ಬಳ್ಳಾರಿ: ಅ.24 ರಿಂದ 27 ಕರ್ನಾಟಕ ಯುವಜನೋತ್ಸವ 2019

ಬಳ್ಳಾರಿ: ಕರ್ನಾಟಕದ 1600 ಕ್ಕೂ ಹೆಚ್ಚು ಯುವ ನಾಯಕರು ಬಳ್ಳಾರಿಯಲ್ಲಿ ಇದೇ ದಿನಾಂಕ 24 ರಿಂದ27- ವರೆಗೆ ಜರಲಿರುವ ಯುವಜನೋತ್ಸವದಲ್ಲಿ ಭಾಗವಹಿಸಿ ಭೂಮಿಯ ಆರೈಕೆಯ ಮೂಲಕ ನವ ವಿಶ್ವದ ನಿರ್ಮಾಣಕ್ಕಾಗಿ ತಮ್ಮನ್ನೇ ತೊಡಗಿಸಿಕೊಳ್ಳಲಿರುವರು.


ಈ ಯುವಜನೋತ್ಸವವು ಕರ್ನಾಟಕ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಪರಿಷತ್ತಿನ ಕರ್ನಾಟಕ ಯುವಜನ ಆಯೋಗ ಕ್ಯಾಥೋಲಿಕ್ ಮತ್ತು ಬಳ್ಳಾರಿ ಧರ್ಮಾಕ್ಷೇತ್ರದ ಸಹಯೋಗದೊಂದಿಗೆ ಜರುಗಲಿದ್ದು, ನಾಯಕತ್ವದ ಮೂಲಕ ಯುವಕರನ್ನು ಸಬಲೀಕರಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮವು ಬಳ್ಳಾರಿಯ ಆರೋಗ್ಯ ಮಾತೆ ದೇವಾಲಯದ ಆವರಣದಲ್ಲಿರುವ ಆಧ್ಯಾತ್ಮ ಸಭಾಂಗಣದಲ್ಲಿ ಜರುಗಲಿದೆ.


ಯುವಜನೋತ್ಸವದಲ್ಲಿ ಭೂಮಿಯ ಸಂರಕ್ಷಣೆ, ನೂತನ ಕೃಷಿಕಾರ್ಯಕ್ಕೆ ಪ್ರೇರಣೆ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಸಬಲೀಕರಣ, ಸರ್ವಧರ್ಮೀಯ ಸಾಮರಸ್ಯ, ಮುಂತಾದ ವಿಷಯಗಳ ಬಗೆಗೆ ಯುವಜನರು ಚಿಂತನೆ ನಡೆಸುವರು. ಯುವಜನತೆಯನ್ನು ಉದ್ದೇಶಿಸಿ ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯಸ್ವಾಮಿಗಳು ತೋಂಟದಾರ್ಯ ಮಠ, ಮುಂಡರಗಿ, ಮತ್ತು ನಿಷ್ಕಲ ಮಂಟಪ, ಬೇಲೂರು, ಸರ್ವೋಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮತ್ತು ಮಾನ್ಯ ಕರ್ನಾಟಕ ಲೋಕಾಯುಕ್ತ ಮಾನ್ಯಶ್ರೀ ಸಂತೋಷ್ ಹೆಗ್ಡ, ರಾಷ್ಟ್ರೀಯ ನವ ಕೃಷಿ ಪದ್ಧತಿ ಖ್ಯಾತೆ ಶ್ರೀಮತಿ ಕವಿತ ಮಿಶ್ರ, ಶ್ರೀ ಸೂರ್ಯನಾರಾಯಣ ರೆಡ್ಡಿ ಮುಂತಾದವರು ಯುವಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.


ದಿ24 ರಂದು ಸಾಯಂಕಾಲ 5 ಗಂಟೆಗೆ ಬಳ್ಳಾರಿ ಧರ್ಮಾಧ್ಯಕ್ಷರಾದ ಪೂಜ್ಯ ಹೆನ್ರಿ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ಉದ್ಗಾಟನಾ ಸಮಾರಂಭ ನಡೆಯಲಿದೆ. ತೋಂಟದಾರ್ಯ ಮಠ, ಮುಂಡಾರಗಿ ಮತ್ತು ನಿಷ್ಕಲ ಮಂಟಪ ಬೇಲೂರಿನ ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳು ಸಭೆಯನ್ನು ಉದ್ಗಾಟಿಸುವರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀ ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ ಶ್ರೀ ಕೆ. ಸಿ. ಕೊಂಡಯ್ಯ, ಶ್ರೀ ಅಲ್ಲಂ ವೀರಭದ್ರಪ್ಪನವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಯುವಜನೋತ್ಸವ ದಿನಗಳಲ್ಲಿ ಈ ಕೆಳಗಿನ ವಿವಿಧ ಸೇವಾಕಾರ್ಯಗಳು ನಡಯಲಿವೆ:
ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಮಾನ್ಯ ಶ್ರೀ ಶ್ರೀರಾಮುಲು ರವರು ಸ್ವಚ್ಛ ಭಾರತ ಅಭಿಯಾನ ವಿಮ್ಸ್ ಆವರಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಬಳ್ಳಾರಿ ಧರ್ಮಾಧ್ಯಕ್ಷರು ಬಿಷಪ್ ಹೆನ್ರಿ ಡಿ’ಸೋಜ , ಬಳ್ಳಾರಿ ಧರ್ಮಾಧ್ಯಕ್ಷರು ಫಾ.ಲೂರ್ದ್ ರಾಜ್ , ಫಾ. ಐವನ್ ಪಿಂಟೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!