ಶ್ರೀ ಮಹಾಲಕ್ಷ್ಮೀ ಸನ್ನಿಧಾನವೇ ಮೊಗವೀರರ ‘ಶ್ರದ್ಧಾ ಭಕ್ತಿ’ಯ ‘ಕಡಲು’

ಪಡುಬಿದ್ರಿ, ಆ. 25: ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನವೇ ಮೊಗವೀರ ಜನಾಂಗದ ‘ಶ್ರದ್ಧಾಭಕ್ತಿ’ಯ ‘ಕಡಲು’ ಎನಿಸಿದೆ. ಆಧ್ಯಾತ್ಮವು ಸಂಪೂರ್ಣವಾಗಿ ನೆಲೆಯೂರಿರುವ ಭಾರತದಲ್ಲಿ ಭಕ್ತಿಯೇ ಪ್ರಧಾನವಾಗಿದ್ದು ಗಂಗಾ ಮಾತೆಯನ್ನು ಆಶ್ರಯಿಸಿ ಜೀವಿಸುವ ಇಲ್ಲಿನ ನಮ್ಮ ಮೊಗವೀರ ಜನಾಂಗದ ಆಧ್ಯಾತ್ಮಿಕ, ಸಾಂಕ ಪರಿಶ್ರಮದಿಂದ ಈ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕಾರ್ಯಗಳು ಸಾಂಗವಾಗಿ ನರವೇರುವುದಾಗಿ ಹಾವೇರಿ ಜಿಲ್ಲೆ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶಾಂತಭೀಷ್ಮ ಮಹಾಸ್ವಾಮಿಗಳು ನುಡಿದರು. 

ಅವರು ಆ. 25ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಜರಗಿದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಶಿಲಾ ಮುಹೊರ್ತ, ಕಾಷ್ಟ ಮುಹೂರ್ತ ಹಾಗೂಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯ ಮೂಲಕ ನಿರ್ಮಾಣವಾಗಲಿರುವ ಸುಮಾರು 10ಕೋಟಿ ರೂ. ಗಳ ವೆಚ್ಚದ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚಿಸಿ ಮಾತನಾಡಿದರು. 

ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ಕೇಂದ್ರ ಸರಕಾರದ ಅಧೀನ ತಮ್ಮ ಸಂಸ್ಥೆಯು ಕೆಲವೊಂದು ಕಾನೂನು ಚೌಕಟ್ಟಿನೊಳಗೆ ಸಮಾಜಮುಖಿಯಾಗಿ ತನ್ನ ಸಿಎಸ್‌ಆರ್ ನಿದಿಯನ್ನು ವಿನಿಯೋಗಿಸುತ್ತಿರುತ್ತದೆ. 7.5ಕೋಟಿ ರೂ. ಗಳನ್ನು ಸಮುದಾಯ ಭವನ ನಿರ್ಮಾಣಕ್ಕಾಗಿ ಈಗಾಗಲೇ ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚಿನ ಸಹಕಾರವನ್ನು ತಾನು ನೀಡುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿದರು. 

ಮುಖ್ಯ ಅತಿಥಿಗಳಾಗಿದ್ದ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕಾಗಿ ಮೊಗವೀರ ಜನಾಂಗದ ಜನನಾಯಕ ಡಾ ಜಿ. ಶಂಕರ್ ಸಹಿತದ ನಿಯೋಗದೊಂದಿಗೆ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗೋಣ. ಸರಕಾರದ ಅನುದಾನವನ್ನು ಯಾಚಿಸೋಣವೆಂದರು. 

ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅದಾನಿ ದಕ್ಷಿಣ ಭಾರತ ಸಮೂಹದ ಅಧ್ಯಕ್ಷ ಕಿಶೋರ್‌ಆಳ್ವ, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮುಂಬಯಿ ಮೊಗವೀರ ಬ್ಯಾಂಕ್‌ನ ಸದಾನಂದ ಕೋಟ್ಯಾನ್ ಮತ್ತಿತರರು ಮಾತನಾಡಿದರು. 

ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇ ಮೂ ರಾಘವೇಂದ್ರ ತಂತ್ರಿ, ಪ್ರಧಾನ ಅರ್ಚಕರಾದ ವೇ ಮೂ ರಾಘವೇಂದ್ರ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ರಮೇಶ್ ಬಂಗೇರ, ಬೆಂಗಳೂರು ಮೊಗವೀರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಕೋಟ ಗೀತಾನಂದ ೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಮಂಗಳೂರು ಟ್ರಾಲ್‌ಬೋಟ್ ಯೂನಿಯನ್‌ಅಧ್ಯಕ್ಷ ನಿತಿನ್ ಕುಮಾರ್, ಉದ್ಯಮಿಗಳಾದ ಲೋಕನಾಥ ಬೋಳಾರ್, ಭುವನೇಂದ್ರ ಕಿದಿಯೂರು, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಶಾಖಾಧ್ಯಕ್ಷ ಕೆ. ಕೆ. ಕಾಂಚನ್, ದ.ಕ., ಮೊಗವೀರ ಮಹಿಳಾ ಸಂಘದ ಗೌರವಾಧ್ಯಕ್ಷೆ ಸರಳಾ ಕಾಂಚನ್, ಮೊಗವೀರ ಮಹಾಜನ ಸಂಘದ ಮಾಜಿಅಧ್ಯಕ್ಷ ಕೇಶವ ಕುಂದರ್, ಸುಧಾಕರ ಕುಂದರ್, ಹರಿಯಪ್ಪ ಕೋಟ್ಯಾನ್, ಮೋಹನ್ ಬಂಗೇರ, ವಿನಯ ಕರ್ಕೇರ, ಕೀರ್ತಿರಾಜ್‌ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. 

ಮಲ್ಪೆ ಮೀನುಗಾರರ ಸಂಘದ ಮೂಲಕ ಸಮಗ್ರ ಜೀಣೋದ್ಧಾರ ಸಂಕಲ್ಪಗಳಿಗೆ ನೀಡಲಾದ ಮೊದಲ ಹಂತದ 1ಕೋಟಿ ರೂ. ಗಳ ದೇಣಿಗೆ, ದ.ಕ., ಮೊಗವೀರ ಮಹಿಳಾ ಮಹಾಜನ ಸಂಘದ ದೇಣಿಗೆಯಾದ 5ಲಕ್ಷ ರೂ., ಮೊಗವೀರ ಹಿತಸಾಧನಾ ವೇದಿಕೆಯಿಂದ ನೀಡಲಾದ 5ಲಕ್ಷರೂ.,  ಉಳ್ಳಾಲ ವ್ಯಾಘ್ರ ಚಾಮುಂಡಿ ದೇಗುಲದ 25ಲಕ್ಷ ರೂ. ಸಹಿತದ ಕೆಲವಾರು ದೇಣಿಗೆಗಳನ್ನು ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ ಜಿ. ಶಂಕರ್  ಮೂಲಕ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್ ಹಾಗೂ ದ.ಕ., ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ಬೆಳ್ಳಂಪಳ್ಳಿ ಅವರಿಗೆ ಹಸ್ತಾಂತರಿಸಲಾಯಿತು. 

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ ಜಿ.ಶಂಕರ್ ಪ್ರಸ್ತಾವಿಸಿದರು. ದ.ಕ., ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ. ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ಚಂದ್ರೇಶ್‌ಪಿತ್ರೋಡಿ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು. ಆರಂಭದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಶಿಲಾ ಮುಹೂರ್ತ, ಕಾಷ್ಟ ಮುಹೂರ್ತಗಳು ನಡೆದು ಆ ಬಳಿಕ ಮೊಗವೀರ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. 

Leave a Reply

Your email address will not be published. Required fields are marked *

error: Content is protected !!