ಹಲಸಿನ ಬೇಳೆ (ಬೀಜ) ಸಾರು
ಹಲಸಿನ ಹಣ್ಣಿನ ಒಳಗೆ ಇರುವ ಹಲಸಿನ ಬೇಳೆ ಬೇಯಿಸಿದರೆ ಅಥವಾ ಸುಟ್ಟು ತಿಂದರೆ ಅತ್ಯಂತ ರುಚಿಕರವಾಗಿದೆ, ಕೇವಲ ಹಲಸಿನ ಹಣ್ಣು ಮಾತ್ರವಲ್ಲ ಹಣ್ಣಿನ ಬೇಳೆಯಿಂದಾನೂ ಖಾದ್ಯ ತಯಾರಿಸಲು ಸಾಧ್ಯ… ಈ ಬೇಳೆಯಿಂದ ಮಾಡುವ ಸಾರು ಸೂಪರ್ ಆಗಿರುತ್ತದೆ ..
ಸಾರು ಮಾಡುವ ಬೇಕಾಗುವ ಸಾಮಗ್ರಿ
ಹಲಸಿನ ಬೇಳೆ -3-4
ಕೊತ್ತಂಬರಿ ಬೀಜ -1/2 ಚಮಚ
ಒಣ ಮೆಣಸು -4-5
ಕಾಯಿ ತುರಿ- 2 ಚಮಚ
ಹುಣಸೆ ಹಣ್ಣು – ಸ್ವಲ್ಪ
ಇಂಗು
ಮಾಡುವ ವಿಧಾನ
ಒಂದು ಕುಕ್ಕರಿನಲ್ಲಿ ಹಲಸಿನ ಬೇಳೆ ಹಾಕಿ ಬೇಯಿಸಿಕೊಳ್ಳಿ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಬಳಿಕ ಅದಕ್ಕೆ 1/2 ಚಮಚ ಕೊತ್ತಂಬರಿ ಬೀಜ, ಇಂಗು ಹಾಕಿ ಹುರಿದುಕೊಳ್ಳಿ , ಒಂದು ಮಿಕ್ಸಿ ಜಾರಿಗೆ ಹುರಿದ ಮಿಶ್ರಣ ಸ್ವಲ್ಪ ಕಾಯಿ ತುರಿ, ಹುಣಸೆ ಹಣ್ಣು ಹಾಗು ಬೇಯಿಸಿದ ಬೇಳೆಯನ್ನ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಒಂದು ಬಾಣಲೆಗೆ ರುಬ್ಬಿಕೊಂಡ ಮಿಶ್ರಣವನ್ನ ಹಾಕಿ ಎಷ್ಟು ಬೇಕು ಅಷ್ಟು ನೀರನ್ನ ಸೇರಿಸಿಕೊಂಡು ,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ , (ಸಿಹಿ ಬೇಕಾದಲ್ಲಿ ಸ್ವಲ್ಪ ಬೆಲ್ಲ ಸೇರಿಸಿಕೊಳ್ಳಬಹುದು) ಚೆನ್ನಾಗಿ ಕುದಿಸಿ ನಂತರ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಿ ಒಲೆಯಿಂದ ಕೆಳಗೆ ಇಳಿಸಿ, ನಂತರ ಒಗ್ಗರಣೆ ಸೌಟಿಗೆ ಸ್ವಲ್ಪ ಎಣ್ಣೆ/ತುಪ್ಪ ಹಾಕಿ ಉದ್ದಿನಬೇಳೆ, ಸಾಸಿವೆ ಕಾಳು, ಕರಿಬೇವು ಹಾಕಿ ಇದರ ಜೊತೆ 7 ಎಸಳು ಬೆಳ್ಳುಳಿ ಹಾಕಿ ಒಗ್ಗರಣೆ ಮಾಡಿಕೊಂಡು ಬಿಸಿ ಬಿಸಿ ಸಾರಿಗೆ ಹಾಕಿದರೆ ರುಚಿಕರವಾದ ಹಲಸಿನ ಬೇಳೆಯ ಸಾರು ಸವಿಯಲು ರೆಡಿ ಇದರ ಜೊತೆಗೆ ಹಪ್ಪಳ ಅಥವಾ ಸಂಡಿಗೆ ಹುರಿದುಕೊಂಡರೆ ನಿಮ್ಮ ಊಟಕ್ಕೆ ಇನ್ನಷ್ಟು ಸೊಗಸು ಸಿಗುತ್ತದೆ
ಪದ್ಮಾವತಿ ಅಚ್ಚುತ ಹಂದೆ
ಮಣೂರು