ಸಿಎಂ ರಾಜೀನಾಮೆ ನೀಡುವುದೇ ಒಳಿತು : ಶೋಭಾ ಕರಂದ್ಲಾಜೆ

ಚಿಕ್ಕಬಳ್ಳಾಪುರ: ಸಿಎಂ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಕೆಎಐಎಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಅಧಿವೇಶನ ಇಂದಿನಿಂದ ಆರಂಭವಾಗಿದೆ ಎಂದರು.

ಮುಖ್ಯಮಂತ್ರಿ ಜನರ ಹಾಗೂ ಶಾಸಕರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಒಂದೇ ವರ್ಷದಲ್ಲಿ ಮಹಾಘಟಬಂಧನ್ ವೈಫಲ್ಯ ಕಂಡಿದೆ. ಮುಖ್ಯಮಂತ್ರಿಗಳಿಗೆ ಈಗ ಒಂದೇ ದಾರಿ ಉಳಿದಿದೆ. ಅವರು ಇಂದು ರಾಜೀನಾಮೆ ನೀಡಬೇಕು ಹಾಗೂ ಹೊಸ ಸರ್ಕಾರ ರಚನೆ ಮಾಡುವುದಕ್ಕೆ ಅವಕಾಶ ಕೊಡಬೇಕು. ಇದು ಜನರ ಹಾಗೂ ಶಾಸಕರ ಆಗ್ರಹ ಎಂದು ಶೋಭಾ ತಿಳಿಸಿದ್ದಾರೆ.

ಭಾನುವಾರ ರಮಡ ರೆಸಾರ್ಟಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ಬಳಿಕ ಶೋಭಾ ಕರಂದ್ಲಾಜೆ ಅವರು, ಭಂಡ ಧೈರ್ಯದಿಂದ ಸಿಎಂ ಬಹುಮತ ಸಾಬೀತು ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ಬಹುಮತವೇ ಇಲ್ಲ ಎಂದು ವ್ಯಂಗ್ಯವಾಡಿದ್ದರು

Leave a Reply

Your email address will not be published. Required fields are marked *

error: Content is protected !!