ಜೇಸಿಐ ಕುಂದಾಪುರ : ಸಸ್ಯ ಸಂಜೀವಿನಿ ಕಾರ್ಯಕ್ರಮ
ಹಸುರನ್ನು ನೆಟ್ಟು ಬೆಳೆಸುವ ಕಾರ್ಯವನ್ನು ನಮ್ಮ ಅದ್ಯತೆಯಾಗಿಸಿಕೊಂಡು ಪ್ರಾಮಾಣಿಕ ಕಾಳಜಿಯೊಂದಿಗೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಪಾಲಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಜೊತೆಗೆ ಮಳೆ ನೀರು ಕೊಯ್ಲನ್ನು ಪರಿಣಾಮಕಾರಿಯಾಗಿ ಅನುಷ್ಟಾನಿಸಲು ನಾವೆಲ್ಲರೂ ಕಾರ್ಯೋನ್ಮುಖರಾಗಬೇಕಿದೆ” ಎಂದು ಗೀತಾನಂದ ಫೌಂಡೇಶನ್ (ರಿ) ಮಣೂರು ಪಡುಕರೆ ಇದರ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್ ಹೇಳಿದರು.
ಅವರು ಜೇಸಿಐ ಕುಂದಾಪುರ ದ ವತಿಯಿಂದ ಗೀತಾನಂದ ಫೌಂಡೇಶನ್ (ರಿ) ಮಣೂರು -ಪಡುಕರೆ ಇವರ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ನಡೆದ “ಸಸ್ಯ ಸಂಜೀವಿನಿ” ಕಾರ್ಯಕ್ರಮವನ್ನು ಗಿಡ ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜೇಸಿಐ ಕುಂದಾಪುರ ದ ಅಧ್ಯಕ್ಷ ರಾದ ಜೇಸಿ ಅಶೋಕ್ ತೆಕ್ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಜೇಸಿ ವಲಯ ಹದಿನೈದರ ಗೋ ಗ್ರೀನ್ ಸಂಯೋಜಕರಾದ ಜೇಸಿ ಜಯಚಂದ್ರ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಕೆ. ಎನ್., ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಕಾರ್ಯಕ್ರಮ ನಿರ್ದೇಶಕ ಜೇಸಿ ರವೀಶ್ ಶ್ರೀಯಾನ್, ಶಾಲಾ ಶಿಕ್ಷಕರಾದ ಜಯಲಕ್ಷ್ಮಿ ಬಿ, ಜಯರಾಮ ಶೆಟ್ಟಿ, ವಿಜಯಾ ಅರ್, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಗೌರವ ಶಿಕ್ಷಕರಾದ ಚೈತ್ರಾ ರಾಕೇಶ್, ಪ್ರೀತಿ ಉಪಸ್ಥಿತರಿದ್ದರು. ಜೇಸಿಐ ಕುಂದಾಪುರ ದ ಉಪಾಧ್ಯಕ್ಷ ಜೇಸಿ ಮುತ್ತಾರಿಫ್ ತೆಕ್ಕಟ್ಟೆ ಜೇಸಿ ವಾಣಿ ವಾಚಿಸಿದರು. ಜೇಸಿ ರಾಕೇಶ್ ಶೆಟ್ಟಿ ವಕ್ವಾಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಉಪಯುಕ್ತ ಸಸಿಗಳನ್ನು ವಿತರಿಸಲಾಯ್ತು.