ಕಾರ್ಮಿಕ ಚಳುವಳಿ ಮುಖಂಡ B. ಮಾಧವ ನಿಧನ

ಭಾರತ ಕಮ್ಯುನಿಸ್ಟ್ ಪಕ್ಷದ(ಸಿಪಿಐಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು, ಸಿಐಟಿಯು ರಾಜ್ಯ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ಕಾರ್ಯದರ್ಶಿ, ಸಿಐಟಿಯು ಅಧ್ಯಕ್ಷರಾಗಿದ್ದ – ಹೀಗೆ ಹಲವು ಜವಾಬ್ದಾರಿ ಸ್ಥಾನಗಳಲ್ಲಿ ಕಾರ್ಮಿಕ ಚಳುವಳಿಗೆ ದುಡಿದ B. ಮಾಧವ ಈ ದಿನ ಮಂಗಳೂರಿನಲ್ಲಿ ನಿಧನ. ಕೆಲವು ಸಮಯದಿಂದ ಅವರು ಅನಾರೋಗ್ಯ ಹೊಂದಿದ್ದರು. 

ಉಡುಪಿ ಜೀವ ವಿಮಾ ನಿಗಮದಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ B.ಮಾಧವ ಅಲ್ಲಿನ ನೌಕರ ಸಂಘಟನೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದು ಅಖಿಲ ಭಾರತ ಮುಖಂಡರಾಗಿದ್ದ ರು. ತುರ್ತು ಪರಿಸ್ಥಿತಿ ಯ ಸಂದರ್ಭದಲ್ಲಿ ಅದನ್ನು ವಿರೋಧಿಸಿ, ನೌಕರರನ್ನು, ಜನರನ್ನು ಎಚ್ಚರಿಸಿದರು. ಇದರಿಂದ ಉಡುಪಿಯಲ್ಲಿ ಬಂಧನಕ್ಕೆ ಒಳಗಾಗಿ ಮೊಕದ್ದಮೆ ಎದುರಿಸಿದರು. ಕನ್ನಡ, ಮಲಯಾಳಂ, ಇಂಗ್ಲಿಷ್, ತುಳು  ಭಾಷೆಗಳಲ್ಲಿ ಪರಿಣತಿ ಹೊಂದಿದ್ದ ಮಾಧವ, ಹಲವಾರು ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದರು. ಅಸಂಘಟಿತ ಕಾರ್ಮಿಕರನ್ನು ಸಂಘಟನೆ ಮಾಡಿದ ಮಾಧವ, ಬೀಡಿ, ಕಟ್ಟಡ ಸಂಘಟನೆಗಳ ಅಖಿಲ ಭಾರತ ಅಧ್ಯಕ್ಷರಾಗಿದ್ದರು.

ಸರಳ ಜೀವನ ನಡೆಸಿದ ಕಾ. ಮಾಧವ, ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ತನ್ನ ಪತ್ನಿ ಹಾಗೂ ಮೂವರು ಮಕ್ಕಳು, ಕುಟುಂಬ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 
ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ  ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದೆ

Leave a Reply

Your email address will not be published. Required fields are marked *

error: Content is protected !!