ಮಣಿಪಾಲ ರಾ.ಹೆದ್ದಾರಿ 169ರ ಪೂರ್ಣಗೊಳ್ಳದ ಕಾಮಗಾರಿ ರಸ್ತೆದಾಟಲು ಜನರ ಸಾಹಸ
ಉಡುಪಿ: ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169ರ ಅರೆಬರೆ ಕಾಮಗಾರಿಯಿಂದಾಗಿ ಪಾದಚಾರಿಗಳು ರಸ್ತೆ ದಾಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದ್ರಾಳಿ ಆಂಗ್ಲಮಾಧ್ಯಮ ಶಾಲೆಯ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯ ಪೂರ್ಣಗೊಳ್ಳದ ಕಾಮಗಾರಿಯಿಂದಾಗಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ರಸ್ತೆ ದಾಟಬೇಕಾದ ಸ್ಥಿತಿ ಬಂದಿದೆ.
ಉಡುಪಿಯಿಂದ ಮಣಿಪಾಲ ಕಡೆಗೆ ಸಾಗುವ ಹೊಸದಾದ ಕಾಂಕ್ರೀಟಿಕರಣಗೊಂಡ ರಸ್ತೆ, ಇಂದ್ರಾಳಿ ಜಂಕ್ಷನ್ನಲ್ಲಿ ರಸ್ತೆಯನ್ನು ಎತ್ತರ ಗೊಳಿಸಿದರೆ, ಉಡುಪಿ ಕಡೆ ಹೋಗುವ ರಸ್ತೆಯನ್ನು ತಗ್ಗಿನಿಂದ ನಿರ್ಮಿಸಲಾಗಿದೆ. ಇದರ ಪರಿಣಾಮ ಉಡುಪಿಯಿಂದ ಬರುವ ವಾಹನದಿಂದಾಗಿ ರಸ್ತೆ ದಾಟುವ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ದ್ವಿಚಕ್ರ ವಾಹನಗಳಿಗೆ ಅಪಘಾತವಾಗುವ ಸಂಭವ ಹೆಚ್ಚಿದೆ. ದಟ್ಟ ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಜನ ಸಾಮಾನ್ಯರು ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.
ಜಿಲ್ಲಾ ಪೊಲೀಸ್ ಇಲಾಖೆ ಸಂಚಾರಿ ಪೊಲೀಸರನ್ನು ಮಾತ್ರ ನಿಯುಕ್ತಿಗೊಳಿಸಿದ್ದಾರೆ. ಆದರೆ ಶಾಲೆ ಆರಂಭ ಹಾಗೂ ಬಿಡುವ ಸಂದರ್ಭ ವಾಹನ ಸಂಚಾರ ಹೆಚ್ಚಿದ್ದು, ವಿದ್ಯಾರ್ಥಿಗಳು ಆತಂಕದಿಂದ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ. ಕೂಡಲೇ ಇಲ್ಲಿ ರಸ್ತೆ ದಾಟಲು ಬದಲಿ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.