ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಇದು ರಾಜ್ಯ ಸರಕಾರದ ದೋರಣೆ – ಕೋಟ ಶ್ರೀನಿವಾಸ್ ಪೂಜಾರಿ ಟ್ವಿಟ್
ಮೈತ್ರಿ ಸರಕಾರದ ಸ್ಥಿತಿ ಡೋಲಾಯಮಾನವಾಗಿರುವ ಸಂದರ್ಭದಲ್ಲಿ ಸರಕಾರದ ನಡೆಯನ್ನು ಕುರಿತು ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟ್ವಿಟ್ ಮಾಡಿ ಪ್ರಶ್ನಿಸಿದ್ದಾರೆ. ತಮ್ಮ ಟ್ವಿಟ್ವಿ ನಲ್ಲಿ ಇತ್ತೀಚೆಗೆ ವಿಧಾನ ಸೌಧದ ಮೂರನೇ ಮಹಡಿ ಯಲ್ಲಿ ಗ್ರಂಥಪಾಲಕನಿಗೆ ವೇತನ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ್ದು ಆತನಿಗೆ ವೇತನ ನೀಡುವುದು ಬಿಟ್ಟು ಈ ಘಟನೆಗೆ ಸಂಬಂಧಿಸಿ 10 ಮಂದಿ ಪೊಲೀಸರನ್ನು ಅಮಾನತು ಮಾಡಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ದೋರಣೆ ಎಂಬಂತಾಗಿದೆ.
ಬಡ ನೌಕರರಿಗೆ ವೇತನ ನೀಡಿ ಸಂಕಷ್ಟ ಪರಿಹರಿಸಬೇಕಿತ್ತು ಇದೆಲ್ಲ ನೋಡುವಾಗ ರಾಜ್ಯದಲ್ಲಿ ಸರ್ಕಾರ ವಿದೆಯೇ ? ಎಂಬುದಾಗಿ ತಮ್ಮ ಟ್ವಿಟ್ ನ ಮೂಲಕ ಸರಕಾರಕ್ಕೆ ಖಾರವಾಗಿ ಪ್ರಶ್ನಿಸಿದ್ದಾರೆ ಈ ಟ್ವಿಟ್ ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಎಂ ಬಿ ಪಾಟೀಲ್ ರವರಿಗೆ ಟ್ಯಾಗ್ ಮಾಡಿದ್ದಾರೆ…