ಕುಂದಾಪುರ: ಪವಿತ್ರ ರೋಸರಿ ಮಾತಾ ಚರ್ಚಿಗೆ 450 ನೇ ವರ್ಷದ ಸಂಭ್ರಮ


ಕುಂದಾಪುರ : ಪವಿತ್ರ  ರೋಸರಿ ಮಾತಾ ಚರ್ಚ್ (ಧರ್ಮ ಸಭೆ) ಬಹಳ ಪುರಾತನವಾದದ್ದು. ಇದು ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಇಗರ್ಜಿ. ಇದು 1570 ನೇ ಇಸವಿಯಲ್ಲಿ ಪೊರ್ಚುಗೀಸರು ಸ್ಥಾಪಿಸಲ್ಪಟ್ಟ ಇಗರ್ಜಿಯಾಗಿದೆ. ಇದಕ್ಕೆ 450 ವರ್ಷಗಳ ಇತಿಹಾಸ ಇದೆ, ಪ್ರಥಮತ ಸ್ಥಾಪಿಸಲ್ಪಟ್ಟ ರೋಸರಿ ಮಾತಾ ಇಗರ್ಜಿ ಕೋಟೆ ಬಾಗಿಲಲ್ಲಿ ಇದ್ದು, ಕ್ರಮೇಣ ಕಾರಾಣಂತರ ಸ್ಥಳವನ್ನು ಬದಲಿಸಿ ಈಗ ಇದ್ದ ಜಾಗದಲ್ಲಿ ಇಗರ್ಜಿ ಸ್ಥಾಪಿತವಾಯಿತು.

ಈ ಇಗರ್ಜಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 2ನೇ ಹಿರಿಯ ಇಗರ್ಜಿಯಾಗಿದೆ. ಪ್ರಥಮ ಇಗರ್ಜಿ ಮಂಗಳೂರಿನ ರೋಸರಿಯೊ ಕೆಥೆಡ್ರಲ್ ಇಗರ್ಜಿಯಾಗಿದೆ, ಇದು 1568 ನೇ ಇಸವಿಯಲ್ಲಿ ಸ್ಥಾಪಿಯವಾದದ್ದು. ಕುಂದಾಪುರ ಇಗರ್ಜಿ 1570 ನೇ ಇಸವಿಯಲ್ಲಿ ಸ್ಥಾಪಿತವಾಗುವುದಕ್ಕಿಂತ  ಮೊದಲು ಕಾರವಾರ ಪ್ರಾಂತ್ಯದಲ್ಲೂ ಇಗರ್ಜಿ ಇರಲಿಲ್ಲಾ. ಪೊರ್ಚುಗೀಸರು ಸ್ಥಾಪಿಸಲ್ಪಟ್ಟ ಈ ಇಗರ್ಜಿಯನ್ನು  ಗೋವಾದಿಂದ ಬಂದ ಧರ್ಮಗುರುಗಳು, ಭಕ್ತಾಧಿಗಳು ಧಾರ್ಮಿಕ ಆಚರಣೆಯೊಂದಿಗೆ ತಮ್ಮ ಪಾಲಕಿ ಪವಿತ್ರ ರೋಸರಿ ಮಾತೆಯ ಭಕ್ತಿಯನ್ನು ಆಚರಿಸಿಕೊಂಡು ಬಂದಿದ್ದಾರೆ.  ಹಿಂದೆ ಈ ಇಗರ್ಜಿಯ ವ್ಯಾಪ್ತಿ ಬಹಳ ದೂರದ ವರೆಗೂ ವ್ಯಾಪಿಸಿತ್ತು. 


   ಪ್ರಪ್ರಥಮ ಭಾರಿ ಒರ್ವ ಭಾರತೀಯ ಧರ್ಮಗುರುವಿಗೆ ಚರ್ಚಿನ ಪ್ರಧಾನ ಯಾಜಕರಾಗಿ ಅಧಿಕಾರ ಸಿಕ್ಕಿದ್ದೂ ಕೂಡ ಮೊತ್ತ ಮೊದಲು ಕುಂದಾಪುರದಲ್ಲಿ. ಈ ಅಧಿಕಾರ ಗಳಿಸಿಕೊಂಡವರು ಧರ್ಮಗುರು ಜೋಸೆಫ್ ವಾಜ್‍ರವರಾಗಿದ್ದಾರೆ. ಇವರಿಂದ ಅನೇಕ ಪವಾಡಗಳು ನಡೆದಿವೆ, ಇವರನ್ನು 2015 ರಲ್ಲಿ ಪೋಪ್ ಫ್ರಾನ್ಸಿಸ್‍ರವರಿಂದ  ಸಂತ ಪದವಿಯಿಂದ ಪುರ್ಸಕ್ರತ ಮಾಡಿದ್ದು ಕುಂದಾಪುರಕ್ಕೆ ಕೀರಿಟಪ್ರಾಯವಾಗಿದೆ.  ಇಂತಹ ಸಂತ ಮಹಾತ್ಮನ ಸೇವೆ ಅದೂ ಪ್ರಧಾನ ಗುರುಗಳಾಗಿ ಕುಂದಾಪುರಕ್ಕೆ ಲಭಿಸಿದ್ದು ನಮ್ಮ ಪುಣ್ಯ.

ಈ ವರ್ಷ ನಾವು ನಮ್ಮ ಇಗರ್ಜಿಯ 450 ವರ್ಷದ ಆಚರಣೆಯನ್ನು ರೋಸರಿ  ಮಾತೆಯ ತಾರೀಕಿನ ಹಬ್ಬದಂದು ಒಕ್ಟೋಬರ್ 7 ರಂದು  ಆರಂಭಿಸುತ್ತಿದ್ದೆವೆ. ಈ ಸಂಭ್ರಮ ಒಂದು ವರ್ಷದ ತನಕ ಅಂದರೆ 2020 ರ ತನಕ ವಿವಿಧ ದಾರ್ಮಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಕ್ರಮಗಳು ಆಚರಿಸುತ್ತಾ ಇಗರ್ಜಿ ಕಟ್ಟಡಕ್ಕೆ ಸಂಬಂಧ ಪಟ್ಟಂತ್ತೆ ದುರಸ್ತಿಯಂತ ಯೋಜನೆಗಳು ಹಮ್ಮಿಕೊಂಡಿದ್ದೆವೆ. ಆ ಕಾರಣ ನಮ್ಮ ಇಗರ್ಜಿಯ ಸಾಮಾಜಿಕ ಮಾಧ್ಯಮ ಸಂಪರ್ಕದ ಸಂಚಾಲಕರಾದ ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮಾಧ್ಯಮಗಳಿಗೆ ಆಯಾಯಾ ಕಾರ್ಯಕ್ರಮಗಳ ಸುದ್ದಿಯನ್ನು ನೀಡುವರು. ಇದಕ್ಕಾಗಿ ಮಾಧ್ಯದವರು ಅವರನ್ನು ಸಂಪರ್ಕರಿಸಬಹುದು. ಸಮಸ್ತ ನಾಡಿನ ಜನತೆಗೆ ಪಾವಿತ್ರೆ ರೋಸರಿ ಅಮ್ಮಾ ಅಶಿರ್ವದಿಸಿಲಿ, ಒಳಿತನ್ನು ಉಂಟು ಮಾಡಲೆಂದು ಹರಸುತ್ತೇವೆ’ ಎಂದು ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!