ಸಲಿಂಗ ಕಾಮಿಗಳಿಂದ ಪರ್ಕಳ ಶಾಲಾ ವಿದ್ಯಾರ್ಥಿಯ ಅಪಹರಣ !

ಮಣಿಪಾಲ: ಸಲಿಂಗ ಕಾಮಿಗಳಿಂದ ಪರ್ಕಳ ಶಾಲಾ ವಿದ್ಯಾರ್ಥಿಯ ಅಪಹರಣ ! ಇಂದು ಬೆಳಿಗ್ಗೆ  ತನ್ನ ಮನೆಯಿಂದ ಶಾಲೆಗೆಂದು ಪರ್ಕಳಕ್ಕೆ  ಬಂದಿದ್ದ 8ನೇ ತರಗತಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಬಂದ ಮೂರು ಜನರ ತಂಡವು ಬಾಲಕನ ಅಪಹರಿಸಿ ಪರ್ಕಳದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಮ್ಮ ಕಾಮತ್ರಷೆ ಬಳಸಿಕೊಳ್ಳಲು ಪ್ರಯತ್ನ ಪಟ್ಟರು. ಆದರೆ ಬಾಲಕನ ಸಕಾಲಿಕ ಸಮಯ ಪ್ರಜ್ಞೆಯಿಂದ ಈ ಕಾಮುಕರಿಂದ ತಪ್ಪಿಸಿಕೊಂಡ ಬಾಲಕ ತರಗತಿಗೆ ಹಾಜರಾದ.

 

 

ಘಟನೆ ವಿವರ. ಗುರುವಾರ ಬೆಳಿಗ್ಗೆ 9.15 ಕ್ಕೆ ಪರ್ಕಳ  ಶಾಲೆಯ ಅನತಿ ದೂರದಲ್ಲಿ ಕಾರು ನಿಲ್ಲಿಸಿ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗುತ್ತಿದ್ದ  ಸಂದರ್ಭ ಅಲ್ಲಿದ್ದ ಬೀದಿನಾಯಿಗಳು ಅವರ ಅಟ್ಟಿಸಿಕೊಂಡು ಬಂದಾಗ  ಬಾಲಕ ಈ ಸಲಿಂಗಕಾಮಿಗಳ ಕೈಯಿಂದ ತಪ್ಪಿಸಿಕೊಂಡು ಪರ್ಕಳ ಪೇಟೆಗೆ  ಓಡಿ ಬಂದಿದ್ದ. ನಂತರ ಸ್ಥಳೀಯರಿಗೆ  ತಿಳಿಸಿ ಆಲ್ಟೋ ಕಾರಿನಲ್ಲಿ ಬಂದವರು ಅಪಹರಿಸಿದ್ದಾರೆಂದು  ಕೂಗುತ್ತ ಹೇಳಿದ.  ಅಲ್ಲಿ ನೆರೆದ  ಸ್ಥಳೀಯರು ತಕ್ಷಣ ಬಾಲಕನ ತಂದೆ ಗೆ ಮಾಹಿತಿ ನೀಡಿ ಕರೆಸಿಕೊಂಡುರು.  ಸಲಿಂಗಕಾಮಿಗಳ ಪತ್ತೆಗೆ ಸಾರ್ವಜನಿಕರಿಗೆ ಪ್ರಯತ್ನಪಟ್ಟರು ಅವರ ಯಾವುದೇ ಸುಳಿವು ಸಿಗಲಿಲ್ಲ .
ಬಾಲಕನ ಮಾತಲ್ಲಿ ಸಂಶಯಪಟ್ಟ ಪೊಲೀಸರು ಸ್ಥಳೀಯ ಬ್ಯಾಂಕ್ ಮತ್ತು ಸೊಸೈಟಿ  ಸಿಸಿ ಕ್ಯಾಮೆರಾ ಪರೀಶಿಲಿಸಿದರು. ಇತ ಹೇಳಿದ ಸಮಯದಲ್ಲಿ ಆಲ್ಟೋ ಕಾರೊಂದು ಈ ರಸ್ತೆಯಲ್ಲಿ ಸಂಚರಿಸಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಶಾಲಾ ಬಾಲಕನ ಜಾಣ್ಮೆಯ ಪ್ರದರ್ಶನದಿಂದಾಗಿ ಅವರ ಕೈಯಿಂದ ತಪ್ಪಿಸಿಕೊಂಡು ತನ್ನ ಶಾಲೆಯ ಶಾಲೆಗೆ ಮರಳಿ ಹೋಗಿರುವುದಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಣಿಪಾಲ ಪೊಲೀಸರು ಅಪಹರಿಸಿದ ಸಲಿಂಗಕಾಮಿಗಳನ್ನು  ಪತ್ತೆ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.  ಅಪಹರಣ ಸುದ್ದಿ ಪರ್ಕಳದಾದ್ಯಂತ ಹಬ್ಬುತಿದ್ದಂತೆ ಮಕ್ಕಳ ಪೋಷಕರು ಭಯಭೀತರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!