ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕಿನ ಸಿಬ್ಬಂದಿಯವರಿಗೆ ತರಬೇತಿ ಕಾರ್ಯಗಾರ

ಉಡುಪಿ : ಮಹಾಲಕ್ಷ್ಮೀ ಕೋ ಒಪರೇಟಿವ್ ಬ್ಯಾಂಕ್ ಲಿ. ತಮ್ಮ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರವನ್ನು ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು. ಬ್ಯಾಂಕಿನ ಅಭಿವೃದ್ದಿಗಾಗಿ ಸಿಬ್ಬಂದಿಗಳು ಈ ತರಬೇತಿ ಕಾರ್ಯಗಾರದಿಂದ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತೆ ಆಶಿಸಿದರು.
ತರಬೇತಿ ಕಾರ್ಯಗಾರದಲ್ಲಿ  ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಸ್. ಮೂರ್ತಿ, ವೈ. ವಿ. ಗುಂಡೂರಾವ್, ಸಿ ಎ.ವಾಮನ್ ಕಾಮತ್ ಹಾಗೂ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್. ಕೆ. ಮತ್ತು  ಬ್ಯಾಂಕಿನ ಸಿಬ್ಬಂದಿಗಳು, ಶಾಖಾ ವ್ಯವಸ್ಥಾಪಕರು, ಆಡಳಿತ ಮಂಡಳಿಯ ನಿರ್ದೇಶಕರು ಭಾಗವಹಿಸಿದ್ದರು ಸಮಾರಂಭದಲ್ಲಿ ಬ್ಯಾಂಕಿನ ಸಲಹೆಗಾರರಾದ ಆನಂದ ಎನ್ ಪುತ್ರನ್ ಹಾಗೂ ವೃತ್ತಿಪರ ನಿರ್ದೇಶಕರಾದ ರಾಮದಾಸ್ ಎಸ್. ಶ್ರೀಯಾನ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!