ಕಾಪು ಎಸ್ಸಿಡಿಸಿಸಿ ಬ್ಯಾಂಕ್ ಸ್ಥಳಾಂತರಗೊಂಡ ನೂತನ ಶಾಖೆ ಉದ್ಘಾಟನೆ
ಉಡುಪಿ : ಮಹಿಳೆಯರು ಸಹಕಾರಿ ಕ್ಷೇತ್ರವನ್ನು ಬೆಳೆಸುವಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸಿದ್ದು ಇವರು ಸ್ವಾಲಂಬನೆಯಾಗಿ ಬದುಕಲು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಇವರಿಗೆ ನೀಡಿದ ಮಾರ್ಗದರ್ಶನವೇ ಇಂದು ನಮ್ಮ ಬ್ಯಾಂಕ್ ಉತ್ತುಂಗಕ್ಕೇರಲು ಸಹಕಾರಿಯಾಗಿದೆ, ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂಎನ್ ರಾಜೇಂದ್ರಕುಮಾರ್ ಕಾಪುವಿನಲ್ಲಿ ಸ್ಥಳಾಂತರಗೊಂಡ ನೂತನ ಶಾಖೆಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕ್ಗಳ ಪುನರುಜ್ಜೀವನಕ್ಕೆ ಕೇಂದ್ರ ಸರಕಾರವು ಸಮಸ್ಯೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗೆ 70 ಸಾವಿರ ಕೋಟಿ ರೂ.ಅನುದಾನವನ್ನು ಬಿಡುಗಡೆಗೊಳಿಸಿದೆ ಆದರೆ ಸಹಕಾರಿ ರಂಗವು ಯಾವುದೇ ಅನುದಾನವನ್ನು ಸರ್ಕಾರದಿಂದ ಪಡೆದುಕೊಳ್ಳದೇ ನಡೆಸಿಕೊಂಡು ಹೋಗುತ್ತಿರುವ ಸಹಕಾರಿ ಸಂಸ್ಥೆ ಎಂದು ಈ ಸಂದರ್ಭ ಹೇಳಿದರು.
ಪ್ರಜಾಪ್ರಭುತ್ವ ಅಡಿಯಲ್ಲಿ ಜನರಿಗಾಗಿ ಜನರಿಗೋಸ್ಕರ ಇರುವ ಬ್ಯಾಂಕ್ ಎಂದರೆ ನಮ್ಮ ಸಹಕಾರಿ ಬ್ಯಾಂಕ್ ಆಗಿದೆ ಎಂದರು. ಕಾಪುವಿನ ಶ್ರೀನಾರಾಯಣಗುರು ಕಾಂಪ್ಲೆಕ್ಸ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ನೂತನ ಸ್ಥಳಾಂತರಗೊಂಡ ಶಾಖೆಯನ್ನು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಉದ್ಘಾಟಿಸಿದರು.
ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಕಾಪು ಕ್ಷೇತ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶೋಭಾ ಪೂಜಾರಿ, ಕಾಪು ಬಿಲ್ಲವರ ಸಹಾಯಕ ಸಂಘ ಅಧ್ಯಕ್ಷ ವಿಕ್ರಂ ಕಾಪು, ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ , ದೇವಿಪ್ರಸಾದ್ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರವೀಣ್ ಬಿ.ನಾಯಕ್, ಶಾಖಾ ವ್ಯವಸ್ಥಾಪಕ ಪ್ರಬೋಧಚಂದ್ರ ಉಪಸ್ಥಿತರಿದ್ದರು.