ಕಾಪು ಜೇಸಿಐಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ, ಜೈಜವಾನ್ – ಜೈ ಕಿಸಾನ್ ಸನ್ಮಾನ ಕಾರ್ಯಕ್ರಮ

ಕಾಪು : ತರಬೇತಿ, ವ್ಯಕ್ತಿತ್ವ ವಿಕಸನವನ್ನೇ ಜೀವಾಳವನ್ನಾಗಿಸಿಕೊಂಡಿರುವ ಜೇಸಿ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. ತನ್ನದೇ ಆದ ಆಶಯವನ್ನು ಹೊಂದಿಕೊಂಡು, ಸಂವಿಧಾನ ಬದ್ಧವಾದ ಯೋಜನೆಗಳೊಂದಿಗೆ ಸಮರ್ಥ ನಾಯಕತ್ವದ ವಿಚಾರಧಾರೆಗಳೊಂದಿಗೆ ಮುನ್ನಡೆಯುತ್ತಿರುವ ಜೇಸಿ ಸಂಸ್ಥೆಯು ಯುವ ಜನರ ಪಾಲಿನ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜೇಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು ಹೇಳಿದರು.

ಕಾಪು ಜೇಸಿಐ, ಜೇಸಿರೆಟ್ ಮತ್ತು ಯುವ ಜೇಸಿ ವಿಭಾಗದ ಜಂಟಿ ಸಂಯೋಜನೆಯಲ್ಲಿ ಬುಧವಾರ ಕಾಪು ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

 

 

ಜೇಸಿಐ ನಿಕಟಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮಾತನಾಡಿ, ದೇಶದ ಗಡಿ ಕಾಯುವ ಯೋಧ ಮತ್ತು ದೇಶದ ಬೆನ್ನೆಲುಬಾಗಿರುವ ರೈತನನ್ನು ಗುರುತಿಸಿ, ಅವರನ್ನು ಜೇಸಿ ವೇದಿಕೆಯಲ್ಲಿ ಸಮ್ಮಾನಿಸುವುದು ಅತ್ಯಂತ ವಿಶೇಷ ಕಾರ್ಯಕ್ರಮವಾಗಿದೆ. ಈ ಮೂಲಕ ಸಮಾಜದಲ್ಲಿ ದೇಶಕ್ಕಾಗಿ ದುಡಿಯುವವರನ್ನೂ ಗುರುತಿಸುವ ಅವಕಾಶ ಲಭಿಸಿದೆ ಎಂದರು.

ಜೈ ಜವಾನ್ – ಜೈ ಕಿಸಾನ್ ಕಾರ್ಯಕ್ರಮದ ಅಂಗವಾಗಿ ಭಾರತೀಯ ಸೇನೆಯ ಯೋಧ ಸಂತೋಷ್ ಕೋಟ್ಯಾನ್ ಕಾಪು, ಪ್ರಗತಿಪರ ಕೃಷಿಕ ಸಂಜೀವ ಕುಲಾಲ್ ಕಳತ್ತೂರು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾಪು ಜೇಸಿಐಗೆ ಭೇಟಿ ನೀಡಿದ ವಲಯಾಧ್ಯಕ್ಷರನ್ನು ಸನ್ಮಾನಿಸಲಾಯಿತು.

 

ವಲಯ ಉಪಾಧ್ಯಕ್ಷ ಮಕರಂದ್ ಸಾಲ್ಯಾನ್, ವಲಯ ನಿರ್ದೇಶಕಿ ಸೌಮ್ಯಾ ರಾಕೇಶ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ರಕ್ಷಿತ್ ಕುಡುಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪೂರ್ವ ವಲಯಾಧ್ಯಕ್ಷ ಹರೀಶ್ಚಂದ್ರ ಅಮೀನ್, ಕಾಪು ಜೇಸಿಐನ ನಿಕಟಪೂರ್ವ ಅಧ್ಯಕ್ಷ ರಮೇಶ್ ನಾಯ್ಕ್, ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದ ನಿರ್ದೇಶಕಿ ಶಶಿಪ್ರಭಾ ಎಸ್. ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ಶ್ರುತಿ ಶೆಟ್ಟಿ, ಯುವ ಜೇಸಿ ಅಧ್ಯಕ್ಷ ಆದಿತ್ಯ ಪಿ. ಗುರ್ಮೆ, ಕಾಪು ಜೇಸಿಐನ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ಜೇಸಿಐನ ಪೂರ್ವಾಧ್ಯಕ್ಷ ನೀಲಾನಂದ ನಾಯ್ಕ್ ಅವರು ಆಟಿಡೊಂಜಿ ದಿನದ ಮಹತ್ವವನ್ನು ವಿವರಿಸಿದರು.

ಕಾಪು ಜೇಸಿಐನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಶಿವಣ್ಣ ಬಾಯಾರ್, ಸದಸ್ಯರಾದ ಸತ್ಯವತಿ, ಕೇಶವ ಮೊಯ್ಲಿ ಸಮ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!