿ ಯಾವಾಗ? ಎಂದು ಜನರು ಕೇಳುತ್ತಿದ್ದಾರೆ.ಇನ್ನಾದರೂ ಸಂಬಂಧಪಟ್ಟವರು ಇತ್ತ ಕಡೆ ಬರುವರೇ ಕಾದು ನೋಡಬೇಕಿದೆ

3 thoughts on “ಉಡುಪಿ ಆರ್ ಟಿ ಓ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ

  1. Wonder to report that if we apply direct for any work from Rto . we can observe behind brockers sitting inside Vehicle is common within the premises. I am having the experience delay or mistake finds from our side,and for certain forms we have make payments,after 11am nobody is enquiry counters. Officials drivers r also mediators.

    Officials r busy in solving being dine thru brockers only.
    WHY media and press reporters r silent.

  2. ಜನ ಕೂಡಾ ಬ್ರೋಕರುಗಳನ್ನೇ ಇಷ್ಟ ಪಡ್ತಾರೆ. ಬಿಡುವಿಲ್ಲದ ಸಮಯದಲ್ಲಿ ಜನ ಆರ್ ಟಿ ಓ ಅಪೀಸ್ ಗೆ ಅಲೆದಾಡುವುದಿಲ್ಲ ಸ್ವಾಮೀ.ಬ್ರೋಕರ್ 2500 ಸಾವಿರ ರೂಪಾಯಿ ತೆಗೆದುಕೊಳ್ಳುವುದು ಅಲ್ಲಿನ ಸಿಬಂದ್ದಿಗಳ ಕಿಸೆ ತುಂಬಿಸಲು. ಮೊದಲು ಅಲ್ಲಿನ ಸಿಬಂದ್ದಿಗಳ ಅಳಚ ಅವತಾರದ ಬಗ್ಗೆ ವರದಿ ಮಾಡಿ

Leave a Reply

Your email address will not be published. Required fields are marked *

error: Content is protected !!