ಕಡಿಯಾಳಿಯಲ್ಲಿ ಗದ್ದೆಯಲ್ಲಿ ಮಿಂದೆದ್ದ ಯುವ ಜನತೆ
ಕರಾವಳಿಯಲ್ಲಿ ಮುಂಗಾರು ಜೋರಾಗಿದ್ದು, ನೇಜಿ ಕಾರ್ಯ ಭಾಗಶಃ ,ಪೂರ್ಣಗೊಂಡಿದೆ. ರೈತ ರು ನಿರಾಳವಾಗಿ ಇನ್ನು ಫಸಲನ್ನು ಕಾಯುವ ಈ ದಿನಗಳಲ್ಲಿ..
ಗದ್ದೆಯ ಮೌಲ್ಯ ಯುವಜನರಿಗೆ ಅರಿವಿಗೆ ಬರುವ ಸದುದ್ದೇಶದಿಂದ ಕೆಸರಿನಲ್ಲಿ ಒಂದು ದಿನ ಎಂಬ ಕಾರ್ಯಕ್ರಮ ಕರಾವಳಿಯಲ್ಲಿ ನಡೆಯುತ್ತಿದ್ದೆ ಕೆಸರು ಗದ್ದೆಯಲ್ಲಿ ಇವರ ಓಟಕ್ಕೆ ಚಿಮ್ಮುತ್ತಿದ್ದ ಮಣ್ಣಿನ ನೀರು , ಪ್ರತಿಯೊಬ್ಬರಿಗೂ ಕೆಸರಿನ ಸ್ನಾನವನ್ನೇ ಮಾಡಿಸುತ್ತಿತ್ತು, ಲಿಂಗ ಭೇದ ಜಾತಿ ಭೇದವಿಲ್ಲದೇ ಎಲ್ಲರು ಗದ್ದೆಯಲ್ಲಿ ಮಿಂದೆದ್ದ ಕ್ಷಣವದು, ತಾವು ಈ ಕ್ರೀಡೆಯಲ್ಲಿ ಗೆಲ್ಲಬೇಕೆಂಬ ಉತ್ಸಾಹದಕ್ಕಿಂತ ಆಟ ಆಡುವುದರಲ್ಲೇ ಸಂತೋಷವನ್ನ ಕಾಣುತ್ತಿದ್ದರು , ಮಕ್ಕಳಂತೂ ಗದ್ದೆಯಲ್ಲಿ ಮೈ ಕೈಗೆ ಮಣ್ಣು ಮೆತ್ತಿಸಿಕೊಂಡು ಬಿದ್ದು ಹೊರಳಾಡುತ್ತಿದ್ದರು.
ಈ ದ್ರಶ್ಯವನ್ನ ಅದೆಷ್ಟೋ ಜನ ಕಣ್ಣು ತುಂಬಿಸಿಕೊಂಡರು ಇದೆಲ್ಲ ನಡೆದದ್ದು ಉಡುಪಿ ಸಾರ್ವಜನಕ ಶ್ರೀ ಗಣೇಶೋತ್ಸವ ಸಮಿತಿವತಿಯಿಂದ ,ರವಿವಾರ ಕಡಿಯಾಳಿ ದೇವಸ್ಥಾನ ವಠಾರದಲ್ಲಿ ಗ್ರಾಮೀಣ ಗದ್ದೆ ಕ್ರೀಡಾ ಕೂಟ ದಲ್ಲಿ .
ಕಡಿಯಾಳಿ ದೇವಸ್ಥಾನ ವಠಾರದಲ್ಲಿ ನಡೆದ ಸಾರ್ವಜಿನಿಕ ಕೆಸರು ಗದ್ದೆ ಕ್ರೀಡಾಕೂಟ ಗ್ರಾಮೀಣ ಪ್ರದೇಶದ ಸೊಗಡನ್ನು ಅನಾವರಣಗೊಳಿಸುತಿತ್ತು. ಕೆಸರು ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ವಾಲಿಬಾಲ್ , ಓಟ, ಹಿಮ್ಮುಖ ಓಟ, ನಿಧಿ ಹುಡುಕಾಟ, ಪಾಲೆ ಎಳೆತ, ಜೋಡಿ ಓಟ, ತ್ರೋ ಬಾಲ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವಜನತೆ ಮನಸೋ ಇಚ್ಛೆ ಖುಷಿಪಟ್ಟರು.
ಮಹಿಳೆಯರೂ ತಮ್ಮ ಮುಜುಗರವನ್ನೆ ಬಿಟ್ಟು ಮಣ್ಣು ಮೆತ್ತಿಕೊಂಡು ಆಟವಾಡಿದರು. ಮಣ್ಣಿ, ಸಾನ್ನ ಮಾಡದವರನ್ನು ಅಟ್ಟಾಡಿಸಿಕೊಂಡು ಹೋಗಿ ಅವರನ್ನು ಕೆಸರಲ್ಲಿ ಹಣ್ಣುಗಾಯಿ ನೀರುಗಾಯಿ ಮಾಡಿದರು. ಈ ಕ್ರೀಡಾಕೂಟ ಸಂಭ್ರಮಿಸುವುದೊಂದೇ ಎಲ್ಲರ ಉದ್ದೇಶವಾಗಿತ್ತು.
ಮಧ್ಯಾಹ್ನ ತುಳುನಾಡಿನ ಭೋಜನವಾದ ಗಂಜಿ, ತಿಮರೆ ಚೆಟ್ನಿ, ಪತ್ರೋಡೆ, ಸಂಡಿಗೆ, ಹುರುಳಿ ಚಟ್ನಿ ಸೇವಿಸಿ ಸಂಭ್ರಮಿಸಿದರು. ಟಿ.ಎಂ.ಎ. ಪೈ ಆಸ್ಪತ್ರೆಯ ಮುಖ್ಯಸ್ಥ ಡಾ| ಶಶಿಕಿರಣ್ ಉಮಾಕಾಂತ್ ಮಾತನಾಡಿ, ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡು ಉಳಿಸುವ ನಿಟ್ಟಿನಲ್ಲಿ ಕೆಸರ ಗೆದ್ದೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳು ಅಗತ್ಯ ಎಂದರು.
ಉದ್ಯಮಿ ಭೀಮ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಶುಭಾಹಾರೈಸಿದರು. ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸ ಸಮಿತಿ ಅಧ್ಯಕ್ಷ ಪಿ.ವಸಂತ ಭಟ್, ಕೆಸರು ಗದ್ದೆ ಮಾಲೀಕರಾದ ಶೇಖರ್ ಕಡಿಯಾಳಿ, ಮನೋಹರ್ ಕಡಿಯಾಳಿ ಉಪಸ್ಥಿತರಿದ್ದರು. ವಲ್ಲಭ ಭಟ್ ಸ್ವಾಗತಿಸಿ, ಸತೀಶ್ ವಂದಿಸಿದರು. ರಾಘವಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.