ಬಿ.ಸಿ.ರೋಡಿನ ಗ್ರಂಥಾಲಯದಲ್ಲಿ ಆರಂಭಗೊಂಡ “ಓದುವ ತಿಂಗಳು”

ಬಂಟ್ವಾಳ: ಗ್ರಂಥಾಲಯ ನೆಮ್ಮದಿ  ಮತ್ತು  ಮನಸ್ಸು ಕೇಂದ್ರೀಕೃತ ಗೊಳಿಸುವ ದೇವಾಲಯವಿದ್ದಂತೆ.ಮಕ್ಕಳು ಓದುವ ಹವ್ಯಾಸ ವನ್ನು ಬೆಳಸಿಕೊಳ್ಳಬೇಕು.ಎಂದು ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ  ಅವರು ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಹಾಗೂ ಬಂಟ್ವಾಳ ಶಾಖೆಯ ವತಿಯಿಂದ ಬಿ.ಸಿ.ರೋಡಿನ ಗ್ರಂಥಾಲಯದಲ್ಲಿ ಮಂಗಳವಾರದಿಂದ ಆರಂಭಗೊಂಡ  “ಓದುವ ತಿಂಗಳು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಒದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನ ವೃದ್ದಿಯಾಗುತ್ತದೆ, ಪಾಠದ ಜೊತೆಯಲ್ಲಿ ಗ್ರಂಥಾಲಯಕ್ಕು ಹೋಗುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಜಯಂತಿ ಗಂಗಾಧರ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ  ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು  ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಾಲಾಯಧಿಕಾರಿ ಮಮತಾ ರೈ, ಜಿಲ್ಲಾ ಕೇಂದ್ರ ಗ್ರಂಥಾಲಯ ದ ಗ್ರಂಥ ಪಾಲಕಿ ಗಾಯತ್ರಿ, ಓದುಗರಾದ ಜೆರೊಮ್ ರೋಡ್ರಿಗಸ್, ಗ್ರಂಥಾಲಯ ಸಿಬ್ಬಂದಿ ಸುಜಾತ ಹಾಗೂ ಯಶವಂತಿ ಉಪಸ್ಥಿತರಿದ್ದರು. ಶಾಖಾ ಗ್ರಂಥ ಪಾಲಕಿ ಪ್ರಣಿತಾಪ್ರಿಯಾ ಮೊಂತೆರೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಖಾ ಗ್ರಂಥ ಪಾಲಕರಾದ ನಮಿತ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!