“ಲಯನ್ಸ್ ಕ್ಲಬ್ ಉಡುಪಿ ಚೇತನ” ಪದಗ್ರಹಣ ಸಮಾರಂಭ
ಲಯನ್ಸ್ ಕ್ಲಬ್ ಉಡುಪಿ ಚೇತನ , ಇದರ ಪದಗ್ರಹಣ ಸಮಾರಂಭವು ಶನಿವಾರದ ಅಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗಿತು . ಮಾಜಿ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿಯವರು ನೂತನ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಇವರಿಗ ಪ್ರಮಾಣವಚನ ಬೋದಿಸಿದರು.
ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್, ಖಜಾಂಜಿ ಸುದರ್ಶನ್ , ಪ್ರಮಾಣವಚನ ಪಡೆದರು. ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿ ರತ್ನಾಕರ್ ಶೆಟ್ಟಿ , ವಲಯ ಅಧ್ಯಕ್ಷರಾದ ಜಗನ್ನಾಥ್ ಕಡೆಕಾರ್ , ಶ್ರೀಮತಿ ಶೋಭಾ ಶೆಟ್ಟಿ ,ಸಂಜೀವ ಕರ್ಕೇರಾ , ನಂದಕುಮಾರ್, ಉಪಸಿಥರಿದ್ದರು.
ನೂತನ ಅಧ್ಯಕ್ಷರಿಂದ ಸೇವಾ ಕಾರ್ಯ ರೊಪದಲ್ಲಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬೆಟ್ಟು, ಧನಸಹಾಯ, , ಹರ್ಷಿತಾ ಆಳ್ವ್ ಇವರ ಉನ್ನತ ವ್ಯಾಸಂಗಕ್ಕೆ ಧನ ಸಹಾಯ , ಎರಡು ಕಿಡ್ನಿ ವೈಫಲ್ಯ ದಿಂದ ಡಯಾಲಿಸಿಸ್ ಚಿಕಿತ್ಸೆಗಾಗಿ ರಾಜೇಶ್ ನಾಯಕ್ ಇವರಿಗೆ ಧನ ಸಹಾಯ ಎಸ್ ಎಸ್ ಎಲ್ ಸಿ ರಾಂಕ್ ವಿಜೇತೆ ಅಲೆವೂರಿನ ಅಂಕಿತ ಆಚಾರ್ಯ ಇವರಿಗೆ ಪ್ರತಿಭಾ ಪುರಸ್ಕಾರ , ಕುಮಾರಿ ಹರ್ಷಿತಾಗೆ ಧನ ಸಹಾಯ ವನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ವಿಶೇಷ ಸೇವೆಗಾಗಿ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ದಂಪತಿ ಯಾರನ್ನು ಗೌರವಿಸಲಾಯಿತು