ವಿದೇಶದಲ್ಲಿ ಉದ್ಯೋಗ ಭರವಸೆ ದಂಪತಿಗೆ ಲುಕ್ ಔಟ್ ನೋಟಿಸ್
ಉಡುಪಿ: ಆತ್ರಾಡಿಯ ಜುಬೇದಾ ಮತ್ತು ಈಕೆಯ ತಂಗಿ ಜೀನತ್ ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುದಾಗಿ ಬಜಪೆಯ ಆಸೀಫ್ ಇಸ್ಮಾಯಿಲ್, ಆತನ ಪತ್ನಿ ಹಸೀನಾ ಫರ್ವಿನ್ ಹಾಗೂ ಆಸೀಫ್ ತಂದೆ ಇಸ್ಮಾಯಿಲ್ ಮೋಸ ಮಾಡಿ 35 ಲಕ್ಷ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.
ಆತ್ರಾಡಿಯ ಜುಬೇದಾ ಎಂಬಾಕೆಯ ಮಗ ಫರಾನ್ಗೆ ವಿದೇಶದಲ್ಲಿ ಕೆಲಸ ತೆಗೆಸಿಕೊಟ್ಟಿದ್ದು, ಇದಕ್ಕಾಗಿ ಜುಬೇದಾ ರವರು ವೀಸಾಕ್ಕೆ 5 ಲಕ್ಷ ರೂಪಾಯಿಯನ್ನು ಆರೋಪಿತರಿಗೆ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಫರಾನ್, ಸೌದಿಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಆಸೀಫ್ ಇಸ್ಮಾಯಿಲ್ನೊಂದಿಗೆ 10 ತಿಂಗಳ ಕಾಲ ಕೆಲಸ ಮಾಡಿದ್ದು, ಆಗ ಯಾವುದೇ ಸಂಬಳ ನೀಡದ ವಂಚನೆ ಮಾಡಿರುತ್ತಾರೆ.
ಈ ಬಗ್ಗೆ ಆಸೀಪ್ ಇಸ್ಮಾಯಿಲ್ ಹಾಗೂ ಆತನ ಪತ್ನಿ ಹಸೀನಾ ಪರ್ವಿನ್ ಬಳಿ ವಿಚಾರಿಸಿದಾಗ, ನಾನು ಯಾವುದೇ ಹಣ ನೀಡಲು ಬಾಕಿ ಇಲ್ಲ, ಆತನ ಹಣ ನಮ್ಮ ಬಳಿಯೂ ಇಲ್ಲ ಎಂದಿದ್ದು, ನೀವು ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಜುಬೇದಾ ರವರ ಮಗನ ಪಾಸ್ ಪೋರ್ಟ್ ಆಸೀಪ್ ಇಸ್ಮಾಯಿಲ್ ಬಳಿ ಇದ್ದು, ಅದನ್ನು ಜುಬೇದಾ ಮಗನಿಗೆ ನೀಡಿರುವುದಿಲ್ಲ. ಅಲ್ಲದೇ ಜುಬೇದಾ ರವರು ಹಾಗೂ ಅವರ ಗಂಡ ವಿದೇಶದಲ್ಲಿದ್ದ ಸಮಯ ಅವರಲ್ಲಿ ಪದೇ ಪದೇ ಹಣ ನೀಡುವಂತೆ ತೊಂದರೆ ಮಾಡುತ್ತಿದ್ದನು.
ಮೇ 29 ರಂದು ಜುಬೇದಾ ರವರ ಗಂಡ ಮರಣ ಹೊಂದಿರುತ್ತಾರೆ. ಆರೋಪಿತರು ಹಸೀನಾ ಪರ್ವಿನ್ ಹಾಗೂ ಆಕೆಯ ಗಂಡ ಆಸೀಪ್ ಇಸ್ಮಾಯಿಲ್ ರವರು ಜುಬೇದಾ ಗಂಡ 30 ವರ್ಷ ವಿದೇಶದಲ್ಲಿ ಉದ್ಯೋಗ ಮಾಡಿದ ಕಂಪೆನಿಯ ಸರ್ವಿಸ್ ಹಣವನ್ನು ನೀಡದೆ ವಂಚಿಸಿದ್ದು, ಈ ಬಗ್ಗೆ ಅವರಲ್ಲಿ ಕೇಳಿದಾಗ ನಮ್ಮ ಬಳಿ ಯಾವ ಹಣ ಕೂಡ ಇಲ್ಲ, ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ, ನೀವು ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿರುತ್ತಾರೆ. ಅಲ್ಲದೇ ಜುಬೇದಾರವರ ತಂಗಿ ಜೀನತ್ ರವರ ಮಗನಾದ ಅರ್ಫಾನ್ಗೆ ವೀಸಾ ಮಾಡಿಸಿ, ಕೆಲಸ ತೆಗೆಸಿಕೊಡುವುದಾಗಿಯೂ, ಅದಕ್ಕಾಗಿ 5 ಲಕ್ಷ ರೂಪಾಯಿ ಬೇಕು ಎಂದು ಹೇಳಿದ್ದು ಅದರಂತೆ ಜುಬೇದಾ ರವರ ತಂಗಿ ಅವರ ಮಾತನ್ನು ನಂಬಿ ಚಿನ್ನವನ್ನು ಅಡವಿಟ್ಟು 5 ಲಕ್ಷ ರೂಪಾಯಿಯನ್ನು ಆಸೀಫ್ ತಂದೆಯಾದ ಇಸ್ಮಾಯಿಲ್ ಬಳಿ ಅತ್ರಾಡಿ ಮನೆಯಲ್ಲಿ ನೀಡಿದ್ದರು.
ಈಗ ಆಕೆಯ ಮಗನು ಕೆಲಸವಿಲ್ಲದೇ ವಿದೇಶದಲ್ಲಿದ್ದು ಆತನ ಪಾಸ್ಪೋರ್ಟ್ ನೀಡದೆ ಸತಾಯಿಸುತ್ತಿದ್ದಾರೆ . ಜುಬೇದಾ ಹೆಸರಿನಲ್ಲಿ ಲಕ್ಷಾಂತರ ರೂ. ಆಸ್ತಿಯಿದ್ದು ,ಅದನ್ನು ಲಪಟಾಯಿಸುವ ಹುನ್ನಾರದಿಂದ ಆಪಾದಿತರು ಜುಬೇದರವರಿಗೆ ಫೋನ್ ಮಾಡಿ, “ನಿನಗೆ ಯಾರೂ ಗತಿ ಇರಬಾರದು, ನಿನ್ನನ್ನು ಆ ಮನೆಯಿಂದ ಹೊರಗೆ ಹಾಕಿ ಅದನ್ನು ನಮ್ಮ ಹೆಸರಿಗೆ ಮಾಡಿಕೊಳ್ಳುತ್ತೇವೆ, ಕುಟುಂದ ಒಂದು ಜೀವ ತೆಗೆಯುವುದಾಗಿ” ಬೆದರಿಕೆ ಹಾಕಿರುತ್ತಾರೆ . ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದು. ಅವರಿಗೆ ವಂಚನೆ ಮಾಡು ನಿಟ್ಟಿನಲ್ಲಿ ರೂಪಾಯಿ 30 ಲಕ್ಷವನ್ನು ಪಡೆದು ಮೋಸ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಜುಬೇದರವರು ಹಿರಿಯಡ್ಕ ಪೊಲೀಸ್ ಠಾಣೆ ದೂರು ನೀಡಿರುತ್ತಾರೆ. ಸದ್ಯ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದು ಪೊಲೀಸರು ಅವರ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ