ಕುಂದಾಪ್ರ ಕನ್ನಡ ಗ್ರೇಟ್ ! – ಎ ಎಸ್ ಎನ್ ಹೆಬ್ಬಾರ್

ಕುಂದಗನ್ನಡ ಶ್ರೀಮಂತ ಕನ್ನಡ. ಈ ಕನ್ನಡದಲ್ಲಿ ಅನೇಕ ಜನ ಲೇಖನ ಗಳನ್ನೂ ಹಾಡುಗಳನ್ನ ರಚಿಸಿದ್ದಾರೆ ಆಗಸ್ಟ್ 1 ರಂದು ವಿಶ್ವ ಕುಂದಾಪ್ರ ಕನ್ನಡ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸುತ್ತಿದ್ದಾರೆ,

ನ್ಯಾಯವಾದಿ, ವಾಗ್ಮಿ ,ಕವಿ, ಎ ಎಸ್ ಎನ್ ಹೆಬ್ಬಾರ್ ರವರು ಅವರ ತಂಗಿ ಜೊತೆ ಫೋನಿನ ಸಂಭಾಷಣೆಯಲ್ಲಿ ಕುಂದಗನ್ನಡದ ಸೊಗಡನ್ನು ತಿಳಿಸಿದ್ದಾರೆ

“ಹಲೋ” – ನಮ್ ತಂಗೀ ಸ್ವರ .
‘ಹೊಯ್ ಅಂದೇ ನಾನು.
‘ಆದ್ಯಂತ -ಹೊಯ್ ಹಲೋ ಬಿಟ್ಯಾ?”
‘ಹೌದು ಮಾರೈತಿ – ಈಗ ಯಾರ್ ಫೋನ್ ಮಾಡೋ ಹೋಯ್ ಎಂಬುದೇ’
‘ಅದೆಂತ ಹೊಸ್ತ ?’
‘ಹೊಸ್ತಲ್ಲಪ್ಪ – ‘
‘ಅಂದ್ರೆ ?
ಅಂದ್ರಾ? ಹೊಯ್ ಅಂದ್ ಕೂಡ್ಲೇ ಖುಷಿ ಆತ್ತಿಲ್ಯಾ?’
‘ಅತ್ತಪ್ಪ – ಕುಂದಾಪ್ರ ಕನ್ನಡ ಕೇಂಬುಕೆ ಚಂದ’
‘ಅದ್ಕಂತಲ್ಲ – ನಿಂಗೊಂದ್ ಸಂಗ್ತಿ ಗೊತ್ತಿತ್ತಾ ?’
‘ಎಂತ?’.
“ಟೆಲಿಫೋನ್ ಕಂಡ್‌ಹಿಡ್ಡದ್ ಯಾರ್?”
‘ಯಾರಪ್ಪ……ಯಾವನೋ ಬೆಲ್ ಅಲ್ದಾ ?’
‘ಹೌದಾ – ಅಲೆಕ್ಸಾಂಡರ್ ಗ್ರಹಾಂಬೆಲ್!”
‘ಕಂಡ್ಯ- ಈಗ ನೆನಪ ಆಯ್ತ್ ಪೂರಾ ಹೆಸ್ರ್ ‘
‘ಅವಂ ಟೆಲಿಫೋನ್ ಕಂಡ್ ಹಿಡ್ಡನಲ್ಲ – ಸುರೂಗೆ ಟೆಲಿಫೊನಗೆ ಅಂವ ಎಂತ ಹೇಳ್ದ್ ಗೊತ್ತಿತ್ತಾ?’
“ಇಲ್ಲಾ – ಹಲೋ ಅಲ್ದಾ ?’
‘ಹಾಂ – ಅದೇ ಗಮ್ಮತ್ ಅಂವ ಹಲೋ ಹೇಳಿಲ್ಲ, ಅಂವ ಹೇಳಿದ್ – ‘ಹೊಯ್ ‘

ಹೋಯಾ? ಅವಂಗೆ ಕನ್ನಡ ಗೊತ್ತಿತ್ತಾ ? ಕುಂದಾಪ್ರದವ್ನ್ ?’
‘ಅಲ್ಲಾ- ಇಂಗ್ಲೀಷಂಗೂ ಹೊಯ್ – Hoy ಅಂತ್ರ , ದೋಣಿ ಒತ್ತುವವನ್ನ ಕರೀಕರೇ Hoy ಅಂತ ಕೂಗ್ತ್ರ್ ಹಾಂಗಾಯ್ ಅಂವ ಮೊದಲಾಸಲ ಹೇಳಿದ್ದೇ ‘ ಹೋಯ್’ ಅಂದೇಳಿ.’
“ಹಂಗರೆ ಹಲೋ ಹ್ಯಾಂಗ್ ಬಂತ?’
‘ಹಲೋ ಅಂದ್ರೆ ಆವಂದ್ ಗರ್ಲ್‌ಫ್ರೆಂಡ್! ಹಾಂಗಾಯ್, ಕಡಿಗೆ ಅಂವ ಹಲೋ ಅಂಬುಕೆ ಶುರು ಮಾಡ್ರೆ , ಅದೇ ಕೇಂಡ್ಕಂಡ್ ಎಲ್ಲ್ರು ಹಲೋ ಹಲೋ ಅಂಬುಕೇ ಶುರು ಮಾಡಿರ್ ‘
‘ಹೌದು – ಇದ್ ನಂಗೆ ಗೊತ್ತೇ ಇರ್ಲಿಲ್ಲ’
“ನಂಗೂ ಗೊತ್ತಿರಲಿಲ್ಲ, ಒಂದು ಪೇಪರಂಗ್ ಬಂದಿತ್ ಖುಷಿ ಆಯ್ತ್ ಓದಿ, ನೆಗಿ ಬಂತು’.
“ಯಾಕೆ ನೆಗಿ?”.
“ಯಾಕಂದ್ರೆ, ಅವ, ಸತ್ತ, ಅವ್ನ ಗರ್ಲ್‌ಫ್ರೆಂಡ ‘ಹಲೋ’ ಸಾ ಸತ್ಲು . ಆದ್ರೂ ಇಡೀ ಲೋಕದ ಜನಾ ಎಲ್ಲಾ ಆ ಸತಾವ್ಳ್ನ ಹೆಸ್ರನ್ನೇ ‘ಹಲೋ ಹಲೋ” ಅಂತೇಳಿ ಕರೀತಾ ಆಯ್ಕಂಡೀರಲೇ, ಎಷ್ಟೋ ಹಲೋ ಅಂತ ಇವೆಲ್ಲ ಕರದ್ರೂ ಅವ್ಳ ಇನ್ ಬತ್ಲ್ಯಾ ?’
‘ಹ ಹ ಹ ಒಳ್ಳೆ ಕತಿ’
“ಹೌದು – ಅದ್ಕೆ ನಾನ್ ಹಲೋ ಅಂಬುದ್ ಬಿಟ್ಟೆ, ನಮ್ ಚಂದ್ ಕುಂದಾಪ್ರ ಕನ್ನಡದ ಗೆ ಹೊಯ್ ಅಂಬುಕೇ ಶುರು ಮಾಡ್ದೆ!
“ಹೌದ್ ಮಾರಾಯಾ – ಎಷ್ಟ್ ಖುಷಿ ಅತ್, ಹೊಯ್ ಎಂಬುದು ಕೇಂಡ್ರೆ! ನಾನು ಇನ್ ಹಲೋ ಬಿಟ್ ಹೊಯ್ ಅಂತಿ ! ಯಾರಾರೂ ಕೇಂಡ್ರೆ ಹ್ಯಾಂಗಿದ್ರೂ ಇತ್ತಲೆ – ಇದೇ ಕತಿ ಹೇಳ್ತೆ ”
‘ಅಕ್ ಮಾರಾಯ್ತಿ – ನಿನ್ನತ್ರ ಚಟ್ ಕೊಯ್ದದ್ ಲ್ಯಾಕಾಯ್ತ್’
“ಹ ಹ ಹ ಚಟ್ ಕೊಯ್ದದ? ಈ ಹಳಿ ಶಬ್ದ ಕೆಣದೆ ಎಷ್ಟು ಸಮ್ಯಾ ಆಯ್ತ್ – ಒಳ್ಳೆ ಕುಂದಾಪ್ರ ಕನ್ನಡ ಶಬ್ದ
‘ಹೌದಾ – ಇಂಗ್ಲೀಷ್ ನಾಗ್ ‘ಚಿಟ್ – ಚಾಟ್’ ಅಂತ ಹೆಳ್ತ್ರಾರ್‍ಲೆ  – ಅದ್ಕಿಂತ ಮುಂಚೆ ಕುಂದಾಪ್ರ ಕನ್ನಡದವ್ರ್ ಚಟ್ ಕೊಯ್ಯುದು ಎಂಬ ಶಬ್ದ ಮಾಡೀರಲೆ – ಹ್ಯಾಂಗಿತ್?”
‘ಎಂತ ಹೇಳುದು – ಕುಂದಾಪ್ರ ಕನ್ನಡ ಭಾರೀ ಚೆಂದ !” |
‘ಕುಂದಾಪ್ರ ಕನ್ನಡದ್ದ್ ಗಂಡಾಂತರ ಗೊತ್ತಿತ್ತಾ ನಿಂಗೆ?”
‘ನಮ್ಮ ಮಲ್ಲಿ ಡಾಕ್ಟರ್ ದೊಸ್ತಿ ಮೋಹನ ಅಳ್ವಾರ್ ಬಂದಿರ್, ಸ್ವಲ್ಪ ಮಾತಾಡಿ ಹೋದ್ರ್ , ಮಲ್ಲಿ ಡಾಕ್ಟರ್ ಮಾವ ನರಸಿಂ ಶೆಟ್ರ್ ಬಂದ್ ಕೇಂಡ್ರ್, ‘ಮೋನ ಹೋನಾ?’ ಎಂಥ.
ಮಲ್ಲಿ ಡಾಕ್ಟ್ರ್ ಕಣ್ ಕಣ್ ಬಿಟ್ರ್, ಮಾವ ಹಿಂದಿ ಮಾತಾಡ್ತ್ರಲೇ ಎಂತ. ‘ಮಾವ ಇದೆಂತಾ ಹಿಂದಿಯಾ?’ ಅಂತ ಕೇಂಡ್ರ್, ಮಾವ ಅಂದ್ರ್ ‘ಅಲ್ಲ ಮಾರಾಯ ಅದ್,ಕುಂದಾಪ್ರ ಕನ್ನಡ. ಮೋನಾ ಅಂದ್ರೆ ಮೋಹನ, ಹೋನಾ ಅಂದ್ರೆ ಹೋದನಾ? ಗೊತ್ತಾಯಿತಾ?” ಅಂತ ಅಂದ್ರ,
ಆದ್ರೆ ಮಲ್ಲಿ ಡಾಕ್ಟರ್ ನಗಾಡ್ತ ‘ಹೌದು ಗೊತ್ತಾಯ್ತು, ಮೋನ ಹೋಗಯಾ’ ಎಂದಿದ್ರು, ಇಬ್ಬರೂ ನಗಾಡಿರ್‌”ಹೌದಾ, ಬಾರಿ ಗಮ್ಮತ್ತಿನ ಕತೆ’
‘ಇನ್ನೊಂದ್ ಸಲ ಎಂತಾ ಆಯ್ತ್ ಗೊತ್ತಿತ್ತಾ ? ಒಂದು ಫಂಕ್ಷನ್, ನಂದ್ ಸ್ವಾಗತ. ಚಂದ ಮಾಡಿ ಕುಂದಾಪ್ರ ಕನ್ನಡದ ಗೆ ಸ್ವಾಗತ ಮಾಡ್ದೆ , ‘ಕೂಕಣಿ ಕೂಕಣಿ’ ಅಂದೆ. ಎಲ್ಲರಿಗೂ ಖುಷಿ ಆಯ್ತ್ ಆದ್ರೆ ಮಂಗ್ಳುರ್ ಕಡೀಂದ ಬಂದ್ ಒಬ್ ದೊಡ್ಡ್ ಮನ್ಸ್ರಿಗೆ ಸಿಟ್ಟು ಬಂತ್, ‘ಇಂತಾ ಒಳ್ಳೇ ಸಮಾರಂಭವನ್ನು ಕುಂದಾಪುರ ಕನ್ನಡ ಮಾತನಾಡಿ ಹಾಳು ಮಾಡಿ ಬಿಟ್ಟಿರಿ’ ಅಂತ ಹೇಳಿ ಬಿಟ್ರ್, ನನಗೆ ರಕ್ತ ಕುದ್ ಹೋಯ್ತ.ಅವರ ಹತ್ತಿರ ತಿರ್ಗಿ ಹೇಳಿಬಿಟ್ಟೆ – ‘ತ್ಯೌಡ್ಕಂತ್ರ್ಯಾ?’     ಎಲ್ಲ ನಗಾಡಿ ಕೈ ತಟ್ಟಿರ್, ಪಾಪ, ಜನಕ್ಕೆ ಎಂತ ಆಂತ ಅರ್ತು’ವೇ . ‘ಹೆಬ್ಬಾರು ಎಂತ ಹೇಳಿದ್ದು?’ ಅಂತ ಆಚೀಚೆ ಇದ್ದವ್ರ ಹತ್ರ ಕೇಂತಾ ಕೂಕಂಡೀರ್, ಅದ್ರ ಸ್ಪೆಲ್ಲಿಂಗೇ ಗೊತ್ತಾಯ್ಲಿಲ್ಲೆ !” |
‘ಹೌದಾ – ಕುಂದಾಪ್ರ ಕನ್ನಡ ಗ್ರೇಟ್ !

 

ಎ ಎಸ್ ಎನ್ ಹೆಬ್ಬಾರ್

Leave a Reply

Your email address will not be published. Required fields are marked *

error: Content is protected !!