ಕಾಪು ಪೊಲೀಸರ ಕಾರ್ಯಾಚರಣೆ – ನಾಲ್ವರು ಅಂತರ್‌ರಾಜ್ಯ ವಾಹನ ಚೋರರ ಬಂಧನ

ಉಡುಪಿ :    ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2016 ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಟೆಂಪೋ, ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ವಾಹನ ಕಳ್ಳರ ತಂಡವನ್ನು ಬಂಧಿಸಿ ,  ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಕಾಪು ಪೊಲೀಸರು  ಯಶಸ್ವಿಯಾಗಿದ್ದಾರೆ .
ಬಂಧಿತರು ನಕಲಿ ಕೀಗಳನ್ನು ಬಳಸಿ ಕಾರು ಮತ್ತು ಗೂಡ್ಸ್ ವಾಹನಗಳನ್ನು ಕಳ್ಳತನವನ್ನ ಮಾಡಿರುತ್ತಾರೆ  ಜುಲೈ 19 ರಂದು  ಕಾಪು ಠಾಣಾಧಿಕಾರಿ ಜಯ ಮತ್ತು ಸಿಬ್ಬಂದಿಗಳು ಕಟಪಾಡಿ ಚೆಕ್ ಪೋಸ್ಟ್ ನಲ್ಲಿ ಇಂಡಿಕಾ ಕಾರನ್ನು ತಡೆದ್ದಿದ್ದ ಈ ಸಂದರ್ಭ ಕಾರಿನ ಯಾವುದೇ ದಾಖಲೆಯಲಿಲ್ಲದ ಕಾರನ್ನು  ವಶ ಪಡಿಸಿಕೊಂಡಿದ್ದರು .ಈ ಬಗ್ಗೆ ಸಂಶಯಗೊಂಡ ಕಾಪು ಪೊಲೀಸರು ಕಾರಿನಲ್ಲಿದ್ದ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ರಾಜ್ಯದ ವಿವಿಧಡೆ ವಾಹನಗಳನ್ನು ಕಳವುಗೈದ ಬಗ್ಗೆ ಬಾಯಿ ಬಿಟ್ಟಿದ್ದರು .
ಬಂಧಿತರಿಂದ  5 ಬೊಲೆರೋ ಪಿಕಪ್  ವಾಹನ ,5 ಅಶೋಕ್ ಲೇಲ್ಯಾಂಡ್ ದೋಸ್ತ್, 1 ಕ್ವಾಲಿಸ್ ವಾಹನ , ಆರೋಪಿತರು ಕೃತ್ಯದ ಸಮಯ ಬಳಸುತ್ತಿದ್ದ 1 ಟಾಟಾ ಇಂಡಿಕಾ ಕಾರು ,ನಕಲೀ ಕೀಗಳು, 5 ಮೊಬೈಲ್ ಫೋನ್‌ಗಳು ಮತ್ತು ನಕಲಿ ನಂಬರ್ ಪ್ಲೇಟ್‌ಗಳು ವಶಪಡಿಸಿಕೊಂಡಿದ್ದರು.
ಎಲ್ಲಾ  ಸೊತ್ತುಗಳ ಮೌಲ್ಯ 23,75,000/-  ರೂಪಾಯಿಗಳಷ್ಟು ,ಬಂಧಿತ ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸಯ್ಯದ್ ಮಜರ್ ಪಾಷಾ (23) ಚಿಕ್ಕಮಗಳೂರಿನ   ಏನ್ ಆರ್ ಪುರ ತಾಲೂಕಿನ ಕೆ. ಎಲಿಯಾಸ್ ಯಾನೆ ಬಾಬು (58),ಶಿವಮೊಗ್ಗ ಜಿಲ್ಲೆಯ ಸಯ್ಯದ್ ಮೆಹಬೂಬ್ ಪಾಷಾ (57),ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ಜಿಯಾವುಲ್ ಹಕ್ (37) ನ್ಯಾಯಾಂಗ ಬಂಧನಕ್ಕೆ  ಒಳಪಡಿಸಲಾಗಿದೆ.
 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ 10 ದಿನಪೋಲೀಸರ ಕಸ್ಟಡಿಗೆ ನೀಡಲಾಗಿದೆ.
ಕಾಪು ವೃತ್ತ ನಿರೀಕ್ಷಕ  ಮಹೇಶ್ ಪ್ರಸಾದ್ ರವರ ನೇತ್ರತ್ವದ ವಿಶೇಷ ತಂಡದಲ್ಲಿ ,ಕಾಪು ಪಿ.ಎಸ್.ಐ ಕೆ.ಜಯ , ಪ್ರೊಬೇಷನರಿ ಪಿಎಸ್‌ಐ ರವರಾದ ಉದಯರವಿ, ಸದಾಶಿವ ಗವರೋಜಿ, ಮಹದೇವ ಬೋಸ್ಲೆ ಹಾಗೂ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ರಾಜೇಶ್, ರವಿಕುಮಾರ್, ಸುಧಾಕರ್ ಬಿಜೂರು, ಜಗದೀಶ್, ರುದ್ರೇಶ, ಶಶಿಧರ, ರಘು, ಸಂದೇಶ್, ಸಂದೀಪ್ ಶೆಟ್ಟಿ, ರಾಘವೇಂದ್ರ ಜೋಗಿ, ಪ್ರಕಾಶ, ಶರಣಪ್ಪ, ಮಂಜುನಾಥ, ಪರಶುರಾಮ ಹಾಗೂ ರಾಜೇಂದ್ರ ರವರು ಭಾಗವಹಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!