ಕೈಕಂಬ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ
ಗುರುಪುರದ ಯುವ ಸಂಘಟನೆ ಪಿವೈಸಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 2019 ಜುಲೈ 27 ಆನಿ 28 ರಂದು ಗುರುಪುರ ಪೊಂಪೈ ಮಾತೆಯ ಚರ್ಚ್ ಸಭಾಂಗಣದಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ ನಡೆಯಿತು.
ಧರ್ಮಗುರು ವಂ. ಆಂಟನಿ ಲೋಬೊ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚಿಸಿದರು. ಮುಖ್ಯ ತರಬೇತುದಾರರಾಗಿ ಆಗಮಿಸಿದ ಎರಿಕ್ ಒಝೇರಿಯೊ 67 ವಿವಿಧ ಸಾಂಪ್ರದಾಯಿಕ ಹಾಡುಗಳ ಚರಿತ್ರೆ ವಿವರಿಸಿ, ರಾಗಬದ್ಧವಾಗಿ ಹಾಡಲು ಕಲಿಸಿದರು. ಜೊಯ್ಸ್ಒಝೇರಿಯೊ, ಎಲ್ರೊನ್ ರೊಡ್ರಿಗಸ್, ಜೇಸನ್ ಲೋಬೊ ಮತ್ತು ಕಿಂಗ್ಸ್ಲೀ ನಜ್ರೆತ್ ಸಹಕರಿಸಿದರು.
ಸಮಾರೋಪದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರಿಚಾರ್ಡ್ ಫೆರ್ನಾಂಡಿಸ್ ಇವರು ಪ್ರಮಾಣ ಪತ್ರ ವಿತರಿಸಿದರು. ಪಿ.ವೈ.ಸಿ ಸಚೇತಕ ಜೆಫ್ರಿಯನ್ ತಾವ್ರೊ, ಅಧ್ಯಕ್ಷ ಜೈಸನ್ ಸಿಕ್ವೇರಾ ಹಾಗೂ ಕಾರ್ಯದರ್ಶಿ ಆನ್ಸಿಲ್ಲಾ ಪಿಂಟೊ ಉಪಸ್ಥಿತರಿದ್ದರು.