ಗೋವು ಕಳವು 2 ದಿನದಲ್ಲಿ ಪ್ರಕರಣ ಭೇದಿಸಿದ ಪೋಲಿಸರು

ಕುಂದಾಪುರ: ಯಳಜಿತ್ ಗ್ರಾಮದಲ್ಲಿ ಗೋವು ಕಳವು ಪ್ರಕರಣ ಹಿನ್ನಲೆ , ಎರಡೆ ದಿನದಲ್ಲಿ ಐದು ಹಸುಗಳನ್ನು ಪತ್ತೆ ಮಾಡಿದ ಬೈಂದೂರು ಪೋಲಿಸರು. ಕಳವಾಗಿರುವ ದನಗಳು ಕುಂದಾಪುರ ಕಂಡ್ಳೂರಿನ ನದೀಮ್ ಎಂಬವರ ಮನೆ ಸಮೀಪದಲ್ಲಿ ಕಟ್ಟಿಹಾಕಲಾಗಿದೆ ಎಂಬ ಮಾಹಿತಿ ಬೈಂದೂರು ಪೋಲಿಸರಿಗೆ ದೊರೆತಿದ್ದು ಪೋಲಿಸರು ಕಳವಾದ ದನವನ್ನು ಮರಳಿ ದನದ ಮಾಲಿಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದೀಗ ಆರೋಪಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

ಬೈಂದೂರು ಸಮೀಪದ ಯಳಜಿತ್ ಎಂಬಲ್ಲಿಯ ದಾರು ಗೌಡ್ತಿಯವರ ಮನೆಯ ಎರಡು ದನ , ಪಾರ್ವತಿ ಎಂಬವರ ಮನೆಯಿಂದ ಮೂರು ದನ ಸೇರಿದಂತೆ ಒಟ್ಟು ಐದು ದನಗಳನ್ನು ಮಂಗಳವಾರ ತಡರಾತ್ರಿ ವೇಳೆ ದುಷ್ಕರ್ಮಿಗಳು ಕದ್ದೋಯ್ದಿದ್ದರು ಈ ಸಂಧರ್ಭ ಬೈಂದೂರು ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.

ಈ ಪ್ರಕರಣ ಕುರಿತು ಸ್ಥಳಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ, ಗೋವು ಕಳೆದುಕೊಂಡವರಿಗೆ ಸಾಂತ್ವಾನ ಹೇಳಿ ಪರಿಹಾರ ವಿತರಣೆ ಮಾಡಲಾಗಿದೆ. ಗೋವು ಕಳೆದುಕೊಂಡವರ ಆತಂಕಕ್ಕೆ , ಸೂಕ್ತ ಕ್ರಮಕ್ಕೆ ಆದೇಶಿಸುದಾಗಿ ಭರವಸೆ ನೀಡಿದ ಶಾಸಕರು. ಪರಿಹಾರ ವಿತರಣೆ ಬಳಿಕ ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ,

ಇತ್ತಿಚಿಗಿನ ದಿನದಲ್ಲಿ ಗೋವು ಕಳವು ಪ್ರಕರಣ ಹೆಚ್ಚುತ್ತಿದ್ದು, ಹಾಗೇ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಈ ಹಿಂದೆ ಮರಳುದಂಧೆಕೋರರು ಕಂಡ್ಲೂರು ಪೊಲೀಸ್ ಠಾಣೆಗೆ ಕಲ್ಲುಹೊಡೆದಿದ್ದರು, ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈ ವ್ಯವಸ್ಥೆಯಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತಿದೆ. ಕಾನೂನು ದಿನದಿಂದ ದಿನಕ್ಕೆ ಹದಗೆಡುತ್ತಿದೆ, ಹೀಗಾಗಿ ಪೊಲೀಸರು ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಬೇಕು ಎಂದರು

Leave a Reply

Your email address will not be published. Required fields are marked *

error: Content is protected !!