ಕಾಪು ಠಾಣಾ ಎಸ್‌ಐ ಬಿ.ಲಕ್ಷ್ಮಣ್ ನಿಧನ

ಉಡುಪಿ: ಕಾಪು ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಈ ಹಿಂದೆ ಉಡುಪಿ ನಗರ ಠಾಣೆ , ಮಲ್ಪೆ,ಬ್ರಹ್ಮಾವರ, ಕಟಪಾಡಿ ಹೊರ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿದ್ದ ಬಿ.ಲಕ್ಷ್ಮಣ್ (58) ಕಳೆದ ಕೆಲವುದಿನಗಳಿಂದ ಅಸೌಖ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಸಂಜೆ5.30೦ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಪುತ್ತೂರು ಮೂಲದ ಇವರು ಕಾಪು ಠಾಣೆಯಲ್ಲಿ ಐದು ವರ್ಷಗಳ ಕಾಲ ಕ್ರೈಮ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಹಲವಾರು ಪ್ರಕರಣಗಳನ್ನು ಭೇದಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದ್ದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

1 thought on “ಕಾಪು ಠಾಣಾ ಎಸ್‌ಐ ಬಿ.ಲಕ್ಷ್ಮಣ್ ನಿಧನ

Leave a Reply

Your email address will not be published. Required fields are marked *

error: Content is protected !!