ಕುಂದಾಪುರ ಮಗು ನಾಪತ್ತೆ ಪ್ರಕರಣ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ
ಕುಂದಾಪುರ: ನಿನ್ನೆ ಮಗು ನಾಪತ್ತೆ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದು ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಎಡಮೊಗೆ ಗ್ರಾಮದಿಂದ ನಾಪತ್ತೆಯಾದ ಸಂತೋಷ್ ನಾಯ್ಕ ಮತ್ತು ರೇಖಾ ದಂಪತಿಯ ಒಂದು ವರ್ಷ ಮೂರು ತಿಂಗಳಿನ ಹೆಣ್ಣು ಮಗು ಸಾನ್ವಿಕಾ, ಇದೀಗ ಕುಬ್ಜಾ ನದಿ ತೀರದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ನಾಪತ್ತೆಯಾದ ಪ್ರಕರಣದಿಂದ ಅಪಹರಣದ ವರೆಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪುಟ್ಟ ಬಾಲೆಯ ಮೃತದೇಹ ನದಿ ತೀರದಲ್ಲಿ ಸಿಕ್ಕಿದ್ದು, ಅನುಮಾನಾಸ್ಪದ ಸಾವಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಂತೋಷ್ ಅವರ ಪತ್ನಿ ರೇಖಾ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ನದಿಗೆ ಹಾರಿರುವ ಶಂಕೆಯು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಸಾವಿಗೆ ನಿಖರ ಕಾರಣ ಹುಡುಕುತ್ತಿರುವ ಪೊಲೀಸರಿಂದ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ.