ಹಣಕಾಸಿನ ವಿಚಾರ ಕಂಡೆಕ್ಟರ್‌ನ ಕಡಿದು ಕೊಲೆ; ಓರ್ವ ಆರೋಪಿ ಪೊಲೀಸರ ವಶ

ಉಡುಪಿ: ಖಾಸಗಿ ಬಸ್ ನೌಕರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೈರಂಪಳ್ಳಿ ಎಂಬಲ್ಲಿ ನಡೆದಿದೆ. ಖಾಸಗಿ  ವೈಷ್ಣವಿ ಬಸ್‌ನ  ಸಿಬ್ಬಂದಿ  ಪ್ರಶಾಂತ್ ಪೂಜಾರಿ (35) ಕೊಲೆಯಾದತ. ಮನೆಗೆ ಬಂದ ಸ್ಥಳೀಯರಿಬ್ಬರು ಮಾತನಾಡಲು ಇದೆ ಎಂದು ಹೇಳಿ ಮನೆಯಿಂದ ಹೊರ ಕರೆದು ಹೋದ ಸಿಟಿ ಬಸ್ ಕಂಡಕ್ಟರ್ ಪ್ರಶಾಂತ ಪೂಜಾರಿಯನ್ನು ಮನೆಯಿಂದ ಅನತಿ ದೂರದಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.

ಆತನನ್ನು ಮನೆಯಿಂದ ಹೊರಗೆ ಕರೆದುಕೊಂಡು ಇವರ ನಡುವೆ ಮಾತಿನ ಚಕಮಕಿ ನಡೆದಿದೆ, ಬಳಿಕ ಪ್ರಶಾಂತ್ ಅವರ ಮನೆಯಿಂದಲೇ ಕತ್ತಿಪಡೆದು ಕೊಲೆ ಮಾಡಿದ್ದಾರೆ. 25 ಕ್ಕೂ ಹೆಚ್ಚು ಬಾರಿ ಕತ್ತಿಯಿಂದ ಕಡಿದು ಕೊಲೆ ನಡೆಸಿದ್ದರು.. ಆರೋಪಿಗಳು ಮನೆಯ ಬಾಗಿಲನ್ನು ಮುಚ್ಚಿ ಪ್ರಶಾಂತ ಪತ್ನಿ ವಿಜಯ ಹಾಗೂ ಇಬ್ಬರು ಮಕ್ಕಳನ್ನು ಕೂಡಿ ಹಾಕಿದ್ದರು ಎನ್ನಲಾಗಿದೆ. ಹತ್ಯೆಗೆ ಹಣಕಾಸಿನ ವಿಚಾರವೆಂದು ತಿಳಿದು ಬಂದಿದೆ.

ಆರೋಪಿಗಳಾದ ಅಲಂಗಾರು ರಕ್ಷಕ್ ಪೂಜಾರಿ (19ವರ್ಷ), ಬುಕ್ಕಿಗುಡ್ಡೆ ಸಚಿನ್ ನಾಯ್ಕ (20ವರ್ಷ) ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

ರಕ್ಷಕ್‌ನ ತಂದೆ ಬಡ್ಡಿ ವ್ಯವಹಾರದ ಜೆರಾಲ್ಡ್‌ನಿಂದ ಸಾಲ ಪಡೆದು ಅದರ ಕಮಿಶನ್ ಹಣ 5000 ರೂ. ರಕ್ಷಿತ್‌ಗೆ  ನೀಡದ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನೂ  ಬಡ್ಡಿ ವ್ಯವಹಾರದ ಜೆರಾಲ್ಡ್‌ನನ್ನು ಹಿರಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ತಡ ರಾತ್ರಿ ಸುಮಾರು 12 ರಿಂದ 1 ಗಂಟೆಯ ನಡುವೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳಿಬ್ಬರು ತಾವು ಬರುವಾಗ ತಂದಿದ್ದ ಬೈಕಿನ ಸ್ಟ್ಯಾಂಡ್ ಕಳಚಿದ್ದ ಪರಿಣಾಮ ಬೈಕ್‌ನನ್ನು  ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ ನಾಯಕ್ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!