ಪ್ರಾಥಮಿಕ ಶಾಲಾ ಶಿಕ್ಷಕರ ಹಕ್ಕೋತ್ತಾಯ ಒತ್ತಾಯಿಸಿ; ಬೃಹತ್ ಪ್ರತಿಭಟನೆ

ಉಡುಪಿ: ಶಾಲೆ ಮುಚ್ಚಬೇಕು. ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡುವ ಉದ್ದೇಶ ಅಲ್ಲ. ನಮಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಸರ್ಕಾರದ ವತಿಯಿಂದ ಎಲ್ ಕೆಜಿ ಯುಕೆಜಿ ಆರಂಭಿಸಬೇಕು. 20 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ. ಕಾನೂನು ಹೀಗೆ ಮುಂದುವರಿದರೆ ನಾವು ಆರ್ಥಿಕವಾಗಿ ಸಬಲರಾಗಲ್ಲ.

ನಾವೆಲ್ಲರೂ ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಾಮಿಕ ಶಾಲಾ ,ಶಿಕ್ಷಕರ ಸಂಘದ ವತಿಯಿಂದ ನಡೆದ ಬೃಹತ್ ಪ್ರತಿಭಟನೆ ರ್‍ಯಾಲಿಯನ್ನ ಉದ್ದೇಶಿಸಿ ಮಾತನಾಡಿದ ಬೈಂದೂರು ವಲಯಧ್ಯಕ್ಷ ವಿಶ್ವನಾಥ ಪೂಜಾರಿ.

ಇಂದು ಸರ್ಕಾರಕ್ಕೆ ಒತ್ತಾಯಿಸುವ ಹಕ್ಕೋತ್ತಾಯ ಪತ್ರವನ್ನು ಡಿಡಿಪಿಐ ಮುಖಾಂತರ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

 

ಉಡುಪಿ ತಾಲೂಕು ಅಧ್ಯಕ್ಷರಾದ ಮಂಗಳ ಶೆಟ್ಟಿ ಮಾತನಾಡಿ, ಶಾಲಾ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. 1 ರಿಂದ 5- 6ರಿಂದ 8 ಕ್ಕೆ ಪಾಠ ಮಾಡಲು ಅವಕಾಶ ಕೊಡಬೇಕು. ಪದವೀಧರ ಶಿಕ್ಷಕರು ಹಾಗೂ ನಾವು ಬೇರೆ ಅಲ್ಲ. ಒಟ್ಟಾಗಿ ಹೋರಾಟ ಮಾಡೋಣ. ಮಹಿಳಾ ಶಿಕ್ಷಕರಿಗೂ ಗಂಭೀರ ಸಮಸ್ಯೆ ಇರುತ್ತದೆ. ವೇತನ ಪಟ್ಟಿ ಸಿಗಬೇಕು ಎಂದರು.

ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಧವೀದರ ಶಿಕ್ಷರರೆಂದು ಪರಿಗಣಿಸಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು.

ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು, ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ.ತರಗತಿಯನ್ನು ಪ್ರಾರಂಭ ಮಾಡಬೇಕು, ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿ ಮಾಡಬೇಕು, ವರ್ಷದ ಭಡ್ತಿಗಳನ್ನು ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯವರೆಗೂ ಭಡ್ತಿಯನ್ನು ನೀಡಬೇಕು, ಎಂಬ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೃಹತ್ ರ್‍ಯಾಲಿಯ ಮೂಲಕ ಹಕ್ಕೋತ್ತಾಯ ಮಾಡಲಾಗಿದ್ದು, ಸರ್ಕಾರ ತಕ್ಷಣ ಮೇಲ್ಕಂಡ ಬೇಡಿಗೆ ಸ್ಪಂದಿಸದಿದ್ದಲ್ಲಿ, ಸೆ.೫ ರ ಶಿಕ್ಷರ ದಿನಾಚರಣೆಯನ್ನು ಬಹಿಷ್ಕರಿಸಿ “ವಿಧಾನಸೌಧ ಚಲೋ” ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!