ಈಶಾನ್ಯ ರಾಜ್ಯಗಳಲ್ಲಿ ಕರ್ನಾಟಕ ಭವನ ಮುಖ್ಯಮಂತ್ರಿ ಗೆ ಶೀಘ್ರ ಮನವಿ- ನಾಗಾಲ್ಯಾಂಡ ರಾಜ್ಯಪಾಲರು

ಉಡುಪಿ – ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದೊಂದಿಗೆ ದೇಶದ ಈಶಾನ್ಯ ರಾಜ್ಯಗಳೊಂದಿಗಿನ‌ ನಂಟು ಗಾಢಗೊಳಿಸುವ ಕಾರ್ಯ ನಡೆಯಬೇಕಾಗಿದೆ.ಆ ನಿಟ್ಟಿನಲ್ಲಿ ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯದ ರಾಜ್ಯಗಳಲ್ಲಿ ( ನಮಸ್ತೆ ರಾಜ್ಯಗಳು) ನಾಗಾಲ್ಯಾಂಡ್, ಅಸ್ಸಾಮ್ ಮಣಿಪುರ,ಅರುಣಾಚಲಪ್ರದೇಶ,ಸಿಕ್ಕಿಮ್ , ತ್ರಿಪುರಾ ,ಗಳಲ್ಲಿ ಕರ್ನಾಟಕ ಭವನಗಳನ್ನು ಸ್ಥಾಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ರಾಜ್ಯದ ನೂತನ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪನವರಲ್ಲಿ ಮನವಿ ಮಾಡುವುದಾಗಿ ನಾಗಾಲ್ಯಾಂಡ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ ಅವಧಿ ಪೊರೈಸುತ್ತಿರುವ ಪಿ ಬಿ ಆಚಾರ್ಯ ತಿಳಿಸಿದ್ದಾರೆ.
ಉಡುಪಿ ಭೇಟಿಯ ವೇಳೆ ಸೋಮವಾರದಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣಷದರ್ಶನ ಪಡೆದು ಪರ್ಯಾಯ ಶ್ರೀ ಪಲಿಮಾರು ಶ್ರೀಗಳವರಿಂದ ಅನುಗ್ರಹ ಸ್ವೀಕರಿಸಿದರು.ಈ ವೇಳೆ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಯವರು ತಮ್ಮಲ್ಲಿ ಈಶಾನ್ಯ ರಾಜ್ಯಗಳಲ್ಲಿ‌ಕನ್ನಡ ಭವನವನ್ನು ತೆರಯುವ ಮತ್ತು ಅಲ್ಲಿಗೆ ಭೇಟಿ ನೀಡುವ ರಾಜ್ಯದ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಮಾಡುವಂತೆ ವಿನಂತಿಸಿದ್ದರು. ಇದನ್ನು ಸಂತೋಷದಿಂದ ಅಂಗೀಕರಿಸಿದ ಅವರು ಶೀಘ್ರವೇ ರಾಜ್ಯದ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಿ ಎಸ್ ಯಡಿಯೂರಪ್ಪನವರನ್ನು ಶುಭಾಶಯ ಕೋರಿದರು.
ಕುಟುಂಬ ಸಮೇತರಾಗಿ ಆಗಮಿಸಿದ ಶ್ರೀ ಆಚಾರ್ಯರು ಕೃಷ್ಣ ಮಠದಲ್ಲಿ ನೂತನವಾಗಿ ನಿರ್ಮಿಸಲಾದ  ಸುವರ್ಣ ಗೋಪುರವನ್ನು ವೀಕ್ಷಿಸಿ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು.ಬಳಿಕ ಅನ್ನಧರ್ಮ ಸಭಾಂಗಣದಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!