ಭಾರತದ ಬಹು ನಿರೀಕ್ಷಿತ ಚಂದ್ರಯಾನ 2 ಯೋಜನೆ ಯಶಸ್ವಿ

ಶ್ರೀಹರಿಕೋಟಾ: ವಿಶ್ವವೇ ಭಾರತದಂತಹ ತಿರುಗಿ ನೋಡುವಂತೆ ಮಾಡಲು ಇಸ್ರೋ ಮತ್ತೊಮ್ಮೆ ಯಶಸ್ವಿಯಾಗಿದ್ದು, ಭಾರತದ ಬಹು ನಿರೀಕ್ಷಿತ ಚಂದ್ರಯಾನ 2 ಯೋಜನೆ ಯಶಸ್ವಿಯಾಗಿ ನಭಕ್ಕೆ ಚಿಮ್ಮುವ ಮೂಲಕ ಆರಂಭಗೊಂಡಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್ ಯೋಜನೆಯಲ್ಲಿ ಪಾಲ್ಗೊಂಡ ತಂಡವನ್ನು ಅಭಿನಂದಿಸಿದ್ದಾರೆ.

ತಮ್ಮ ಕುಟುಂಬಗಳನ್ನು ಮರೆತು ಕಾರ್ಯ ನಿರ್ವಹಿಸಿದ್ದ ಪರಿಣಾಮ ಯೋಜನೆ ಯಶಸ್ವಿಯಾಗಿದೆ. ಯೋಜನೆ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಸೆಲ್ಯೂಟ್ ಮಾಡುವ ಕರ್ತವ್ಯ ನನ್ನದು ಎಂದರು.

ನಮ್ಮ ಕೆಲಸ ಇಲ್ಲಿಗೆ ಮುಗಿದಿಲ್ಲ ಇದು ಕೇವಲ ಆರಂಭಿಕ ಬಹುದೊಡ್ಡ ಯಶಸ್ವಿಯಾಗಿದ್ದು, ಮುಂದಿನ 24 ಗಂಟೆಗಳ ಕಾಲ ನಮಗೆ ಬಹುಮುಖ್ಯವಾಗಿದೆ. ಭೂ ಕಕ್ಷೆಗೆ ಸೇರಲು ಮಿಷನ್ ಯಶಸ್ವಿಯಾಗಿದ್ದು, ಐತಿಹಾಸ ಪಯಣದ ಆರಂಭವಾಗಿದ್ದು, ಯೋಜನೆ ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಲಿದೆ. ಈ ಯೋಜನೆಗೆ ಇಸ್ರೋ, ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಎದುರು ನೋಡುತಿತ್ತು ಎಂದು ಹೇಳಿದರು.

ಸದ್ಯ ಪಡೆದಿರುವ ಮಾಹಿತಿಯ ಅನ್ವಯ ಎಲ್ಲವೂ ನಿಗದಿಯಂತೆ ನಡೆದಿದೆ. ಮುಂದಿನ ಯೋಜನೆಗೆ ನಮ್ಮ ಕೆಲಸ ಇಂದಿನಿಂದಲೇ ಆರಂಭವಾಗಲಿದೆ. ಈ ಹಿಂದೆ ನಮಗೇ ಸ್ವಲ್ಪ ಹಿನ್ನಡೆ ಆಗಿದ್ದರೂ ಕೂಡ ಮತ್ತೆ ಸ್ಪಿಡ್ ನಲ್ಲಿ ಬೌನ್ಸ್ ಬ್ಯಾಕ್ ಮಾಡಿದ್ದೇವೆ. ಇದು ನಮಗೆ ಬೋನಸ್ ರೀತಿ ಆಗಿದೆ.  ಮುಂದಿನ ಒಂದೂವರೆ ತಿಂಗಳಿನಲ್ಲಿ 15 ಪ್ರಮುಖ ಹಂತಗಳನ್ನು ದಾಟಬೇಕಾಗುತ್ತದೆ. ಈ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!