ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪ್ರಧಾನ ಕಾರ್‍ಯಕ್ರಮ
ಕನ್ನಡ ಸಾಹಿತ್ಯ ಪರಿಷತ್ ನೀಡಿದ ದತ್ತಿ ಪ್ರಶಸ್ತಿಗಳನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಧಾನ ಮಾಡಲಾಯಿತು. ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ| ಮನು ಬಳಿಗಾರ ಅವರ ಅಧ್ಯಕ್ಷತೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಶ್ರೀಮತಿ ಕೆ.ಎಂ. ಜಾನಕಿ ಪ್ರಶಸ್ತಿ ಪ್ರದಾನ ಮಾಡಿದರು.
ಉಡುಪಿ ಜಿಲ್ಲೆಯ ನಾಲ್ಕು ಲೇಖಕರು ಈ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಾ| ಮಹಾಬಲೇಶ್ವರ ರಾವ್ ಅವರ ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ? ಎಂಬ ಕೃತಿಗೆ ದಿ| ಡಾ| ಎ.ಎಸ್. ಧರಣೇಂದ್ರಯ್ಯ- ಮನೋವಿಜ್ಞಾನ ದತ್ತಿ ಪ್ರಶಸ್ತಿ, ಡಾ| ನಿಕೇತನ ಅವರ ಬೊಗಸೆಯಲ್ಲಿ ಸಾಗರ ಕೃತಿಗೆ ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿ, ಶ್ರೀ ಗಂಗಾಧರ ಐತಾಳ್ ಅವರ ಮಕ್ಕಳಿಗಾಗಿ ಖಗೋಳ ವಿಜ್ಞಾನ ಕೃತಿಗೆ ಜಿ.ಪಿ. ರಾಜಾರತ್ನಂ ಸಂಸ್ಮರಣಾ ದತ್ತಿ ಪ್ರಶಸ್ತಿ ಹಾಗೂ ಅಂಶು ಸಂಹಿತ್ ಅವರ ಕ್ಯಾಂಡಲ್ ಡಾಲ್ ಕೃತಿಗೆ ಸಿಸು ಸಂಗಮೇಶ್ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.