” ಪೆನ್ಸಿಲ್ ಬಾಕ್ಸ್” ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡ “ಲಹರಿ” ಸಂಸ್ಥೆ.

ಮಂಗಳೂರು:ದೃಶ್ಯ ಮೂವೀಸ್ ಬ್ಯಾನರಿನಲ್ಲಿ ನಿರ್ಮಾಣಗೊಂಡ ,ಡಾನ್ಸ್ ಡಾನ್ಸ್ ಜೂನಿಯರ್ ಖ್ಯಾತಿಯ ದೀಕ್ಷಾ ಡಿ ರೈ ಅಭಿನಯದ ಪೆನ್ಸಿಲ್ ಬಾಕ್ಸ್ ಚಿತ್ರ ಶೀಘ್ರದಲ್ಲೇ ತೆರೆ ಕಾಣಲಿದೆ.ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಲಹರಿ ಸಂಸ್ಥೆಯು ಪಡೆದು ಕೊಂಡಿದ್ದು ಚಿತ್ರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಒಟ್ಟು ಮೂರು ಹಾಡುಗಳಿದ್ದು ಸರಿಗಮಪ ಖ್ಯಾತಿಯ ಡಾ.ಅಭಿಷೇಕ್ ,ವೈಷ್ಣವಿ ರವಿ, ಕ್ಷಿತಿ ಕೆ ರೈ ಧರ್ಮಸ್ಥಳ, ಅಪೇಕ್ಷಾ ಪೈ, ಜನ್ಯ ಪ್ರಸಾದ್,ಶಿವಾನಿ ಕೊಪ್ಪ ಮುಂತಾದವರು ಧ್ವನಿ ನೀಡಿದ್ದಾರೆ.ರಝಾಕ್ ಪುತ್ತೂರು ಬರೆದ ಅರ್ಥಪೂರ್ಣವಾದ ಸಾಹಿತ್ಯಕ್ಕೆ ಜಯ ಕಾರ್ತಿ ಯವರು ಅದ್ಬುತ ಸಂಗೀತ ಸಂಯೋಜನೆ ಮಾಡಿದ್ದಾರೆ.
ದಯಾನಂದ್ ಎಸ್ ರೈ ಬೆಟ್ಟಂಪಾಡಿ ನಿರ್ಮಾಣದ ಪೆನ್ಸಿಲ್ ಬಾಕ್ಸ್ ಚಿತ್ರದ ಕಥೆ, ಚಿತ್ರಕಥೆ, ,ನಿರ್ದೇಶನ ರಝಾಕ್ ಪುತ್ತೂರು ಇವರದ್ದು. ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು

Leave a Reply

Your email address will not be published. Required fields are marked *

error: Content is protected !!