ದೇವರು ಇದ್ದಾನೆಯೇ?
ದಾರಿಯಲ್ಲಿ ನಡೆಯುವಾಗ ಕಾಲಿಗೆ ಕಲ್ಲುತಾಗಿ ನೋವುಂಟಾದಾಗ ನಾನು ಹೇಳಿದ ಮಾತು “ದೇವರೇ!”.ನಾನು ಏನೋ ನಿರೀಕ್ಷೆಯಲ್ಲಿದು ಇನ್ನು ಏನೋ ನಡೆದಾಗ, ಬಾಯಿಂದ ಹೊರಡುವ ಪದ ” ದೇವರೇ!”. ತರಗತಿಗೆ ಪ್ರಥಮ ಬರಬೇಕಿದೆ ವಿಷಯದಲ್ಲಿ ನಾನು ವಿಫಲನಾದಾಗಲು “ದೇವರೇ!” ಎಂದು ಉಧ್ಗರಿಸುತ್ತೆನೆ. ಪ್ರತಿ ಬಾರಿ ಒಂದೇ ಕೂಗು, ಅದೇ ಪದಗಳು….” ದೇವರೇ!”.
ನಾನು ಪ್ರತಿ ಬಾರಿ ಅಳಲು ಯಾರಾದರೂ ಬಂದು ನನ್ನನು ಸಂತಹಿಸುದನು ಕಾಣೆ. ನಾನು ಕರೆದ ತಕ್ಷಣ ಓಡಿ ಬರುವ ನನ್ನ ತಂದೆಯಂತೆ, ನಾನು “ದೇವರೇ!” ಎಂದೊಡನೆ ಯಾರಾದರೂ ಬಂದಿರುವುದನ್ನು ಇಂದಿನವರೆಗೂ ಕಂಡಿಲ್ಲ.
ಪ್ರತಿ ದಿನ ಸೂರ್ಯಾಸ್ಥಕೂ ಮುನ್ನ ಏಳುವ ನನ್ನ ತಾಯಿ, ಅವರ ದೈನಂದಿನ ದಿನಚರಿಯ ಪ್ರಾರಂಭಕು ಮೊದಲು ತಾನು ದೇವರು ಎಂದು ನಂಬಿರುವ ಚಿತ್ರದ ಮುಂದೆ ನಿಂತು ಪ್ರಾರ್ಥಿಸುತ್ತಾರೆ, ದೀಪ ಬೆಳಗುತ್ತಾರೆ. ಸುಮಾರು ೧೫ ನಿಮಿಷಗಳ ಕಾಲ ತನ್ನ ಕುಟುಂಬಕಾಗಿ ಪ್ರಾರ್ಥಿಸುವ ಅವರು ತಮ್ಮ ಸಮಸ್ಯೆಗಳಿಗೆ ಅತ್ತರು ಕೊನೆಯಲ್ಲಿ ನಾನು ಯಾವ ಬದಲಾವಣೆಯನ್ನು ಕಂಡಿಲ್ಲ.
ನಾನು ವಿಷಯಗಳನ್ನು ಅರ್ಥಮಾಡಿಕೊಳಲು ಪ್ರಾರಂಭಿಸಿದ ದಿನದಿಂದ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದೇನೆ, ಅವಲೋಕಿಸುತಿದ್ದೇನೆ. ಆದರೂ ಅವರ ಪ್ರಾರ್ಥನೆಗಳು ಕೊನೆಯಾಗಿಲ್ಲ ಅದಲ್ಲದೇ ಈ ಆಚರಣೆಗಳ್ನು ನನಗು ಅಭ್ಯಾಸ ಮಾಡಿಸಿದಾರೆ. ವರ್ಷಗಳು ಕಳೆದಿದೆ ಆದರೆ ಇನ್ನು ನನ್ನೊಂದಿಗೆ ಕಾಯಲು ಮಾತು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಈಗ ಪ್ರಶ್ನೆಯು ಇನ್ನು ನಿಗೂಢವಾಗಿ ಉತ್ತರಕಾಗಿ ನಾನು ತೆರೆ ಮರೆಯ ಅನ್ವೇಷಣೆಯಲ್ಲಿ ಮುಳುಗಿದೇ.
ಯಾರೋ ಒಬ್ಬರು ನನ್ನ ತಂದೆಯನ್ನು ” ಉದ್ಯೋಗದಲ್ಲಿ ನಿಮ್ಮ ಸಫಲತೆಯ ರಹಸ್ಯ ಏನು?” ಎಂದು ಕೇಳಿದಾಗ ಅವರು “ನನ್ನದೇನು ಇಲ್ಲ, ಎಲ್ಲ ಭಗವಂತನ ಕೃಪೆ” ಎಂದರು. ಯಾರೋ ನನ್ನ ತಾಯಿಗೆ “ನಿಮ್ಮ ಮಗಳು ಇಷ್ಟೊಂದು ಪ್ರತಿಭಾನ್ವಿತೆ ಹೇಗೆ? ” ಎಂದು ಕೇಳಿದಾಗ ಅವರು “ಎಲ್ಲ ದೇವರ ಅನುಗ್ರಹ” ಎಂದು ಉತ್ತರಿಸಿದರು. ಈಗ ನಾನು ಆಲೋಚಿಸುತ್ತಿದ್ದೇನೆ, ನನ್ನ ತಂದೆಯವರು ಬೆಳಿಗ್ಗೆ ಎದ್ದು ಕಚೇರಿಗೆ ತೆರಳುತ್ತಾರೆ, ತಡರಾತ್ರಿ ಮರಳುತ್ತಾರೆ, ಕೆಲವೇ ಘಂಟೆಗಳ ಕಾಲ ನಿದ್ರೆ, ತಮ್ಮ ಹೆಚ್ಚಿನ ಸಮಯವನ್ನು ಕಚೇರಿಯಲ್ಲಿಯೇ ಕಳೆಯುವ ಅವರು “ಎಲ್ಲ ಭಗವಂತನ ಕೃಪೆ” ಎಂದು ಹೇಳುತ್ತಾರೆ. ನನ್ನ ತಾಯಿಯು ಬೆಳಗ್ಗೆ ಎದ್ದು ನನಗೆ ಏನು ಕೊರತೆ ಆಗದಂತೆ ಆಹಾರವನ್ನು ತಯಾರಿಸುತ್ತಾರೆ, ಯಶಶ್ವಿ ಭವಿಷ್ಯವನ್ನು ಹೇಗೆ ಪಡೆಯಬೇಕೆಂದು ನನಗೆ ಸಲಹೆ ಮಾಡಿ ನನ್ನ ಮಗಳು ದೇವರಿಂದ ಮಾತ್ರ ಪ್ರತಿಭಾನ್ವಿತಳು ಎಂದು ಹೇಳುತ್ತಾರೆ.
ಇದು ನಿಜವಾಗಿವು ಸಮರ್ಥನೀಯವೇ? ಇದು ನಿಜಕ್ಕೂ ನ್ಯಾಯೋಚಿತವಾಗಿದೆಯೇ? ಯಾರೋ ಶ್ರಮಿಸಿ ಬೇರೊಬ್ಬರು ಅದರ ಹೊಗಳಿಕೆಯನ್ನು ಪಡೆಯುತ್ತಿರುವುದು. ಪ್ರತಿಯೊಬ್ಬರು ದೇವರು ಎಲ್ಲವನ್ನು ನೋಡುತ್ತಿರುತಾನೆಂದು ಹೇಳುತ್ತಾರೆ, ಇದು ನಿಜವೇ ಆಗಿದ್ದರೆ ದೇವರು ಏಕೆ ನಮ್ಮ ಮುಂದೆ ಬರುವುದಿಲ್ಲ? ನಮ್ಮೊಂದಿಗೆ ಏಕೆ ಸಂವಾದ ಮಾಡುವುದಿಲ್ಲ? ಏಕೆ ನಮ್ಮೊಂದಿಗೆ ಜೀವಿಸುದಿಲ್ಲ? ದೇವರು ನಿಜವಾಗಿಯೂ ಇದ್ದಾನೆ ಅಂತಾದರೆ ಸಮಸ್ಯೆಗಳು ಅದೇ ರಿತಿ ಏಕೆ ಉಳಿದಿವೆ? ಜನರು ಇನ್ನೂ ಅನೇಕ ತೊಂದರೆ ಗಳಿಂದ ಬಳಲುತ್ತಿದ್ದಾರೆ ಏಕೆ?
ಈ ಎಲ್ಲ ವಿಷಯಗಳು ನನಗೆ ಬಹಳಷ್ಟು ಚಿಂತೆಯನುಂಟು ಮಾಡಿತು. ನಾನು ಯೋಚಿಸಲು ಆರಂಭಿಸಿದೆ ನನ್ನ ಕೆಲಸಕ್ಕೆ ಬೇರೆಯರಿಗೋ ಹೊಗಳಿಕೆ ಸಿಗುವುದಾದರೆ ನಾನು ಏಕೆ ಕೆಲಸ ಮಾಡಬೇಕು, ಎಲ್ಲಾ ದೇವರು ನೋಡಿಕೊಳ್ಳುತ್ತಾನೆ. ಅದೇ ಕೆಲವು ಹಂತದಲ್ಲಿ ಯೋಚಿಸಿದೆ, ದೇವರು ಅಸ್ತಿತ್ವದಲ್ಲಿದ್ದರೆ ಅನೇಕ ಸಂಖ್ಯೆಯಲ್ಲಿ ಯಾಕೆ ಇರುತಾನೆ? ಅವನು ಒಬ್ಬನೇ ಯಾಕಾಗಿರಬಾರದು? ಏಕೆ ಅನೇಕ ಧರ್ಮಗಳು? ಮಾನವಕುಲವೆಂಬ ಒಂದು ಧರ್ಮ ಏಕೆ ಅಸ್ತಿತ್ವದಲ್ಲಿ ಇಲ್ಲ? ಅಂತಿಮವಾಗಿ ನಾನು “ದೇವರು ಅಸ್ತಿತ್ವದಲ್ಲಿ ಇಲ್ಲ” ಎಂದು ತೀರ್ಮಾನಿಸಿದೆ.
ನನ್ನ ಜೀವನದಲ್ಲಿ ನಡೆದ ಇನೊಂದು ಸನ್ನಿವೇಶ, ಒಮ್ಮೆ ಯಾರೋ ನನ್ನ ಬಳಿ ಬಂದು ಹೇಳಿದರು “ಮಗು ನೀನು ಒಳ್ಳೆಯ ಕೆಲಸವನ್ನು ಮಾಡಿದೀಯ, ನಿನ್ನ ಹೆತ್ತವರ ಕನಸು ನನಸಾಗಿದೆ, ಅವರು ಪಟ್ಟ ಕಷ್ಟಕೆ ಫಲ ಸಿಕ್ಕಿತು” ಈ ವಾಕ್ಯ ನನ್ನನು ಸಂಪೂರ್ಣವಾಗಿ ವಿಕಸಿತಗೊಳಿಸಿತು. ಯಾರೋ ನನ್ನ ಬಳಿ ಬಂದು ನನ್ನ ಕೆಲಸಕ್ಕೆ ಮೆಚ್ಚುಗೆ ನೀಡಿದರು ಮತ್ತು ಬೇರೆ ಯಾರನ್ನೋ ಹೋಗಳಲಿಲ್ಲ. ಇದು ನನಗೆ ಅತಿ ಸಂತೋಷವನ್ನು ಉಂಟುಮಾಡಿತು, ಯೋಚಿಸುವಂತೆ ಮಾಡಿತು. ನನ್ನ ತಂದೆ ತಾಯಿ ಏಕೆ ಹಾಗೆ ಹೇಳಿದರು ಎಂದು? ನಾನು ಅವರಿಗೆ ಇದನ್ನು ವಿವರಿಸಿದೆ ಅದಕೆ ಅವರು ಪುನಃ “ಮಗು ಎಲ್ಲ ದೇವರ ಆಶೀರ್ವಾದ ನೀನು ನಿನ್ನ ಕೆಲಸ ಮಾಡಿದಿ ದೇವರು ಫಲ ಕೊಟ್ಟಿದಾನೆ ಅಷ್ಟೇ ” .
ನಾನು ಪುನಃ ಯೋಚಿಸಲು ಆರಂಭಿಸಿದೆ ಇದರ ಕೀರ್ತಿ ದೇವರಿಗೆ ಸಲ್ಲಬೇಕಾದದ ಅಥವಾ ನನಗೆ. ಈಗ ನಾನು ಹಲವು ವಿಷಯಗಳನ್ನು ಅರ್ಥ ಮಾಡಿಕೊಂಡೆ , ನನ್ನ ಪೋಷಕರ ಮಾತಿನಂತೇ ದೇವರು ಇದಕೆಲ್ಲ ಎಷ್ಟು ಕಾರಣವೋ, ನನ್ನ ಪರಿಶ್ರಮವೂ ಅಷ್ಟೇ ಪ್ರಾಮುಖ್ಯವಾದದು.
ನಂತರ ಅಂತಿಮವಾಗಿ, ನಾನು ಶಾಂತವಾಗಿ ಅವಲೋಕಿಸಿದೆ , ಹೌದು ದೇವರು ಇದ್ದಾನೆ, ನನ್ನ ತಾಯಿಯ ನಂಬಿಕೆಯಲ್ಲಿ ದೇವರು ಇದ್ದಾನೆ, ನನ್ನ ತಂದೆಯ ಸ್ವಾಭಿಮಾನ ಹಾಗು ಶ್ರಮದಲ್ಲಿ ದೇವರು ಇದ್ದಾನೆ, ನನ್ನ ಪೋಷಕರ ಸಮರ್ಪಣಾಭಾವದಲ್ಲಿ ದೇವರು ಇದ್ದಾನೆ, ನನ್ನ ಗುರಿ ಹಾಗು ಛಲದಲ್ಲಿ ದೇವರು ಇದ್ದಾನೆ. ಈ ನಂಬಿಕೆ, ಸಮರ್ಪಣೆ ಮತ್ತು ಇತ್ಯಾದಿ ಅಂಶಗಳು ಒಂದು ಉತ್ತಮ ಜೀವನಕ್ಕಾಗಿ, ಭವಿಷ್ಯದಲ್ಲಿ ನಾವು ನಂಬಲು ಅಸಾಧ್ಯವಾದ ಸಾಧನೆಗೆ ಸಹಾಯಕವಾಗಲಿದೆ.
ಪ್ರಾರ್ಥನೆಯ ಆ ಕ್ಷಣದಲ್ಲಿ ಏನು ಬದಲಾಗುವುದಿಲ್ಲ, ಆದರೆ ಅದರಲ್ಲಿ ನಂಬಿಕೆ ಇಟ್ಟರೆ ಅದು ನಮಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತದೆ, ನಮ್ಮನು ಸಂತೋಷದ ಕಡೆಗೆ ಕೊಂಡೊಯುತ್ತದೆ. ಹೌದು ದೇವರು ಇದ್ದಾನೆ! ಆದ್ದರಿಂದಲೇ ಪ್ರಾರ್ಥನೆಯು ಫಲಪ್ರದವಾಗುವುದು. ಯಾಕೆ ನಿಮಗೆ ತಿಳಿಯದೆ ದೇವರು ನಿಮ್ಮೊಳಗೆ ಇರಬಹುದು!
-ಮೇಘ ಎಸ್ ಸಾಮಗ